ಮಹಾ​ಲಕ್ಷ್ಮೀ ಬ್ಯಾಂಕಿನ ​42ನೇ ವಾರ್ಷಿಕ ಮಹಾಸಭೆ : ಸತತ ​11ನೇ ವರ್ಷ ಶೇ.​18 ಡಿವಿಡೆಂಡ್ ಘೋಷಣೆ

ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್ ನಿ., ಉಡುಪಿ ಇದರ ​2019-20ರ ಆರ್ಥಿಕ ವರ್ಷದ ​42ನೇ ವಾರ್ಷಿಕ ಮಹಾಸಭೆಯು ದಿನಾಂಕ ​ಗುರುವಾರದಂದು ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಎ ಸುವರ್ಣರವರ ಅಧ್ಯಕ್ಷತೆಯಲ್ಲಿ ಉಡುಪಿ ಪುರಭವನದಲ್ಲಿ ಜರುಗಿತು. 
​ ​
ಬ್ಯಾಂಕಿನ​ ​ಅಧ್ಯಕ್ಷ  ಯಶ್‌ಪಾಲ್ ಎ ಸುವರ್ಣರವರು ಸರ್ವಸದಸ್ಯರನ್ನು ಸ್ವಾಗತಿಸಿ, ಬ್ಯಾಂಕು ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯ ಪ್ರಗತಿ ಸಾಧಿಸಿದ್ದು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಹಕ ಸ್ನೇಹಿಯಾಗಿ ವ್ಯವಹಾರ ನಡೆಸುತ್ತಿದೆ. ವಿಶೇಷವಾಗಿ ಮೀನುಗಾರರಿಗೆ, ಕೃಷಿಕರಿಗೆ ಸರಕಾರದ ವಿವಿಧ ಯೋಜನೆಗಳಾದ ಶೂನ್ಯ ಬಡ್ಡಿದರದ ಸಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸಬ್ಸಿಡಿಯನ್ನು ನಮ್ಮ ಬ್ಯಾಂಕಿನ ಗ್ರಾಹಕರ ಖಾತೆಗೆ ಜಮೆಯಾಗುವಂತೆ ಮಾಡಲು ಕಾರ್ಯಪ್ರವೃತ್ತವಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಆರಂಭಿಸುವ ಯೋಜನೆ ಹಾಗೂ ಎಟಿಎಂ ಸೌಲಭ್ಯದೊಂದಿಗೆ ಹವಾನಿಯಂತ್ರಿತವಾಗಿ ನವೀಕೃತಗೊಳ್ಳುತ್ತಿರುವ ಉಚ್ಚಿಲ ಶಾಖೆ ಉದ್ಘಾಟನೆ ಜನವರಿ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿರುವುದಾಗಿ ತಿಳಿಸಿದರು. 

ವರದಿ ವರ್ಷದಲ್ಲಿ ಆದಾಯ ತೆರಿಗೆಗೆ ಹಾಗೂ ನಿಯಮದಂತೆ ಇತರ ಸಲುವಳಿಗಳಿಗೆ ಅನುವು ಮಾಡುವ ಮೊದಲು ರೂ. ​5.08 ಕೋಟಿ ಲಾಭ ಗಳಿಸಿದ್ದು, ಹಾಗೂ ಅನುವು ಮಾಡಿದ ನಂತರ ರೂ. ​1.61 ಕೋಟಿ ನಿವ್ವಳ ಲಾಭ ಗಳಿಸಿದ್ದು, ​2019-20ರ ವರ್ಷಾಂತ್ಯಕ್ಕೆ ಬ್ಯಾಂಕಿನ ಠೇವಣಿಯು ರೂ. ​157 ಕೋಟಿಗೆ ಹಾಗೂ ಸಾಲ ಮತ್ತು ಮುಂಗಡವು ರೂ. ​131 ಕೋಟಿಗೆ ತಲುಪಿದ್ದು ಬ್ಯಾಂಕಿನ ಒಟ್ಟು ವಹಿವಾಟು ರೂ. 1500.68 ಕೋಟಿ, ದುಡಿಯುವ ಬಂಡವಾಳವು ರೂ. ​18,757.55 ಲಕ್ಷಕ್ಕೆ ಏರಿಕೆಯಾಗಿದ್ದು ಸಂಪನ್ಮೂಲ ನಿರ್ವಹಣೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವುದನ್ನು ವಿವರಿಸಲಾಯಿತು. 
 
ಶಾಸನ​ ​ಬದ್ಧ ಲೆಕ್ಕಪರಿಶೋಧಕರು ಬ್ಯಾಂಕನ್ನು ‘ಎ’ ದರ್ಜೆಯಲ್ಲಿ ವರ್ಗೀಕರಿಸಿದ್ದು, ಬ್ಯಾಂಕಿನ ಸದಸ್ಯರಿಗೆ ಶೇ.​18 ಡಿವಿಡೆಂಡ್‌ನ್ನು ಸರ್ವಾನುಮತದಿಂದ ಘೋಷಿಸಿದ್ದು, ಇದರಲ್ಲಿ ಶೇ.​3ನ್ನು ಸಮಾಜಕಲ್ಯಾಣ ನಿಧಿಗೆ ವಿನಿಯೋಗಿಸುವಂತೆ ಸದಸ್ಯರಿಂದ ಬಂದ ಸಲಹೆಯನ್ನು ಸಭೆಯ ಮುಂದಿರಿಸಿ ಸರ್ವಾನು​ ​ಮತದಿಂದ ಅಂಗೀಕರಿಸಲಾಯಿತು. 

ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದವರಿಗೆ ಹಾಗೂ ಮಹಾಸಭೆಯಲ್ಲಿ ವ್ಯಕ್ತವಾದ ಅಭಿವೃದ್ಧಿಪರ​ ​ಸಲಹೆ ಸೂಚನೆ ಗಳಿಗೆ ಕೃತಜ್ಞತೆಯನ್ನು ಸಲ್ಲಿಸಿ, ಮುಂಬರುವ ವರ್ಷಗಳಲ್ಲಿಯೂ ಸಹ ಬ್ಯಾಂಕಿನ ಅಭಿವೃದ್ಧಿಗೆ ಎಲ್ಲರ ಸಹಕಾರ ವನ್ನು ಅಧ್ಯಕ್ಷರು ಕೋರಿದರು. ಬ್ಯಾಂಕಿನ ನಿರಂತರ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬ್ಯಾಂಕಿನ ಸಾಧನೆಯ ಬಗ್ಗೆ ಸದಸ್ಯರು ಸಭೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. 
​​
ಈ ಸಂದರ್ಭದಲ್ಲಿ ಕುಂದಾಪುರ ಪುರಸಭೆಯ ನೂತನ ಅಧ್ಯಕ್ಷವೀಣಾ ಭಾಸ್ಕರ್, ಉಪಾಧ್ಯಕ್ಷ​ ​ಸಂದೀಪ್ ಖಾರ್ವಿ, ಬ್ಯಾಂಕಿನ ನಿವೃತ್ತ ಸಿಬ್ಬಂದಿ ಯಶವಂತ್, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಕುಮಾರಿ ಶ್ರೇಯ ಕುಂದರ್, ಕುಮಾರಿ ಹರ್ಷ ಎಸ್. ರವರನ್ನು ಅಭಿನಂದಿಸಲಾಯಿತು

ವೇದಿಕೆಯಲ್ಲಿ ನಿರ್ದೇಶಕರಾದ  ವೆಂಕಟರಮಣ ಕಿದಿಯೂರು, ವಾಸುದೇವ ಸಾಲ್ಯಾನ್, ಶಶಿಕಾಂತ ಬಿ ಕೋಟ್ಯಾನ್, ಹೇಮನಾಥ ಜೆ ಪುತ್ರನ್, ಶೋಭೇಂದ್ರ ಸಸಿಹಿತ್ಲು, ಕೆ ಸಂಜೀವ ಶ್ರೀಯಾನ್, ರಾಮ ನಾಯ್ಕ್ ಎಚ್,  ವಿನಯ​ ​ಕರ್ಕೇರ,  ನಾರಾಯಣ ಟಿ ಅಮೀನ್,  ಸುರೇಶ್ ಬಿ ಕರ್ಕೇರ,  ಬಿ ಬಿ ಕಾಂಚನ್,  ಶಿವರಾಮ ಕುಂದರ್, ವನಜಾ ಹೆಚ್‌ಕಿದಿಯೂರು, ವನಜಾಜೆ ಪುತ್ರನ್, ವೃತ್ತಿಪರ ನಿರ್ದೇಶಕ​ ​ ಮಂಜುನಾಥ ಎಸ್ ಕೆ, ಬ್ಯಾಂಕಿನ ಸಲಹೆಗಾರ  ಆನಂದ ಎನ್ ಪುತ್ರನ್ ಹಾಗೂ ಪ್ರಭಾರ ಪ್ರಧಾನ ವ್ಯವಸ್ಥಾಪಕ ಜಿ ಕೆ ಶೀನಾ ರವರು ಉಪಸ್ಥಿತರಿದ್ದರು. 

 
 
 
 
 
 
 
 
 
 
 

Leave a Reply