ಸಾಲಿಗ್ರಾಮ – ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ ಎಂದು ವಿಪಕ್ಷದವರು ತೀವ್ರ ಅಸಮಾಧಾನ ಸೂಚಿಸಿ ಸಭಾತ್ಯಾಗ ,ಹೈಡ್ರಾಮ

ಕೋಟ: ಸಾಲಿಗ್ರಾಮ ಪಟ್ಟಣಪಂಚಾಯತ್‌ನ ಸಾಮಾನ್ಯ ಸಭೆಯು ಮಂಗಳವಾರ ಪ.ಪಂ ಸಭಾ ಭವನದಲ್ಲಿ ನಡೆದಿದ್ದು ಸಭಾರಂಭದಲ್ಲೆ ವಿಪಕ್ಷದವರು ತೀವ್ರ ಅಸಮಾಧಾನ ಸೂಚಿಸಿ ಸಭಾತ್ಯಾಗ ನಡೆಸಿದ ಹೈಡ್ರಾಮ ನಡೆಯಿತು.
ಸಭೆ ಆರಂಭಗೊಳ್ಳುತ್ತಿದ್ದoತಯೇ ವಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಮಾತನಾಡಿ ನಾವು ಜನಸ್ನೇಹಿ ಆಡಳಿತ ನೀಡುವುದಕ್ಕೊಸ್ಕರ ಯತ್ನಿಸುವುದು ಆದರೆ ಪಟ್ಟಣಪಂಚಾಯತ್‌ನಲ್ಲಿ ಕೌನ್ಸಿಲ್ ನಿರ್ಣಯಿಸಿದ ಯಾವ ವಿಷಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ, ಚರಂಡಿ ಹೂಳೆತ್ತುವಿಕೆ,ಬೀದಿ ದೀಪ ನಿರ್ವಣೆ,ಕಾರಂತ ಬೀದಿ ಇಂಟರ್‌ಲಾಕ್ ಜೋಡಣೆ,ಯಾವ ಕಾಮಗಾರಿಗಳು ನಿರ್ಣಯಿಸಿದಂತೆ ಅನುಷ್ಠಾನವಾಗಿಲ್ಲ ಇದು ಆಡಳಿತ ವೈಫಲ್ಯ ಎಂಬoತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ, ಇದರಿಂದ ನಾವು ತೀವ್ರ ಅಸಮಾಧಾನಗೊಂಡಿದ್ದೇವೆ ಮತ್ತು ಪ.ಪಂ ಕಾರ್ಯವೈಖರಿಯನ್ನು ಪ್ರತಿಭಟಿಸುತ್ತೇವೆ ಎಂದು ನುಡಿದು ಸಭಾತ್ಯಾಗ ಮಾಡಿದರು.ಸಭೆ ಬೆಕ್ಕಸ ಬೆರಗಾಗಿ ನೋಡಿತ್ತಿರುವಂತಯೇ ಅವರ ಹಿಂದಯೇ ವಿಪಕ್ಷದ ಎಲ್ಲಾ ಸದಸ್ಯರು ಹೊರನಡೆದರು.
ಸಭೆ ಆರಂಭಗೊಳ್ಳುತ್ತಿದ್ದoತಯೇ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದರಿoದ ಆಡಳಿತ ಪಕ್ಷದವರು ಕಕ್ಕಾಬಿಕ್ಕಿಯಾದರು ತಕ್ಷಣ ಎಚ್ಚೆತ್ತ ಅವರು ವಿಪಕ್ಷೀಯರ ಮನವೊಲಿಸಿ ವಾಪಸ್ಸು ಕರೆತರೆಲು ನಡೆಸುದ ಯತ್ನ ವಿಫಲವಾಯಿತು. ಸಭೆಯಲ್ಲಿ ಕೊರಂ ಇರುವುದರಿಂದ ಸಭೆ ಮುಂದುವರೆಯಿತು.
ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಆಡಳಿತ ಪಕ್ಷದ ರಾಜು ಪೂಜಾರಿ ವಿಪಕ್ಷ ಸದಸ್ಯರು ಎತ್ತಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವ ಮುನ್ನವೇ ಅವರು ಸಭಾತ್ಯಾಗ ನಡೆಸಿದ್ದು ಸರಿಯಲ್ಲ ನಮ್ಮ ಉತ್ತರದಿಂದ ಅಸಂತುಷ್ಟ ರಾಗದಿದ್ದರೆ ಅವರು ಈ ಯೋಚನೆ ಮಾಡಬಹುದಿತ್ತು ಎಂದಾಗ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವ ದೇವಾಡಿಗ ,ಶ್ಯಾಮಸುಂದರ ನಾಯರಿ ದನಿಗೂಡಿಸಿದರು.
ರತ್ನನಾಗರಾಜ ಗಾಣಿಗ ಮಾತನಾಡಿ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದವರು ಪ.ಪಂ ಮತ್ತು ಸಾಲಿಗ್ರಾಮ ಜನತೆಯ ಬೇಡಿಕೆಗೆ ಗೌರವ ನೀಡುತ್ತಿಲ್ಲ ಕಾರ್ಕಡ ರಸ್ತೆಯರವೆಗೂ ಸರ್ವಿಸ್ ರಸ್ತೆಯನ್ನು ವಿಸ್ತರಿಸಬೇಕು ಎಂಬ ಕೊರಿಕೆಯನ್ನು ಮನ್ನಿಸುತ್ತಿಲ್ಲ ಈ ಪ್ರದೇಶದಲ್ಲಿ ವಾಹನಗಳವರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದು ಅಪಘಾತಗಳು ಹೆಚ್ಚಿವೆ ಈ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ನಿಯೋಗ ಒಯ್ದು ವಿವರಿಸಬೇಕು ಮಾತ್ರವಲ್ಲ ಸಂಸದರಿಗೂ ಮಾಹಿತಿ ನೀಡಬೇಕು ಎಂದರು

ಬಿಡಾಡಿ ಗೂಳಿಗಳ ಕಾಟ
ಪ.ಪಂ ವ್ಯಾಪ್ತಿಯಲ್ಲಿ ಬಿಡಾಡಿ ಗೂಳಿಗಳ ಕಾಟ ವಿಪರೀತವಾಗಿದೆ ಎಂಬ ವಿಷಯದ ಬಗ್ಗೆ ಸಭೆ ಗಮನ ಸೆಳೆದ ರತ್ನನಾಗರಾಜ್ ಚಿತ್ರಪಾಡಿಯಲ್ಲಿ ಇವುಗಳಿಂದ ರೈತರು ಕಂಗಾಲಾಗಿದ್ದಾರೆ ಶಾಲಾ ಮಕ್ಕಳು ,ಮಹಿಳೆಯರು,ಭಯಭೀತರಾಗಿದ್ದಾರೆ ಇತ್ತೀಚಿಗೆ ಗೂಳಿ ತಿವಿದು ಒರ್ವ ಮಹಿಳೆ ಅಸು ನಿಗಿದ್ದಾರೆ ಪ.ಪಂ ತಕ್ಷಣ ಈ ಬಗ್ಗೆ ಕ್ರಮ ಜರಗಿಸಿ ಬೀಡಾಡಿ ಗೂಳಿಗಳನ್ನು ಹಿಡಿದು ಗೋ ಶಾಲೆಗೆ ರವಾನಿಸಬೇಕು ಎಂದು ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅಧ್ಯಕ್ಷೆ ಸುಲತಾ ಹೆಗ್ಡೆ ,ಗೂ ಶಾಲೆಗೆ ಹಣ ಪಾವತಿಸಬೇಕಾಗುತ್ತದೆ ಅದನ್ನು ಪ.ಪಂ ಯಾವ ಮೂಲದಿಂದ ಸಂಗ್ರಹಿಸಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸದಸ್ಯರಾದ ಶ್ಯಾಮಸುಂದರ ನಾಯರಿ ಪ.ಪಂ ನ ಟೆಂಡರ್ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ ಒಂದುವರೆ ವರ್ಷ ಸಂದರೂ ಕಾಮಗಾರಿ ನಡೆದಿಲ್ಲ ಇದೇ ಕಾರಣದಿಂದ ಆಡಳಿತ ವೈಫಲ್ಯ ಎಂದು ಪ್ರತಿಪಕ್ಷದವರು ಆರೋಪಿಸಿ ಸಭಾತ್ಯಾಗ ಮಾಡಿದ್ದಾರೆ.ಮೇಲಿನ ಅಧಿಕಾರಿಗಳು ನಮ್ಮನ್ನು ಕೇಳಿದರೆ ಏನು ಉತ್ತರಿಸಬೇಕು ಎಂದು ಗರಂ ಆದರು ಇದಕ್ಕೆ ಪರಿಹಾರವನ್ನು ಸೂಚಿಸಿದ ನಾಯರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಿಯಮಿತವಾಗಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಯಾಕೆ ಆಡಳಿತಕ್ಕೆ ಚುರುಕು ಮುಟ್ಟಿಸಬಾರದು ಎಂದು ಕೇಳಿದರು.ಪೌರ ಕಾರ್ಮಿಕರು ನಿಯಮ ಮೀರಿ ರಜೆ ಪಡೆಯುತ್ತಿದ್ದು ಈ ಬಗ್ಗೆಯೂ ಮುಖ್ಯಾಧಿಕಾರಿಗಳು ಗಮನ ಹರಿಸುವಂತೆ ನಾಯರಿ ಮನವಿ ಮಾಡಿದರು.ಅಧ್ಯಕ್ಷ ಸುಲತಾ ಹೆಗ್ಡೆ ಕೂಡ ಧನಿ ಸೇರಿಸಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇನ್ನುಳಿದಂತೆ ವಿವಿಧ ಇಲಾಖೆಗಳವರ ಕಾರ್ಯ ಪ್ರಗತಿಯನ್ನು ದಾಖಲಿಸಲಾಯಿತು ಆರೋಗ್ಯ ಅಧಿಕಾರಿ ಡಾ.ರಾಘವೇಂದ್ರ ರಾವ್ ಮಾಹಿತಿ ನೀಡಿ ಪ್ರತಿ ಬುಧವಾರ ಆಸ್ಪತ್ರೆಯಲ್ಲಿ ಲಸಿಕಾ ಮೇಳ ಮಾಡಬೇಕು ಎಂದು ಸರಕಾರಿ ಆದೇಶವಿದೆ .ವಾರದಲ್ಲಿ ಐದು ದಿನ ಲಸಿಕೆ ನೀಡುವ ಕೆಲಸ ಮಾಡುತ್ತಿದ್ದರೂ ಲಸಿಕೆ ಪಡೆಯಲು ಜನರೇ ಬರುತ್ತಿಲ್ಲ ೬೦ವರ್ಷ ಮೇಲ್ಪಟ್ಟವರಿಗೆ ಮೂರನೇ ಡೋಸ್ ಹಾಕಬೇಕಾಗಿದೆ ಎಂದರು.ಕಾರ್ಕಡದಲ್ಲಿ ಒಂದು ಇಲಿ ಜ್ವರ ಪ್ರಕರಣ ವರದಿಯಾಗಿದ್ದು ,ಗುಣವಾಗಿದ್ದಾರೆ,ಗದ್ದೆ ಹೊಲಗಳಲ್ಲಿ ಕಾರ್ಯನಿರ್ವಹಿಸುವವರು ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು ಬೇಸಿಗೆಯ ಅಂತ್ಯವಾಗುತ್ತಿದ್ದು ನೀರಿನಿಂದ ಸಮಸ್ಯೆಗಳು ಉಂಟಾಗುವ ಸಂಭವ ಇದೆ ಚಿತ್ರಪಾಡಿ ಶಾಲೆಯಲ್ಲಿನ ನಲವತ್ತು ಮಕ್ಕಳು ಜ್ವರ ಪೀಡಿತರಾದ ಮಾಹಿತಿ ಬರುತ್ತಿದ್ದಂತಯೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.ಕುಡಿಯುವ ನೀರಿನಿಂದ ಉಂಟಾದ ಸೊಂಕು ಎಂಬುವುದು ಪತ್ತೆಯಾಗಿದ್ದು ಅದರ ನಿವಾರಣೆಗಾಗಿ ಕ್ರಮವಹಿಸಲಾಗಿದೆ ಎಂದರು.ಮಲೇರಿಯಾ ಮತ್ತು ಡೆಂಗ್ಯೂ ಜ್ವರ ತಡೆಯುವ ಬಗ್ಗೆ ಜನರು ಜಾಗೃತರಾಗಿರಬೇಕು ಎಂದು ಮನವಿ ಮಾಡಿದರು.ಮೆಸ್ಕಾಂ ಅಧಿಕಾರಿ ಪ್ರಶಾಂತ್ ಶೆಟ್ಟಿ ಭೆಳಕು ಎರಡನೇ ಹಂತದ ಯೋಜನೆ ಕಾರ್ಯಗತಗೊಳಿಸಲು ಮಾಹಿತಿ ನೀಡಿದರು ಮಳೆಗಾಲದ ಪೂರ್ವತಯಾರಿಗಳು ವಿದ್ಯುತ್ ಮಾರ್ಗಸುರಕ್ಷತೆ ,ದಾರಿದೀಪ ನಿರ್ವಹಣೆ,ಟೆಂಡರ್ ಅನುಮೋದನೆ ಇತ್ಯಾದಿ ವಿಷಗಳ ಬಗ್ಗೆ ಚರ್ಚಿ ನಿರ್ಣಯಿಸಲಾಯಿತು.
ಪ.ಪಂ ಅಧ್ಯಕ್ಷೆ ಸುಲತಾ ಹಗ್ಡೆ ಸಭಾಧ್ಯಕ್ಷತೆ ವಹಿಸಿದ್ದರು.ಮುಖ್ಯಾಧಿಕಾರಿ ಶಿವ ನಾಯ್ಕ್ ,ಉಪಾಧ್ಯಕ್ಷೆ ಅನುಸೂಯ ಹೇರ್ಳೆ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply