Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ಲೋಕ ಕಲ್ಯಾಣಾರ್ಥವಾಗಿ ಲಾಸ್ ಏಂಜಲೀಸ್ ನಗರದಲ್ಲಿ ನಡೆದ ಮಹಾರುದ್ರಯಾಗ

ದಿನಾಂಕ-30-11-2022 ಅಮೇರಿಕಾದ ಲಾಸ್ ಏಂಜೆಲಿಸ್ ನಗರದಲ್ಲಿರುವ ಶ್ರೀ ವೇಂಕಟಕೃಷ್ಣ ವೃಂದಾವನದಲ್ಲಿ ಶ್ರೀಪುತ್ತಿಗೆ ಶ್ರೀಪಾದರ ಸಾರಥ್ಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಂಕಲ್ಪಿಸಿದ ಮಹಾರುದ್ರಯಾಗವು ಇಂದು ನೂರಾರು ಋತ್ವಿಜರ ಸಹಯೋಗದಲ್ಲಿ,ಭಕ್ತವೃಂದದ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕ್ಷೇತ್ರದ ಪ್ರಧಾನ ಅರ್ಚರಾದ ಶ್ರೀ ಜ್ಞಾನಮೂರ್ತಿ ಭಟ್ ಇವರ ಸಾರಥ್ಯ ಹಾಗೂ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯರ ಪ್ರಧಾನ ಅಧ್ವರ್ಯುತ್ವ ಮತ್ತು ಮಠದ ಬೇರೆ ಶಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹತ್ತಾರು ಅರ್ಚಕರುಗಳ ಸಹಕಾರ ಮತ್ತು ಭಾಗವಹಿಸುವಿಕೆಯಿಂದ ಯಾಗವು ಯಶಸ್ವಿಯಾಗಿ ಸಂಪನ್ನವಾಯಿತು .

ಸಾವಿರಾರು ಭಕ್ತರು ಈ ಯಾಗಕ್ಕೆ ಸಾಕ್ಷಿಯಾಗಿ,ಪ್ರಸಾದ ರೂಪವಾಗಿ ಉಡುಪಿ ಶೈಲಿಯ ಭೋಜನವನ್ನು ಸ್ವೀಕರಿಸಿ ರುದ್ರದೇವರ ಹಾಗೂ ಗುರುಗಳ ವಿಶೇಷ ಅನುಗ್ರಹಕ್ಕೆ ಪಾತ್ರರಾದರು.

ಅಲ್ಲದೆ ನಗರದ ಸೆನೆಟ್ ಜಾಕಿ ಆರ್ವಿನ್ ಯಾಗದಲ್ಲಿ ಭಾಗವಹಿಸಿ,ಮಠದ ಕಾರ್ಯವೈಖರಿ, ಸಮುದಾಯಕ್ಕೆ ಶ್ರೀಪಾದರ ಕೊಡುಗೆ ಹಾಗೂ ಅವರ ಸಮಾಜಮುಖಿ ಕಾರ್ಯವನ್ನು ವಿಶೇಷವಾಗಿ ಶ್ಲಾಘಿಸಿದರು. ಅಲ್ಲದೆ ಶ್ರೀಪಾದರಿಂದ ಕೋಟಿ ಗೀತಾಲೇಖನ ಯಜ್ಞದ ದೀಕ್ಷೆ ಪಡೆದುಕೊಂಡಿದ್ದು ವಿಶೇಷವಾಗಿತ್ತು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!