ರಾಕ್ ಕರ್ನಾಟಕ ಸಂಘದ ವತಿಯಿಂದ ಯು.ಎ.ಇ. ಯಲ್ಲಿ ರಕ್ತದಾನ ಶಿಬಿರ

ರಾಕ್ ಕರ್ನಾಟಕ ಸಂಘವು ರಾಸ್ ಅಲ್ ಖೈಮಾ ಯು. ಎ.ಇ. ಯ ಸಕರ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಶುಕ್ರವಾರ 15 ಮಾರ್ಚ್ 2024 ರಂದು ಆಯೋಜಿಸಿತ್ತು. ಇದರ ನೇತೃತ್ವವನ್ನು ಡಾ.ಲೇಖಾ, ರಮೇಶ್ ರಂಗಪ್ಪ ಹಾಗೂ ಸಮಿತಿಯ ಸರ್ವ ಸದಸ್ಯರು ವಹಿಸಿದ್ದರು. ಒಟ್ಟಿಗೆ ಐವತ್ತೆರಡು ಸಕ್ರಿಯ ದಾನಿಗಳು ಪಾಲ್ಗೊಂಡಿದ್ದು ಯಶಸ್ವಿ ಮೂವತ್ತೈದು ದಾನಿಗಳಿಂದ ಒಟ್ಟು 35 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿ. ರಕ್ತ ದಾನ ಮಾಡಿದ ಎಲ್ಲರಿಗೂ ರಾಕ್ ಕರ್ನಾಟಕ ಸಂಘದ ಅಧ್ಯಕ್ಷರಾದ ಕಡ್ತಲ ಸಂತೋಷ್ ಹೆಗ್ಡೆಯವರು ಅಭಿನಂದನೆಯನ್ನು ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply