ವೂಟ್ ಸೆಲೆಕ್ಟಿಗೆ ಬಂದ ಚಾರ್ಲಿ

ಇತ್ತೀಚಿಗೆ ತೆರೆಕಂಡು ಮನೆಮಾತಾದ ‘ಚಾರ್ಲಿ 777’ ಸಿನಿಮಾ ಇದೀಗ ನಿಮ್ಮ ಬಳಿಗೇ ಬರ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ ಈ ಚಿತ್ರವನ್ನು ನೀವು ಇದೇ ಜುಲೈ 29ರಿಂದ ವೂಟ್ ಸೆಲೆಕ್ಟಿನಲ್ಲಿ ನೋಡಿ ಆನಂದಿಸಬಹುದು.  

ನಾಯಿ ಮತ್ತು ಮನುಷ್ಯನ ಸಂಬಂಧ ಹನ್ನೆರಡು ಸಾವಿರ ವರ್ಷಗಳಷ್ಟು ಹಿಂದಿನದು ಅಂತಾರೆ. ಅಂತ ಮುದ್ದಾದ ನಾಯಿಯೊಂದರ ಸುತ್ತ ಹೆಣೆದ ಕತೆ ಚಾರ್ಲಿಯದು. ಚಿತ್ರದ ಟ್ರೇಲರ್ ಬಿಡುಗಡೆಯಾದ ದಿನದಿಂದ ಈ ನಾಯಿ ಕನ್ನಡಿಗರ ಮನಸೂರೆಗೊಂಡಿದೆ. ಇನ್ನುಮುಂದೆ ಈ ಮುದ್ದು ನಾಯಿಯ ತುಂಟಾಟಗಳನ್ನ ವೂಟ್ ಸೆಲೆಕ್ಟಿನಲ್ಲಿ ಬೇಕೆಂದಾಗ ನೋಡಲು ಸಾಧ್ಯವಾಗುವುದು ನಾಯಿಪ್ರೇಮಿಗಳಿಗೆ ಖುಷಿಯ ಸುದ್ದಿಯೇ.

ನಾಯಿಯೇ ಮುಖ್ಯಪಾತ್ರದಲ್ಲಿರುವ ‘ಚಾರ್ಲಿ’ಯಲ್ಲಿ ಧರ್ಮನ ಪಾತ್ರ ಮಾಡಿರುವ ನಟ ರಕ್ಷಿತ್ ಶೆಟ್ಟಿ ಹೇಳುವಂತೆ ಇದು ಅವರ ವೃತ್ತಿಜೀವನದಲ್ಲೇ ಅತ್ಯಂತ ಮುಖ್ಯ ಪಾತ್ರ. ಮಹಾಭಾರತದ ಸ್ವರ್ಗಾರೋಹಣ ಪರ್ವದಲ್ಲಿ ಧರ್ಮರಾಯನ ಹಿಂದೆ ಸಾಗುವ ನಾಯಿಯನ್ನೂ ಈ ಕತೆ ನೆನಪಿಸುವುದು ವಿಶೇಷ.

ದೇಶಾದ್ಯಂತ ಜನಮೆಚ್ಚುಗೆ ಗಳಿಸಿದ ಈ ಹೊಸ ಬಗೆಯ ಚಿತ್ರ ವೂಟ್ ಸೆಲೆಕ್ಟಿನ ಮುಖಾಂತರ ಮನೆಮನೆಗೂ ತಲುಪುತ್ತಿರುವ ಬಗ್ಗೆ ಚಿತ್ರದ ನಿರ್ದೇಶಕ ಕಿರಣ್ ರಾಜ್ ಮಾತನಾಡಿ, ಈ ಸಿನಿಮಾ ತಮಗೆ ಅತ್ಯಂತ ತೃಪ್ತಿ ತಂದಿದೆ ಎಂದರು.

ಪ್ರಾಣಿಗಳನ್ನು ಬೇರೆ ಬೇರೆ ರೀತಿ ಬಳಸಿಕೊಂಡಿರುವ ಸಿನಿಮಾಗಳು ಮೊದಲೂ ಬಂದಿವೆ. ಆದರೆ ಚಾರ್ಲಿ ಒಂದು ನಾಯಿಯ ಸುತ್ತವೇ ತಿರುಗುವ ಕತೆ. ಚಿತ್ರದ ನಾಯಕ ಬಯಸದಿದ್ದರೂ ಅದು ಅವನ ಬಳಿ ಬಂದದ್ದು, ಕಿರಿಕಿರಿಯಿಂದ ಶುರುವಾದರೂ ಅವರಿಬ್ಬರು ಒಬ್ಬರನ್ನೊಬ್ಬರು ಹಚ್ಚಿಕೊಂಡದ್ದು ಮತ್ತು ಮನಕರಗಿಸುವಂಥ ಅಂತ್ಯಗಳು ಚಾರ್ಲಿ ಸಿನಿಮಾವನ್ನು ಮರೆಯಲಾಗದ ಅನುಭವವಾಗಿಸಿವೆ.

ಮರೆಯಬೇಡಿ. ಜುಲೈ 29ರಿಂದ ನಿಮ್ಮ ವೂಟ್ ಸೆಲೆಕ್ಟಿನಲ್ಲಿ ಚಾರ್ಲಿ ಬರ್ತಿದೆ. ನೋಡಿಲ್ಲದವರಿಗೆ ರಸದೂಟ. ನೋಡಿರುವವರಿಗೆ ನಾಸ್ತಾಲ್ಜಿಯಾ.

 
 
 
 
 
 
 
 
 
 
 

Leave a Reply