ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯಾಗಿ ಕಿಚ್ಚ ಸುದೀಪ್‌ ನೇಮಕ

ರಾಜ್ಯದಲ್ಲಿನ ಜಾನುವಾರುಗಳ ರಕ್ಷಣೆಗಾಗಿ ಕರ್ನಾಟಕ ಸರ್ಕಾರ ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯ ರಾಯಭಾರಿಯಾಗಿ ಸ್ಯಾಂಡಲ್‌ವುಡ್‌ನ ನಾಯಕ ನಟ ಕಿಚ್ಚ ಸುದೀಪ್‌ ಅವರನ್ನು ನೇಮಕ ಮಾಡಲಾಗಿದೆ. ಸುದೀಪ್‌ ಹುಟ್ಟುಹಬ್ಬದ ದಿನದಂದೇ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿರುವುದಾಗಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಪತ್ರದ ಮೂಲಕ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ʻಪುಣ್ಯಕೋಟಿ ದತ್ತು ಯೋಜನೆʼ ಮೂಲಕ ಗೋ-ಸಂಪತ್ತನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ. ಸರ್ಕಾರದ ಈ ಕಾರ್ಯಕ್ರಮದ ಅಡಿಯಲ್ಲಿ ನಮ್ಮ ಗೋವುಗಳನ್ನು ರಕ್ಷಿಸಲು ಮತ್ತು ಗೋಶಾಲೆಗಳನ್ನು ನಿರ್ವಹಿಸುವುದಕ್ಕೆ ಸರ್ಕಾರದ ಜೊತೆಗೂಡಿ ಜನರೂ ಕೈಜೋಡಿಸಲು ಅವಕಾಶವಿದೆ.

ಗೋ ಸಂಪತ್ತಿನ ರಕ್ಷಣೆಗೆ ಸರ್ಕಾರ ಕೈಗೊಂಡಿರುವ ಸಂಕಲ್ಪಕ್ಕೆ ಎಲ್ಲರೂ ಕೈ ಜೋಡಿಸಿದರೆ ಮಾತ್ರ ಸಾಧ್ಯ. ಗೋವುಗಳನ್ನು ದತ್ತು ಪಡೆದು ಪೋಷನೆ ಮಾಡಲು ಅವಕಾಶ ನೀಡುವ ಈ ಯೋಜನೆ ಕುರಿತು ಜಾಗೃತಿ ಅವಶ್ಯಕತೆಯಿದೆ. ಈ ಸತ್ಕಾರ್ಯಕ್ಕೆ ಕೈ ಜೋಡಿಸಬೇಕೆಂದು ಸಚಿವ ಪ್ರಭು ಚವ್ಹಾಣ್‌ ಕಳೆದ ಜುಲೈ ತಿಂಗಳಲ್ಲಿ ಸರ್ಕಾರದ ಪರವಾಗಿ ಕಿಚ್ಚ ಸುದೀಪ ಅವರು ಈ ಯೋಜನೆಯ ರಾಯಭಾರಿಯಾಗಬೇಕೆಂದು ಮನವಿ ಮಾಡಿದ್ದರು. ಇದೀಗ ಇಂದು ಅವರನ್ನು ಅಧಿಕೃತವಾಗಿ ರಾಯಭಾರಿಯನ್ನಾಗಿ ನೇಮಿಸಿದ್ದು, ಈ ಜಾಗೃತಿಗೆ ಸುದೀಪ್‌ ಯಾವುದೇ ಸಂಭಾವನೆ ಪಡೆದಿಲ್ಲ ಎಂದು ಸಚಿವರು ತಿಳಿಸಿದರು.

 
 
 
 
 
 
 
 
 

Leave a Reply