ಮೂರು ಕಿ.ಮೀ. ಪ್ರವಾಹದ ನೀರಿನಲ್ಲಿ ಈಜಿ ಮಾವುತನನ್ನು ದಡಕ್ಕೆ ತಲುಪಿಸಿದ ಆನೆ

ನಿಯತ್ತು ಪ್ರಾಣಿಗಳ ಹುಟ್ಟು ಗುಣ, ತನ್ನನ್ನು ಸಾಕಿದ ಮಾಲೀಕನ ರಕ್ಷಣೆಗಾಗಿ ಏನು ಬೇಕಾದರೂ ಮಾಡುತ್ತವೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ಮಾವುತನನ್ನು ಕಾಪಾಡಲು ಆನೆಯೊಂದು ಪ್ರವಾಹದಲ್ಲಿ ಈಜಿರುವ ಘಟನೆ ನಡೆದಿದೆ.

ಭಾರೀ ಮಳೆಯಿಂದಾಗಿ ಪಾಟ್ನಾ ಪಕ್ಕದ ರಾಘೋಪುರದ ಗಂಗಾನದಿಯಲ್ಲಿ ಪ್ರವಾಹವುಂಟಾಗಿ ಮಾವುತ ಹಾಗೂ ಆನೆ ಸಿಕ್ಕಿಹಾಕಿಕೊಂಡಿದೆ. ನೀರಿನಲ್ಲಿ ಆನೆ ಮುಳಿಗಡೆಯಾದರೂ ಸಹ ಮಾವುತನನ್ನು ಕೆಳಗೆ ಬೀಳಿಸದೆ ಸುಮಾರು ಮೂರು ಕಿ.ಮೀ.ಪ್ರವಾಹದ ನೀರಿನಲ್ಲಿ ಈಜಿ ಮಾವುತನನ್ನು ದಡಕ್ಕೆ ತಲುಪಿಸಿದೆ. ಮಾವುತನನ್ನು ಹೊತ್ತು ದೈತ್ಯ ಸಲಗ ಈಜುತ್ತಿರುವ ದೃಶ್ಯ  ವೈರಲ್ ಆಗಿದೆ. ಪ್ರಾಣಿಗಳ ಪ್ರೀತಿ, ಮಮಕಾರಕ್ಕೆ ನೆಟ್ಟಿಗರು ಜೈಕಾರ ಹಾಕಿದ್ದಾರೆ.

 
 
 
 
 
 
 
 
 
 
 

Leave a Reply