ಡಾ.ಬಿ.ಗೋಪಾಲಾಚಾರ್ಯರಿಗೆ ಶ್ರೀಭಂಡಾರಕೇರಿ ಮಠದಿಂದ “ಶ್ರೀಸುತೀರ್ಥಭೂಷಣ” ಪ್ರಶಸ್ತಿ ಪ್ರದಾನ

ಉಡುಪಿಯ ಗೀತಾ ಮಂದಿರದಲ್ಲಿರುವ ಶ್ರೀ ಪುತ್ತಿಗೆ ಮಠದ ಶ್ರೀವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕರಾದ ಡಾ.ಬಿ.ಗೋಪಾಲಾಚಾರ್ಯರು ನಡೆಸಿರುವ ತಾಡವಾಲೆ ಗ್ರಂಥಗಳ ಸಂರಕ್ಷಣೆ, ಮಧ್ವಾಚಾರ್ಯರು ಸಂಚರಿಸಿದ ಸ್ಥಳಗಳ ದಾಖಲಾತಿ, ಶ್ರೀಮಧ್ವವಿಜಯ ಮಹಾಕಾವ್ಯವನ್ನು ಆಧರಿಸಿದ ಪಡೆದಿರುವ ಪಿಹೆಚ್ ಡಿ, ಮುಂತಾದ ಸಾಧನೆಯನ್ನು ಗುರುತಿಸಿ ಶ್ರೀಭಂಡಾರಕೇರಿ ಮಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯೇಶತೀರ್ಥಶ್ರೀಪಾದರು ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರ ಆರಾಧನೆ ಹಾಗೂ ಶ್ರೀ ನರಸಿಂಹ ಜಯಂತಿಯ ಅಂಗವಾಗಿ ನಡೆದ ವಿದ್ವತ್ಸಭೆಯಲ್ಲಿ “ಶ್ರೀ ಸುತೀರ್ಥಭೂಷಣ:” ಎಂಬ ಪ್ರಶಸ್ತಿಯೊಂದಿಗೆ ಸನ್ಮಾನಿಸಿ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ನೋಡಿನ ಖ್ಯಾತ ವಿದ್ವಾಂಸರಾದ ಡಾ.ವ್ಯಾಸನಕೇರಿ ಪ್ರಭಂಜನಾಚಾರ್, ತಿರುಮಲ ತಿರುಪತಿ ದೇವಸ್ಥಾನಗಳ ದಾಸಸಾಹಿತ್ಯ ಪ್ರಾಜೆಕ್ಟಿನ ವಿಶೇಷ ಅಧಿಕಾರಿಗಳಾದ ವಿದ್ವಾನ್ ಆನಂದತೀರ್ಥಾಚಾರ್ ಪಗಡಾಲ್, ಹಿರಿಯ ವಿದ್ವಾಂಸರಾದ ಮಾಳಗಿ ರಾಮಾಚಾರ್ ಮುಂತಾದ ವಿದ್ವಾಂಸರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply