ಗೀತೋತ್ಸವದ ಗೀತಾ ಪ್ರಚಾರ ರಥಕ್ಕೆ ಅದ್ದೂರಿ ಚಾಲನೆ

ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸಂಕಲ್ಪಿಸಿರುವ ಮುಂಬರುವ ತಮ್ಮ ಚತುರ್ಥ ಪರ್ಯಾಯದ ಜಾಗತಿಕ ಮಟ್ಟದ ಧಾರ್ಮಿಕ ಸಂಕಲ್ಪ ಕೋಟಿಗೀತಾ ಲೇಖನ ಯಜ್ಞ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ಗೀತೋತ್ಸವ ಕಾರ್ಯಕ್ರಮ ಡಿಸೆಂಬರ್ 23 ಮತ್ತು 24 2023 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆಯಲಿದ್ದು , ತತ್ಸಂಬಂಧಿತವಾದ ಗೀತಾ ಪ್ರಚಾರಕ್ಕಾಗಿ ನಿರ್ಮಿಸಲಾದ ಗೀತಾ ರಥಕ್ಕೆ ರಾಜಕೀಯ ಧುರೀಣ ರಾದ ಹಾಗೂ ಗೀತೋತ್ಸವ ಸಮಿತಿಯ ನೇತೃತ್ವ ವಹಿಸಿದ ಶ್ರೀಯುತ ಎನ್.ಆರ್. ರಮೇಶ್ ಅವರು ಚಾಲನೆ ನೀಡಿದರು. 

ಪೂಜ್ಯ ಪುತ್ತಿಗೆ ಶ್ರೀಪಾದರು ವಿಶ್ವದಾದ್ಯಂತ ಗೀತಾ ಪ್ರಚಾರ ಮಾಡುತ್ತಿತ್ತು ಸನಾತನ ಧರ್ಮದ ಏಳಿಗೆಗೆ ಭಗವದ್ಗೀತೆಯ ಮಾಧ್ಯಮದಲ್ಲಿ ವಿಶೇಷವಾಗಿ ಶ್ರಮಿಸುತ್ತಿರುವ ಶ್ರೀಪಾದರ ಸಂಕಲ್ಪಕ್ಕೆ ಬೆಂಗಳೂರಿನ ಜನತೆ ಕೈಜೋಡಿಸಬೇಕು ಗೀತೋತ್ಸವ ಕಾರ್ಯಕ್ರಮಕ್ಕೆ ಎಲ್ಲ ಭಕ್ತರು ಭಾಗವಹಿಸುವಂತಾಗಲಿ ಎಂದು ಶುಭ ಹಾರೈಸಿದರು. 

ಕಾರ್ಯಾಧ್ಯಕ್ಷರಾದ ಪ್ರಸಿದ್ಧ ಆಹಾರ ತಜ್ಞೆ ಶ್ರೀಮತಿ ಡಾಕ್ಟರ್ ಎಚ್.ಎಸ್ .ಪ್ರೇಮ ಅಲ್ಲದೆ ಕಾರ್ಯಕರ್ತರು ಹಾಗೂ ಶ್ರೀಪಾದರ ಆಪ್ತ ಕಾರ್ಯದರ್ಶಿಗಳಾದ ಎಂ. ಪ್ರಸನ್ನಚಾರ್ಯ, ಬೆಂಗಳೂರು ಪುತ್ತಿಗೆ ಮಠದ ವ್ಯವಸ್ಥಾಪಕರಾದ ಎ.ಬಿ .ಕುಂಜಾರ್, ಶ್ರೀಧರ ಭಟ್, ಜ್ಯೋತಿಷಿ ಗಳಾದ ನಾಗರಾಜ ನಕ್ಷತ್ರಿ ಸಮಾಜ ಸೇವಕರಾದ ಶ್ರೀಮತಿ ಮಾಲಿನಿ , ಹರಿಪ್ರಸಾದ್ ,ವೆಂಕಟೇಶ್ ಭಟ್ ,ಶ್ರೀಧರ ಭಟ್ ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply