ಉಡುಪಿ : ಜ್ಯುವೆಲರ್ಸ್ ಮಾಲೀಕನಿಗೆ ವಂಚಿಸಿ ಅಸಲಿ ಚಿನ್ನದೊಂದಿಗೆ ಬುರ್ಕಾದಾರಿ ಮಹಿಳೆಯರು ಎಸ್ಕೇಪ್!

ಉಡುಪಿಯ ಕನಕದಾಸ ರಸ್ತೆಯ ಮಾರುತಿ ಜ್ಯುವೆಲರ್ಸ್ ಮಾಲೀಕನಿಗೆ ಮೂವರು ಬುರ್ಕಾದಾರಿ ಮಹಿಳೆಯರು ವಂಚಿಸಿ ನಕಲಿ ಚಿನ್ನವನ್ನು ಅಸಲಿ ಚಿನ್ನದೊಂದಿಗೆ ಬದಲಿಸಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಉಡುಪಿಯ ಕನಕದಾಸ ರಸ್ತೆಯಲ್ಲಿರುವ ಮಾರುತಿ ಜ್ಯುವೆಲರ್ಸ್ ನಲ್ಲಿ ಫೆ.18 ರಂದು ಸಮಯ ಸಂಜೆ 7:30ಕ್ಕೆ ಬಂದ ಸುಮಾರು 35 ರಿಂದ 45 ವರ್ಷ ಪ್ರಾಯದ ಮೂವರು ಬುರ್ಕಾದಾರಿ ಮಹಿಳೆಯರು ಗ್ರಾಹಕರಂತೆ ಅಂಗಡಿಗೆ ಬಂದು 15,800 ಗ್ರಾಂ ತೂಕದ ಒಂದು ಚಿನ್ನದ ಬ್ರೆಸ್ಕೆಟ್ ಖರೀದಿಸಿದ್ದು, ಇದಕ್ಕೆ ಬದಲಾಗಿ ತಮ್ಮ ಬಳಿ ಇದ್ದ 31.490ಗ್ರಾಂ ತೂಕದ ಒಂದು ನೆಕ್ಲಸ್ ಮತ್ತು 10.940 ಗ್ರಾಂ ತೂಕದ ಬೆಂಡೋಲೆಗೆ ಹಾಕುವ ಜುಮುಕಿ ನೀಡಿ ಮಾಲೀಕನಿಂದ 48,771/- ರೂಪಾಯಿ ಉಳಿಕೆ ಹಣದ ಪೈಕಿ 19,000/- ರೂಪಯಿಯನ್ನು ನಗದಾಗಿ ಪಡೆದು ಕೊಂಡು ಅಂಗಡಿಯಿಂದ ಸಮಯ 8:30 ಕ್ಕೆ ಹೋಗಿದ್ದು, ಮಹಿಳೆಯರು ವ್ಯವಹಾರದ ಸಮಯದಲ್ಲಿ ಚೌಕಾಶಿ ಮಾಡುವ ವೇಳೆ ಮಾಲೀಕರ ಗಮನವನ್ನು ಬೇರೆಡೆಗೆ ಸೆಳೆದು ಪರೀಕ್ಷೆಯ ಸಮಯ ನೀಡಿದ್ದ ಅಸಲಿ ಚಿನ್ನದ ಆಭರಣಗಳನ್ನು ಹೋಲುವ ನಕಲಿ ಚಿನ್ನಭರಣಗಳನ್ನು ಮಾಲೀಕರಿಗೆ ನೀಡಿ ವಂಚಿಸಿ ಒಟ್ಟು 1,98,923/- ಮೌಲ್ಯದ ಅಸಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಈ ಕುರಿತು ಮಾಲೀಕರಾದ ನಿತ್ಯಾನಂದ ಅವರು ಉಡುಪಿಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 
 
 
 
 
 
 
 
 
 
 

Leave a Reply