ಪ್ರದಾನ ಜನಪದ ಸಾಹಿತ್ಯ ಕಲೆಗಳ ದಾಖಲೀಕರಣ ಇಂದಿನ ಅಗತ್ಯ- ಬಿ ಪುಂಡಲೀಕ ಮರಾಠೆ.

ಪ್ರಾಚೀನವಾದ ಜಾನಪದ ಕಲೆಗಳು, ಆಚರಣೆಗಳು, ಜನಪದ ನಂಬಿಕೆಗಳು ಹಳ್ಳಿಜನರ ಬದುಕಿನೊಂದಿಗೆ ಹಾಸುಹೊಕ್ಕಾಗಿದೆ. ಅನೇಕ ಬಗೆಯ ಜಾನಪದ ಮೌಖಿಕ ಸಾಹಿತ್ಯ ಕಲೆಗಳು ನಶಿಸಿಹೋಗುತ್ತಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಜನಪದ ಸಾಹಿತ್ಯ ಕಲೆಗಳ ದಾಖಲೀಕರಣ ಅಗತ್ಯವಾಗಿ ಆಗಬೇಕಿದೆ ಎಂದು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ತಿಳಿಸಿದ್ದಾರೆ.

ಕಟಪಾಡಿ ಎಸ್.ವಿ.ಎಸ್.ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಉಡುಪಿ ಜಿಲ್ಲಾ ಘಟಕ ಮತ್ತು ಕಾಪು ತಾಲೂಕು ಕನ್ನಡ ಜಾನಪದ ಪರಿಷತ್ ಆಶ್ರಯದಲ್ಲಿ ಗುರುವಾರ ತುಳು ಜಾನಪದ ಸಂಧಿ ಪಾಡ್ದನ ಕಲಾವಿದೆ ಗೋಪಿ ಪಾಣಾರ ಮೂಡಬೆಟ್ಟು ಕಟಪಾಡಿ ಅವರಿಗೆ ಜಾನಪದ ಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ಕಟಪಾಡಿ ಎಸ್.ವಿ.ಎಸ್.ವಿದ್ಯಾವರ್ಧಕ ಸಂಘದ ಸಂಚಾಲಕ ಕೆ.ಸತ್ಯೇಂದ್ರ ಪೈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಜಾನಪದ ಪರಿಷತ್ ಕಾಪು ತಾಲೂಕಿನಲ್ಲಿರುವ ಜಾನಪದ ಕಲಾವಿದರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮನೆ ಮನೆಯಲ್ಲಿ ಜಾನಪದ ಕಾರ್ಯಕ್ರಮಗಳಂತಹ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನವಪೀಳೀಗೆಗೆ ಜಾನಪದ ಲೋಕವನ್ನು ಪರಿಚಯಿಸಬೇಕಿದೆ ಎಂದರು.

ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಸಖಾರಾಮ್ ಹಾವಂಜೆ ಮಾತನಾಡಿ, ಜನಪದ ಕ್ಷೇತ್ರಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ಕಾಪು ಘಟಕದ ವತಿಯಿಂದ ಜಾನಪದ ಉತ್ಸವ ಆಯೋಜಿಸಲಾಗುವುದು ಎಂದರು.

ಇದೇ ಸಂದರ್ಭ ನಡೆದ ಕನಕ ಜಯಂತಿ ಆಚರಣೆಯಂಗವಾಗಿ ಕನಕದಾಸರ ಗೀತೆಗಾಯನ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ಸಖಾರಾಮ್ ಹಾವಂಜೆ, ನಾರಾಯಣ ಮೂರ್ತಿ ಲಕ್ಷ್ಮೀನಗರ , ಶಂಕರ್ ಅಂಬಲಪಾಡಿ, ಕುಮಾರಿ ವೈಷ್ಣವಿ ಉಡುಪಿ, ಕುಮಾರಿ ನಂದಿನಿ ಅಲೆವೂರು, ಪ್ರಕಾಶ ಸುವರ್ಣ ಕಟಪಾಡಿ ಸಂಕೀರ್ತನೆಗಳನ್ನು ಹಾಡಿದರು. ಬಾಲಪ್ರತಿಭೆ ಯಶಸ್ ಪಿ.ಸುವರ್ಣ ಕೊಳಲುವಾದನದ ಮೂಲಕ ರಂಜಿಸಿದರು. ಸಂಧಿ ಪಾಡ್ದನ ಕಲಾವಿದೆ ಗೋಪಿ ಪಾಣಾರ ತುಳು ಪಾಡ್ದನ ಹಾಡಿ ರಂಜಿಸಿದರು.

ಈ ಸಂದರ್ಭ ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪರಿಷತ್ ಮಾಧ್ಯಮ ಕಾರ್ಯದರ್ಶಿ ರಾಕೇಶ್ ಕುಂಜೂರು ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕಾಪು ತಾಲೂಕು ಜಾನಪದ ಪರಿಷತ್ ಕೋಶಾಧಿಕಾರಿ ಕೆ.ನಾಗೇಶ್ ಕಾಮತ್, ಜೊತೆ ಕಾರ್ಯದರ್ಶಿ ಪವಿತ್ರಾ ಆರ್.ಶೆಟ್ಟಿ ಉಪಸ್ಥಿತರಿದ್ದರು.

ಕಾಪು ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಪ್ರಕಾಶ ಸುವರ್ಣ ಕಟಪಾಡಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಭುವನೇಶ್ ಪ್ರಭು ವಂದಿಸಿದರು.

 
 
 
 
 
 
 
 
 
 
 

Leave a Reply