ಗುಂಡ್ಮಿ- ಯಕ್ಷಗಾನ ಪ್ರದರ್ಶನದಲ್ಲಿ ನಿರ್ದೇಶನ ಅತೀ ಅಗತ್ಯ – ಜಿ. ರಾಮಚಂದ್ರ ಐತಾಳ ಕೋಟ

ಕೋಟ: ಇಂದಿನ ಕಾಲಮಿತಿ ಯಕ್ಷಗಾನ ಪ್ರದರ್ಶನಗಳು, ನಾಟಕ ಸಿನಿಮಾಗಳಂತೆ ನಿರ್ದೇಶನ ನೀಡುವ ರೀತಿಯಲ್ಲಿ ಒಳಪಡಿಸಿ ಪ್ರದರ್ಶಿಸಿದಲ್ಲಿ ಪ್ರಸಂಗಕರ್ತನ ಆಶಯ ಹಾಗೂ ಗುಣಮಟ್ಟ ಶ್ರೇಷ್ಟ ವಾಗಿರುತ್ತದೆ. ಎಂದು ಬ್ರಹ್ಮಾವರ ತಾಲೂಕು ಕ.ಸಾ.ಪ. ಅಧ್ಯಕ್ಷ ಜಿ.ರಾಮಚಂದ್ರ ಐತಾಳ ಹೇಳಿದ್ದಾರೆ
ಸಾಲಿಗ್ರಾಮ ಗುಂಡ್ಮಿಯ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಶ್ರೀ ಸದಾನಂದ ರಂಗ ಮಂಟಪದಲ್ಲಿ ಮೇ ೨೮ ರಂದು ಜರುಗಿದ ಯಕ್ಷಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗ ಕೋಟ ಇವರ ಪ್ರಾಯೋಜಕತ್ವದ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಕಾರದೊಂದಿಗೆ ನೆರವೇರಿದ ” ಯಕ್ಷ ಮುದ್ರಿಕಾ ” ಪರಂಪರೆಯ ನೋಟ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಯಕ್ಷಗಾನಕ್ಕೆ ಹೆಚ್ಚಿನ ಬೇಡಿಕೆಗಳು ವ್ಯಕ್ತವಾಗುತ್ತಿದ್ದು ಯುವ ಮನಸ್ಸುಗಳಿಗೆ ಕಲಾಧಾರೆಯನ್ನು ಧಾರೆಯಾಗಿ ನೀಡುವ ಕಾಯಕ ಯಕ್ಷಗುರುಗಳಿಂದ ಆಗುತ್ತಿರುವುದು ಸ್ವಾಗತಾರ್ಹ, ಯಕ್ಷಗಾನ ಮೌಲ್ಯ ಹೆಚ್ಚಿಸುವ ಜೊತೆಗೆ ಸಾಂಪ್ರದಾಯಿಕ ನಡೆಯ ಯಕ್ಷಗಾನವನ್ನು ನಿರಂತರವಾಗಿ ಪ್ರದರ್ಶಿಸುತ್ತಿರುವ ಯಕ್ಷಾಂತರoಗ ಕಲಾವಿದರು ಅಭಿನಂದನಾರ್ಹರು, ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮೊದಲಿಗೆ ಇತ್ತೀಚಿಗೆ ಆಕಸ್ಮಿಕವಾಗಿ ಮರಣ ಹೊಂದಿದ ಯಕ್ಷಾಂತರoಗ ಸಂಸ್ಥೆಯ ಸಹ ಕಲಾವಿದ ಉಮೇಶ್ ಸುವರ್ಣ ಉಪ್ಪಿನಕೋಟೆ ಇವರ ಕುಟುಂಬಕ್ಕೆ ಸಂಸ್ಥೆಯ ಕಲಾವಿದರ ವತಿಯಿಂದ ನಿಧಿ ಸಮರ್ಪಣೆಯನ್ನು ಸಂಸ್ಥೆಯ ಕಾರ್ಯದರ್ಶಿ ಕೃಷ್ಣಮೂರ್ತಿ ಉರಾಳ ಸಮರ್ಪಿಸಿದರು.
ಮುಖ್ಯ ಅಭ್ಯಾಗತರಾಗಿ ರಂಗ ನಿರ್ದೇಶಕ ಕೆ.ಗೋಪಾಲಕೃಷ್ಣ ನಾಯಿರಿ, ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಉಪಸ್ಥಿತರಿದ್ದರು.
ಕೋಟ ಯಕ್ಷ ಸೌರಭ ಹಿರೆಮಹಾಲಿಂಗೇಶ್ವರ ಕಲಾರಂಗದ ಅಧ್ಯಕ್ಷ. ಪ್ರಶಾಂತ್ ಪಡುಕರೆ ಸ್ವಾಗತಿಸಿ,ರಘುರಾಮ್ ಬೈಕಾಡಿ ನಿರೂಪಣೆಗೈದರು.ನಂತರ ಯಕ್ಷಾಂತರ0ಗ ತಂಡದಿoದ ಪರಂಪರೆಯ ಲಂಕಿಣಿ ಮೋಕ್ಷ – ಚೂಡಾಮಣಿ ಯಕ್ಷಗಾನ ಪ್ರಸಂಗ ಪ್ರದರ್ಶನ ಗೊಂಡಿತು

 
 
 
 
 
 
 
 
 
 
 

Leave a Reply