ಉಡುಪಿ : ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್

ಉಡುಪಿ :- ಕರಾಟೆ ಬುಡೋಕೋನ್ ಇದರ ವತಿಯಿಂದ ಗದಗದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಮಗ್ರ ಚಾಂಪಿಯನ್ ಶಿಪ್ ಪಡೆದ ಪಕ೯ಳ ಪಿಕೆಎಸ್ ಕರಾಟೆ ತಂಡಕ್ಕೆ ಅಭಿನಂದನಾ ಸಮಾರಂಭ ಜ .30 ರಂದು ನಡೆಯಿತು.

ರೋಟರಿ ಕ್ಲಬ್ ಮಣಿಪಾಲ ತಂಡವು ಈ ಕರಾಟೆ ತಂಡಕ್ಕೆ ವಿಶೇಷ ಆಥಿ೯ಕ ನೆರವು ನೀಡಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಅಧ್ಯಕ್ಷ ಖ್ಯಾತ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ , ಗ್ರಾಮೀಣ ಭಾಗದಲ್ಲಿರುವ ಮಕ್ಕಳ ಸಾಧನೆ ಅಭಿನಂದನಾಹ೯, ಕರಾಟೆ ಶಿಕ್ಷಣದ ಮೂಲಕ ಆತ್ಮ ಸೈಯ೯ ಬೆಳೆಸಬಹುದು ಮುಂದಿನ ಜೀವನದಲ್ಲಿ ಯಾವುದೇ ರೀತಿಯ ದುರಭ್ಯಾಸಗಳಿಗೆ ಒಳಗಾಗದೆ ಹೆಚ್ಚಿನ ಸಾಧನೆ ಮಾಡಬೇಕು .ಮಕ್ಕಳಿಗೆ ಬೆಂಬಲ , ಪ್ರೋತ್ಸಾಹ ನೀಡಿದ್ದಲ್ಲಿ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಬಹುದು ಎಂದರು.

ಮುಖ್ಯ ಅತಿಥಿಗಳಾಗಿ ಡಾ. ಗಿರಿಜಾ ಮಾತನಾಡಿ, ಕರಾಟೆ ಕೇವಲ ದೈಹಿಕ ರಕ್ಷಣೆಯ ಕ್ರೀಡೆಯಲ್ಲ ಅದು ಮನಸ್ಸನ್ನು ಕೇಂದ್ರಿಕರಣ ಮಾಡುವ ಆಟವಾಗಿದೆ ಎಂದು ಶುಭ ಹಾರೈಸಿದರು.

ಕರಾಟೆ ಶಿಕ್ಷಕಿ ಪ್ರವೀಣಾ, ಡಾ. ವೀಣಾ ,ರೋಟರಿ ಕಾರ್ಯದರ್ಶಿ ರೆಹಮಾನ್, ಶ್ರೀಪತಿ, ರಾಘವೇಂದ್ರ ಕರ್ವಾಲು ಮತ್ತು ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply