ಕೋಟ- ಪಂಚವರ್ಣದ ಆಶ್ರಯದಲ್ಲಿ ಅಸಾಡಿ ವಡ್ರ್ ಗ್ರಾಮೀಣ ಸೋಗಡಿನ ತಿನಿಸುಗಳ, ಆಟೋಟ ಸ್ಪರ್ಧೆ ಸಂಯೋಜನೆ

ಕೋಟ: ಇದೇ ಮೊದಲ ಬಾರಿಗೆ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ನೇತ್ರತ್ವದಲ್ಲಿ ಗ್ರಾಮೀಣ ಸೋಗಡಿನ ತಿನಿಸುಗಳು ಹಾಗೂ ಕ್ರೀಡೆಗಳ ಸ್ಪರ್ಧಾ ಕಾರ್ಯಕ್ರಮ ಆಸಾಡಿ ವಡ್ರ್ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಇದೇ ಬರುವ ಜು.31ರಂದು ಕೋಟತಟ್ಟು ಪಂಚಾಯತ್ ವ್ಯಾಪ್ತಿಯ ಹಂದಟ್ಟು ಗೆಳೆಯರ ಬಳಗ ಸಭಾಭವನದಲ್ಲಿ ಆಯೋಜಿಸಿದೆ.
ಪ್ರಸ್ತುತ ಕಾಲಘಟ್ಟದಲ್ಲಿ ಮರಿಚಿಕೆಯಾಗುತ್ತಿರುವ ವಿವಿಧ ಬಗೆಯ ಹಳ್ಳಿಗಾಡಿನ ತಿನಿಸುಗಳ ಅನಾವರಣವನ್ನು ಗೀತಾನಂದ ಫೌಂಡೇಶನ್ ನಿರ್ದೇಶಕಿ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ಗೈಯಲಿದ್ದಾರೆ. ಗ್ರಾಮ್ಯ ಭಾಷೆಯ ಅವಲೋಕನವನ್ನು ಮಣೂರು ಜಯರಾಮ ಶೆಟ್ಟಿ ನಡೆಸಲಿದ್ದಾರೆ. ಕಾರ್ಯಕ್ರಮವನ್ನು ಸಮಾಜಕಲ್ಯಾಣ ಮತ್ತು ಹಿಂದುಳಿದ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪತ್ನಿ ಶಾಂತ ಎಸ್ ಪೂಜಾರಿ ಉದ್ಘಾಟಿಸಲಿದ್ದಾರೆ.
ಗ್ರಾಮೀಣ ಕ್ರೀಡೆಯನ್ನು  ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ನೆರವೆರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ವಹಿಸಲಿದ್ದಾರೆ.ಪಂಚವರ್ಣ ಯುವಕ ಮಂಡಲದ ಪದಾಧಿಕಾರಿಗಳು, ತೀರ್ಪುಗಾರರು, ಗಣ್ಯರ ಉಪಸ್ಥಿತಿ ಇರಲಿದೆ
 
 
 
 
 
 
 
 
 
 
 

Leave a Reply