ಕೋಟ: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಕುಸಿದುಬಿದ್ದು ಸಾವು

ಕೋಟ: ವ್ಯಕ್ತಿಯೊಬ್ಬರು ಕುಸಿದುಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಮೊಳಹಳ್ಳಿ ಎಂಬಲ್ಲಿ ಜ.27ರಂದು ಮಧ್ಯಾಹ್ನ ನಡೆದಿದೆ.
ಮೃತರನ್ನು ಮೊಳಹಳ್ಳಿ ಗ್ರಾಮದ 38 ವರ್ಷದ ಅಶೋಕ್ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ.

ಇವರು ಮಂಗಳೂರಿನ ಕಾವೂರಿನಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದು,  ಒಂದು ವಾರದ ಹಿಂದೆ ರಜೆ ಮಾಡಿ ಮನೆಗೆ ಬಂದಿದ್ದರು. ನಿನ್ನೆ ಮನೆಯಿಂದ ಹೊರಗೆ ಹೋದವರು, ಮನೆಯ ಬಳಿಯ ರಸ್ತೆಯ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply