ವಿದ್ಯೋದಯ ಪಬ್ಲಿಕ್ ಸ್ಕೂಲ್ : ಪರ್ಯಾಯ ಸಂಭ್ರಮ

ಉಡುಪಿ : ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸಂಸ್ಥೆ ವಿದ್ಯೋದಯ ಪಬ್ಲಿಕ್ ಸ್ಕೂಲ್ ನಲ್ಲಿ ಜನವರಿ 12, 2024 ರಂದು ಉಡುಪಿಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಬ್ಬ ಪರ್ಯಾಯ ಉತ್ಸವದ ಚಟುವಟಿಯನ್ನು ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿತ್ತು. ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಪಿ ರಾಜ್ ಅವರ ಮಾರ್ಗದರ್ಶನದಲ್ಲಿ ವಿದ್ಯೋದಯ ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ಶ್ರೀಮತಿ ರೂಪ ಬಲ್ಲಾಳ್ ಅವರ ನೇತೃತ್ವದಲ್ಲಿ ಶಂಖನಾದದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಮೆರವಣಿಗೆಯಲ್ಲಿ ತಟ್ಟಿರಾಯ, ಕಲಶ, ದೀಪ, ತಾಳ ಭಜನೆ, ಹುಲಿ ಕುಣಿತ, ಮನಮೋಹಕ ನವಿಲು ಕುಣಿತ ಮುಂತಾದ ಸಾಂಪ್ರದಾಯಿಕ ಅಂಶಗಳಿದ್ದವು.

ವಿದ್ಯಾರ್ಥಿಗಳು ದುರ್ಗಾದೇವಿ, ರಾಮ, ವಿಷ್ಣು, ಪರಶುರಾಮ, ಹನುಮಂತ, ಕೃಷ್ಣ, ವಿಶ್ವರೂಪ, ಮೊದಲಾದ ವೇಷಭೂಷಣಗಳೊಂದಿಗೆ ಮೆರವಣಿಗೆಯ ಅಂದವನ್ನು ಹೆಚ್ಚಿಸಿದ್ದರು. ಪರ್ಯಾಯ ಉತ್ಸವದಲ್ಲಿ ಆಚರಿಸಲಾಗುವ ವಿಧಿವಿಧಾನಗಳನ್ನು ಅಷ್ಟ ಯತಿಗಳಾಗಿ ವಿದ್ಯಾರ್ಥಿಗಳು ನಿರ್ವಹಿಸಿ ಸಾಂಕೇತಿಕ ಪರ್ಯಾಯ ದರ್ಬಾರ್‌ನಲ್ಲಿ ಭಾಗವಹಿಸಿದರು. ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕಿ ಶ್ರೀಮತಿ ಲತಾ ಆರ್ ನಾಯಕ್ ಅವರು ಪರ್ಯಾಯದ ಮಹತ್ವವನ್ನು ವಿವರಿಸಿದರು.

 
 
 
 
 
 
 
 
 
 
 

Leave a Reply