Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಇನ್ನು ಹಗಲಿರುಳು ರಾಷ್ಟ್ರ ಧ್ವಜ ಹಾರಿಸಲು ಅಡ್ಡಿ ಇಲ್ಲ.

ಇನ್ಮುಂದೆ ರಾತ್ರಿಯೂ ರಾಷ್ಟ್ರಧ್ವಜ ಹಾರಿಸಬಹುದು.

ನವದೆಹಲಿ: 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಆಜಾದಿ ಕಾ ಅಮೃತಮಹೋತ್ಸವ ಆಚರಣೆ ಯಲ್ಲಿರುವ ದೇಶದ ಜನರಿಗೆ ಕೇಂದ್ರ ಮತ್ತೊಂದು ಶುಭ ಸುದ್ದಿ ನೀಡಿದೆ.

ಕೇಂದ್ರ ಸರ್ಕಾರ ಧ್ವಜ ಸಂಹಿತೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇನ್ಮುಂದೆ ರಾಷ್ಟ್ರಧ್ವಜವನ್ನು ಹಗಲಿನ ಹೊತ್ತು ಮಾತ್ರವಲ್ಲದೇ ರಾತ್ರಿಯೂ ಸಹ ಹಾರಿಸಬಹುದು ಎಂದಿದೆ.

ಅಲ್ಲದೇ, ಯಂತ್ರಗಳಿಂದ ತಯಾರುಗೊಳ್ಳುವ ಪಾಲಿಸ್ಟರ್ ಧ್ವಜ ಬಳಕೆ ಮಾಡಲು ಅನುಮತಿ ನೀಡಿದೆ.

ಅಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಆಗಸ್ಟ್ 13ರಿಂದ 15ರವರೆಗೆ ದೇಶದಲ್ಲಿ ಹರ್ ಘರ್ ತಿರಂಗ ಅಭಿಯಾನ ನಡೆಯಲಿದೆ. ಅದರ ಅಂಗ ವಾಗಿ ಕೇಂದ್ರ ಗೃಹ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ವಿವಿಧ ಸಚಿವಾಲಯ ಮತ್ತು ಇಲಾಖೆಗಳ ಕಾರ್ಯದರ್ಶಿ ಗಳಿಗೆ ಪತ್ರವನ್ನೂ ಬರೆದಿದ್ದಾರೆ.

ಭಾರತದ ಧ್ವಜ ಸಂಹಿತೆ 2002ರ ಆದೇಶಕ್ಕೆ ಇದೀಗ ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ.

ರಾಷ್ಟ್ರ ಧ್ವಜವನ್ನು ತೆರೆದ ಸ್ಥಳ, ಸಾರ್ವಜನಿಕ ಸದಸ್ಯರ ಮನೆಗಳ ಮೇಲೆ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಇದರ ಜೊತೆಗೆ ರಾತ್ರಿ ಸಹ ಹಾರಿಸ ಬಹುದಾಗಿದೆ.

ಈ ಹಿಂದೆ ಸೂರ್ಯೋದಯದಿಂದ ಸೂರ್ಯಾಸ್ತ ದವರೆಗೆ ಮಾತ್ರ ತ್ರಿವರ್ಣ ಧ್ವಜ ಹಾರಿಸಲು ಅನುಮತಿ ನೀಡಲಾಗಿತ್ತು. ಜೊತೆಗೆ ಕೈಯಿಂದ ನೂಲುವ ಹಾಗೂ ರೇಷ್ಮೆ, ಉಣ್ಣೆ ರಾಷ್ಟ್ರ ಧ್ವಜ ಬಳಕೆಗೆ ಅವಕಾಶವಿತ್ತು.

ಆದರೆ, ಈಗ ಯಂತ್ರದಿಂದ ತಯಾರಿಸಿದ ಮತ್ತು ಪಾಲಿಸ್ಟರ್ ಧ್ವಜ ಬಳಕೆ ಮಾಡಲು ಅನುಮತಿ ನೀಡಲಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!