ಅಂಬಾಗಿಲು : ಬೈಕ್-ಟಿಪ್ಪರ್ ಡಿಕ್ಕಿ; ಸವಾರ ಸಾವು, ಸಹಸವಾರ ಗಂಭೀರ!

ಟಿಪ್ಪರ್‌ ಮತ್ತು ಬೈಕ್‌ ನಡುವೆ ಭೀಕರ ಅಪಘಾತವೊಂದು ಸಂಭವಿಸಿದ್ದು, ಈ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟ ಘಟನೆಯೊಂದು ಶುಕ್ರವಾರ ಉಡುಪಿಯ ಅಂಬಾಗಿಲು-ಉಡುಪಿ ಮುಖ್ಯ ರಸ್ತೆಯಲ್ಲಿ ನಡೆದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಟಿಪ್ಪರ್‌ ನ ಅಡಿಭಾಗದಲ್ಲಿ ಬೈಕ್‌ ಬಿದ್ದಿದೆ.

ಮೃತ ಬೈಕ್‌ ಸವಾರನನ್ನು ಬ್ರಹ್ಮಾವರದ ಮಟಪಾಡಿ ಮೂಲದ ಪ್ರಭಾಕರ ಆಚಾರಿ ಎಂದು ಗುರುತಿಸಲಾಗಿದೆ. ಪೆರಂಪಳ್ಳಿ ಕಡೆಯಿಂದ ಅಂಬಾಗಿಲು ಮುಖ್ಯ ರಸ್ತೆಗೆ ಬರುತ್ತಿದ್ದರು. ಬೈಕ್‌ನಲ್ಲಿದ್ದ ಸಹಸವಾರ ಕೂಡಾ ತೀವ್ರ ಗಾಯಗೊಂಡಿದ್ದಾರೆ. ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 
 
 
 
 
 
 
 
 
 
 

Leave a Reply