ಯುಪಿಎಂಸಿ- ಉಪೇಂದ್ರ ಪೈ ಜನ್ಮ ದಿನಾಚರಣೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸಂಸ್ಥಾಪಕ ಶ್ರೀ ಉಪೇಂದ್ರ ಅನಂತ ಪೈ ಅವರ 128ನೇ ಜನ್ಮ ದಿನಾಚರಣೆಯು ನವೆಂಬರ್ 26ರಂದು ಕಾಲೇಜಿನಲ್ಲಿ ಜರಗಿತು.

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಮಾತನಾಡಿ ಮಣಿಪಾಲವನ್ನು ಸರ್ವಾಂಗೀಣ ಅಭಿವೃದ್ಧಿ ಪಥದಲ್ಲಿ ಸಾಗುವುದಕ್ಕೆ ಶ್ರಮಿಸಿದವರಲ್ಲಿ ಪ್ರಮುಖರು ಉಪೇಂದ್ರ ಪೈಗಳು, ನಮ್ಮ ಕಾಲೇಜಿಗೂ ಉಪೇಂದ್ರ ಪೈ ಹೆಸರಿಡಲು ಅವರ ವ್ಯವಹಾರ ಆಡಳಿತವೇ ಸ್ಪೂರ್ತಿ ಎಂದು ತಿಳಿಸಿದರು. 

ಉಪೇಂದ್ರ ಪೈ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಮರ್ಪಿಸಲಾಯಿತು. ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ಬಿ.ಕಾಂ ವಿದ್ಯಾರ್ಥಿ ಪ್ರೇಮಸಾಯಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply