ಉಡುಪಿಯಲ್ಲಿ ಸಂಗೀತೋತ್ಸವ

ರಾಗ ಧನ ಉಡುಪಿ (ರಿ) ಇವರು ನಡೆಸುವ 35ನೆಯ ಶ್ರೀ ಪುರಂದರ ದಾಸ ಹಾಗೂ ಸಂಗೀತ ತ್ರಿಮೂರ್ತಿಗಳ ಸಂಗೀತೋತ್ಸವವು ಫೆಬ್ರವರಿ 4 ಹಾಗೂ 5 ರಂದು ಮಣಿಪಾಲದ ಅಲೆವೂರು ರಸ್ತೆಯಲ್ಲಿರುವ ‘ಮಣಿಪಾಲ ಡಾಟ್ ನೆಟ್’ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ.

ಫೆಬ್ರವರಿ 4 ಶನಿವಾರ ಮಧ್ಯಾಹ್ನ 2 ಗಂಟೆಗೆ ಸಂಗೀತ ವಿದ್ಯಾರ್ಥಿಗಳಿಂದ ಪಿಳ್ಳಾರಿ ಗೀತೆಗಳು ಹಾಗೂ ಎಲ್ಲಾ ಕಲಾವಿದರಿಂದ ಶ್ರೀ ತ್ಯಾಗರಾಜರ ಘನಪಂಚ ರತ್ನ ಕೃತಿಗಳ ಗಾಯನ ನಡೆಯಲಿದೆ. ಸಂಜೆ 4.45ರಿಂದ ‘ರಾಗ ಧನ ಪಲ್ಲವಿ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಲಿದೆ. ಉಡುಪಿಯ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲೋಪಾಸಕ ಡಾ.ಹರಿಕೃಷ್ಣ ಪಾಣಾಜೆ, ಪುತ್ತೂರು ಭಾಗವಹಿಸಲಿದ್ದಾರೆ. ಕಲಾಪೋಷಕಿ ಮಣಿಪಾಲದ ಶ್ರೀಮತಿ ಗಿರಿಜಮ್ಮ ಅವರು ‘ಕು. ಆತ್ರೇಯೀ ಕೃಷ್ಣಾ’ ಕಾರ್ಕಳ ಅವರಿಗೆ ಈ ಬಾರಿಯ ‘ಪಲ್ಲವಿ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ. ನಂತರ ಕು. ಆತ್ರೇಯೀ ಕೃಷ್ಣಾ ಅವರ ಸಂಗೀತ ಕಛೇರಿಯು ನಡೆಯಲಿದೆ. ಇವರಿಗೆ ವಯಲಿನ್ ನಲ್ಲಿ ಶ್ರೀ ಕಾರ್ತಿಕೇಯ ಬೆಂಗಳೂರು, ಮೃದಂಗದಲ್ಲಿ ಶ್ರೀ ವಿನೋದ್ ಶ್ಯಾಮ್ ಆನೂರ್ ಹಾಗೂ ಘಟಂನಲ್ಲಿ ಶ್ರೀ ಶಮಿತ್ ಗೌಡ, ಮೈಸೂರು ಅವರು ಸಹಕರಿಸಲಿದ್ದಾರೆ.

ಫೆಬ್ರವರಿ 5 ಭಾನುವಾರ ಬೆಳಿಗ್ಗೆ 8.45 ರಿಂದ ಶ್ರೀ ಅನಿರುದ್ಧ ಐತಾಳ್ ಬೆಂಗಳೂರು ಅವರ ಹಿಂದುಸ್ತಾನಿ ಗಾಯನ ನಡೆಯಲಿದೆ. ಶ್ರೀ ವಿಘ್ನೇಶ್ ಕಾಮತ್, ಕುಂದಾಪುರ ತಬಲಾದಲ್ಲಿ, ಶ್ರೀ ಪ್ರಸಾದ್ ಕಾಮತ್ ಉಡುಪಿ ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ.
10:45 ರಿಂದ ಶ್ರೀ ಜಿ ಆರ್ ಎಸ್. ಮೂರ್ತಿ ಚೆನ್ನೈ ಅವರ ವೀಣವಾದನ ಕಛೇರಿ ನಡೆಯಲಿದೆ. ಇವರಿಗೆ ಶ್ರೀ ಚೆಲುವರಾಜ್ ಬೆಂಗಳೂರು ಇವರು ಮೃದಂಗದಲ್ಲಿ ಹಾಗೂ ಶ್ರೀ ಎನ್ ಗುರುಮೂರ್ತಿ ಅವರು ಘಟಂನಲ್ಲಿ ಸಹಕರಿಸಲಿದ್ದಾರೆ. ಮಧ್ಯಾಹ್ನ 2 ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ರಚಿಸಿದ ಕೃತಿಗಳನ್ನಾಧರಿಸಿದ ಕೃತಿಗಳ ಗಾಯನವು ನಾಡಿನ ಯುವ ಪ್ರತಿಭಾನ್ವಿತ ಕಲಾವಿದರಿಂದ ನಡೆಯಲಿದೆ. ವಯಲಿನ್ ನಲ್ಲಿ ಕು. ಮಹತೀ ಕೆ. ಕಾರ್ಕಳ ಹಾಗೂ ಮೃದಂಗಂ ನಲ್ಲಿ ಶ್ರೀ ಸುನಾದಕೃಷ್ಣ ಚೆನ್ನೈ ಸಹಕರಿಸಲಿದ್ದಾರೆ. ಸಂಜೆ 4.20ಕ್ಕೆ ಸಮಾರೋಪ ಸಮಾರಂಭವು ಡಾ. ಶ್ರೀಕಿರಣ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ರಾಘವೇಂದ್ರ ರಾವ್ ಭಾಗವಹಿಸಲಿದ್ದಾರೆ. ಸಂಜೆ 5ರಿಂದ ವಿದ್ವಾನ್ ಶ್ರೀ ಸಂಪಗೋಡು ವಿಘ್ನರಾಜ ಅವರ ಸಂಗೀತ ಕಛೇರಿ ನಡೆಯಲಿದೆ. ವಯಲಿನ್ ನಲ್ಲಿ ಶ್ರೀ ಮತ್ತೂರು ಶ್ರೀನಿಧಿ, ಮೃದಂಗಂ ನಲ್ಲಿ ಶ್ರೀ ತುಮಕೂರು ರವಿಶಂಕರ್ ಹಾಗೂ ಖಂಜೀರದಲ್ಲಿ ಶ್ರೀ ಗುರುಪ್ರಸನ್ನ ಬೆಂಗಳೂರು ಸಹಕರಿಸಲಿದ್ದಾರೆ, ಎಂದು ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಉಮಾಶಂಕರಿ ಪತ್ರಿಕಾ ಪ್ರಕಟಣೆಯನ್ನು ನೀಡಿರುತ್ತಾರೆ.

 
 
 
 
 
 
 
 
 
 
 

Leave a Reply