ರಾಜೀವನಗರದಲ್ಲಿ ಚಿಣ್ಣರ ಕಲರವ ಕನ್ನಡ ನುಡಿ ಕಂದ ಚಿಲಿಪಿಲಿ ಶ್ರೀಗಂಧ!!

ಪ್ರಾಥಮಿಕ ಶಾಲಾ ಅಸ್ಥಿತ್ವವನ್ನು ಉಳಿಸಿ ಬೆಳೆಸುವಲ್ಲಿ, ಮಕ್ಕಳ ದಾಖಲಾತಿಗೆ ಪೂರಕವಾದ ಅಂಗನವಾಡಿ ಪುಟನೆಗಳ ಕಮ್ಮಟದ ಆಯೋಜನೆ ಶ್ಲಾಘನೀಯವಾಗಿದೆ. ಗ್ರಾಮೀಣ ಪರಿಸರದ ಅಂಗನವಾಡಿ ಮಕ್ಕಳನ್ನು ಒಂದೆಡೆ ಸೇರಿಸಿ, ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆಲ್ಲಬೇಕು ಆಗ ಮಾತ್ರ ಮಕ್ಕಳ ಸುಧಾರಣೆ ಸಾಧ್ಯ ಮತ್ತು ಕನ್ನಡ ಶಾಲೆ ಉಳಿಸಲು ಸಾಧ್ಯ ಎಂದು ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಇಲಾಖೆ DDPI ಮಾನ್ಯ ಗಣಪತಿ ಕೆ ಇವರು ಕನ್ನಡ ನುಡಿ ಕಂದ ಚಿಲಿಪಿಲಿ ಶ್ರೀಗಂಧ ಕಮ್ಮಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಪ್ರಕಾಶ್ ಶೆಣೈ ಪರ್ಕಳ, ಶ್ರೀ ಗುರುಮೂರ್ತಿ ಉಪನ್ಯಾಸಕರು ಎಂಐಟಿ ಮಣಿಪಾಲ, ಶ್ರೀಮತಿ ವಂದನಾ ರೈ ರಾಜ್ಯ ಸಂಪನ್ಮೂಲ ವ್ಯಕ್ತಿಗಳು, ಕಾರ್ಕಳ, ಶ್ರೀಮತಿ ಹರಿಣಾಕ್ಷಿ ದಿವಾಕರ್ ಶೆಟ್ಟಿ ಅಲೆವೂರು, ಶ್ರೀ ಶಂಕರ್ ದಾಸ್ ಜನಪದ ಕಲಾವಿದರು, ಶ್ರೀ ಉಪೇಂದ್ರ ನಾಯಕ್, ಶ್ರೀ ಪ್ರಕಾಶ್ ಪ್ರಭು, ಶ್ರೀ ರವೀಂದ್ರ ಕುಮಾರ್, ಭಾಗವಹಿಸಿದ್ದರು.

ಅಧ್ಯಕ್ಷತೆಯನ್ನು ಶ್ರೀ ರವಿ .ಕೆ ಎಸ್.ಡಿ.ಎಂ.ಸಿ ವಹಿಸಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಬಾಲಕೃಷ್ಣ.ಪಿ ಸ್ವಾಗತಿಸಿದರು. ಶ್ರೀ ಕೃಷ್ಣ ನಾಯಕ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ವಂದಿಸಿದರು.

ಶ್ರೀಮತಿ ಸತ್ಯವತಿ ಮತ್ತು ಶ್ರೀ ಎಸ್ ಎಸ್ ಪ್ರಸಾದ್ ಕಾರ್ಯಕ್ರಮ ಸಂಯೋಜಿಸಿದರು.

 
 
 
 
 
 
 
 
 
 
 

Leave a Reply