ಅವಧಿ ಮೀರಿದ `DL-RC’ ಸಿಂಧುತ್ವವ ಸೆಪ್ಟೆಂಬರ್ ವರೆಗೆ ವಿಸ್ತರಣೆ

ನವದೆಹಲಿ : ಚಾಲನಾ ಪರವಾನಗಿಗಳು, ವಾಹನ ನೋಂದಣಿ ಪ್ರಮಾಣಪತ್ರಗಳು, ಫಿಟ್ನೆಸ್ ಪ್ರಮಾಣಪತ್ರಗಳು ಮತ್ತು ಇತರ ಪರವಾನಗಿಗಳಂತಹ ದಾಖಲೆಗಳ ಸಿಂಧುತ್ವವನ್ನು ಸೆಪ್ಟೆಂಬರ್ 30,2021 ರವರೆಗೆ ಸರ್ಕಾರ ವಿಸ್ತರಗೊಳಿಸಲಾಗಿದೆ.

ಫೆಬ್ರವರಿ 2020 ರ ನಂತರ ಅವಧಿ ಮೀರಿದ ಮತ್ತು ಕೊರೋನಾ ನಿರ್ಬಂಧಗಳಿಂದಾಗಿ ನವೀಕರಿಸಲು ಸಾಧ್ಯವಾಗದ ದಾಖಲೆಗಳು ಮಾತ್ರ ವಿಸ್ತರಣೆಗೆ ಅನ್ವಯಿಸುತ್ತದೆ ಎಂದು ಸರ್ಕಾರ ಹೇಳಿದೆ. ಕೋವಿಡ್-19 ಹರಡುವುದನ್ನು ತಡೆಗಟ್ಟುವ ಅಗತ್ಯವನ್ನು ಪರಿಗಣಿಸಿ, ಫಿಟ್ ನೆಸ್, ಪರ್ಮಿಟ್ (ಎಲ್ಲಾ ವಿಧಗಳು), ಪರವಾನಗಿ, ನೋಂದಣಿ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆ(ಗಳ) ಸಿಂಧುತ್ವವನ್ನು ಸೆಪ್ಟಂಬರ್ 30ರವರೆಗೆ ಮಾನ್ಯವೆಂದು ಪರಿಗಣಿಸಬಹುದು ಎಂದು ಎಂಒಆರ್ ಟಿ ಮತ್ತು ಎಚ್ ಜಾರಿ ಅಧಿಕಾರಿಗಳಿಗೆ ಸಲಹೆ ನೀಡಿದೆ.

ಕೋವಿಡ್-19 ರೋಗದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಾಗ ನಾಗರಿಕರು ಸಾರಿಗೆ ಸಂಬಂಧಿತ ಸೇವೆಗಳನ್ನು ಪಡೆಯಲು ಹೊಸ ಸಲಹೆಯನ್ನು ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.ಹಿಂದೆ ಫೆ.1ರಿಂದ ಜೂ.30ರವರೆಗಿನ ದಾಖಲೆಗಳ ಮಾನ್ಯತೆಯನ್ನು ನೀಡಿ ಪ್ರಕಟಣೆ ನೀಡಲಾಗಿತ್ತು. ಇದೀಗ ಇದರ ಗಡುವು ಅವಧಿಯನ್ನು ಮತ್ತೆ ಎರಡು ತಿಂಗಳಿಗೆ ಸಚಿವಾಲಯವು ವಿಸ್ತರಣೆ ಮಾಡಿದೆ.

ಲಾಕ್ ಡೌನ್ ಕಾರಣದಿಂದ ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು 1989 ಕ್ಕೆ ಸಂಬಂಧಿಸಿದ ದಾಖಲೆಗಳ ನವೀಕರಣದಲ್ಲಿ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸೂಚನೆ ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

 
 
 
 
 
 
 
 
 
 
 

Leave a Reply