ಇತಿಹಾಸದ ಪುಟ ಸೇರಲಿದೆ ಜಪಾನ್‌ನ 20 ಶತಕೋಟಿ ಡಾಲರ್ ವೆಚ್ಚದ ತೇಲುವ ಏರ್‌ಪೋರ್ಟ್!

ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದ ಜಪಾನ್ 20 ಶತಕೋಟಿ ಡಾಲರ್‌ಗಳನ್ನು ವ್ಯಯಿಸಿ ಸಮುದ್ರದ ಮಧ್ಯ ಭಾಗದಲ್ಲಿ ನಿರ್ಮಿಸಿದ್ದ ವಿಶ್ವದ ಅಂತ್ಯಂತ ದುಬಾರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕನ್ಸಾಯ್ ಇದೀಗ ಮುಳುಗುತ್ತಿದೆ.

ಏಷ್ಯಾದ 30 ನೇ ಜನನಿಬಿಡ ವಿಮಾನ ನಿಲ್ದಾಣವಾಗಿ ಇದು ಪ್ರಸಿದ್ದ ಪಡೆದಿದ್ದು ಜಪಾನ್‌ನಲ್ಲಿ ಮೂರನೇ ಜನನಿಬಿಡ ವಿಮಾನ ನಿಲ್ದಾಣ ಇದಾಗಿದೆ. ಕನ್ಸಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಪೂರ್ಣ ಕೃತಕ ದ್ವೀಪದಲ್ಲಿ ನಿರ್ಮಾಣವಾಗಿದೆ. ಇದನ್ನು ನಿರ್ಮಿಸಲು 20 ಶತಕೋಟಿ ಡಾಲರ್‌ಗಳನ್ನ ವ್ಯಯಿಸಲಾಗಿದೆ. ಸೆಪ್ಟೆಂಬರ್ 4, 1994 ರಂದು ಇದನ್ನು ಲೋಕಾರ್ಪಣೆಗೊಳಿಸಲಾಗಿದ್ದು 2016 ರಲ್ಲಿ 25.2 ಮಿಲಿಯನ್ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸಿ ದಾಖಲೆ ನಿರ್ಮಾಣ ಮಾಡಿದ್ದರು. ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ಹಾರಿಸುವ ಮೂಲಕ ವಿಶ್ವದ ಎಲ್ಲ ಪ್ರಮುಖ ಸ್ಥಳಗಳಿಗೆ ಸಂಪರ್ಕ ಹೊಂದಿತ್ತು. ಸಮುದ್ರದ ಮಧ್ಯದಲ್ಲಿ ಇದು ಕಾರ್ಯಾಚರಿಸುವುದರಿಂದ ಜನಸಂದಣಿಯನ್ನು ಕಡಿಮೆ ಮಾಡುವಲ್ಲೂ ಸಹಕಾರಿಯಾಗಿತ್ತು. ಆದ್ರೆ ಇದೀಗ ನಿಧಾನವಾಗಿ ಮುಳುಗಡೆಯಾಗುತ್ತಿರುವುದು ಜಪಾನ್ ಸರ್ಕಾರಕ್ಕೂ ಚಿಂತೆಗೀಡು ಮಾಡಿದೆ. ಈ ತೇಲುವ ದ್ವೀಪದ ಸರಕು ಮತ್ತು ಕಟ್ಟಡಗಳ ತೂಕ ಸಮುದ್ರತಳದ ಹೂಳ ಸಂಕುಚಿತಗೊಳಿಸುತ್ತಿದ್ದು ದ್ವೀಪದ ಮುಳುಗುವಿಕೆಗೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.1994 ರಲ್ಲಿ ಪ್ರಾರಂಭವಾದ ಏರ್‌ಪೋರ್ಟ್ 2018 ರ ವೇಳೆಗೆ 38 ಅಡಿಗಷ್ಟು ಮುಳುಗಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಿಲ್ದಾಣದ ಟರ್ಮಿನಲ್‌ಗಳನ್ನು ರಕ್ಷಿಸಲು ಸಮುದ್ರದ ತಡೆಗೋಡೆ ಏರಿಸಲು ಮತ್ತೊಂದು 150 ದಶಲಕ್ಷ ಡಾಲರ್ ಹಣ ಸುರಿಯಲಾಯಿತು, ಆದಾಗ್ಯೂ ಕೆಲವೇ ವರ್ಷಗಳಲ್ಲಿ ವಿಮಾನ ನಿಲ್ದಾಣವು ಸಂಪೂರ್ಣವಾಗಿ ಸಮುದ್ರದೊಳಗೆ ಹೋಗಿ ಶಾಶ್ವತವಾಗಿ ಕನ್ಸಾಯ್ ಅಂತರಾಷ್ಟ್ರೀಯವಿಮಾನ ನಿಲ್ದಾಣ ಕಣ್ಮರೆಯಾಗಿ ಇತಿಹಾಸದ ಪುಟ ಸೇರಲಿದೆ

 
 
 
 
 
 
 
 
 
 
 

Leave a Reply