ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಉತ್ಪಾದಕರಿಂದ ನಗರದಲ್ಲಿ ಅತೀ ದೊಡ್ಡ ಪ್ರದರ್ಶನ “ಬಿಲ್ಡ್ ಟೆಕ್-2024”

ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜೀನಿಯರ್ ಮತ್ತು ಆರ್ಕಿಟೆಕ್ಟ್ ಮತ್ತು ಯು. ಎಸ್. ಕಮ್ಯೂನಿಕೇಶನ್ಸ್, ಬೆಂಗಳೂರು ವತಿಯಿಂದ ಬಿಲ್ಡ್ ಟೆಕ್-2024 ಎಂಬ ಹೆಸರಿನ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನವನ್ನು ದಿನಾಂಕ 23, 24 ಮತ್ತು 25 ಫೆಬ್ರವರಿ 2024 (ಮೂರು ದಿನಗಳ ಕಾಲ) ಉಡುಪಿ, ಕುಂಜಿಬೆಟ್ಟುವಿನ ಎಂ.ಜಿ.ಎಂ. ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಉತ್ಪಾದಕರಿಂದ ಕಟ್ಟಡ ಸಾಮಗ್ರಿಗಳು ಇಂಟೀರಿಯರ್ಸ್ ಎಕ್ಸೆರಿಯರ್ಸ್ ಉತ್ಪಾದನೆಗಳು ನೇರವಾಗಿ ಗ್ರಾಹಕರಿಗೆ ತಲುಪುವಂತೆ ಒಂದೇ ಸೂರಿನಡಿಯಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ.

ವಿವಿಧ ಕಂಪನಿಗಳ ಡೋರ್ಸ್, ವಿಂಡೋಸ್ ಬಾತ್ ರೂಮ್ ಫಿಟ್ಟಿಂಗ್ಸ್, ಗ್ಲಾಸ್ ಅಂಡ್ ಗ್ಲಾಸ್ ಫಿಟ್ಟಿಂಗ್ಸ್, ಟೈಲ್ಸ್, ಸೆನಿಟರಿ ಅಂಡ್ ಪ್ಲಂಬಿಂಗ್, ಸ್ವಿಚ್ಚನ್ ಅಂಡ್ ಎಲೆಕ್ಟಿಕಲ್ ಫಿಟ್ಟಿಂಗ್ಸ್, ಕನ್ಸ್‌ಟ್ರಕ್ಷನ್ ಟೆಕ್ನಾಲಜೀಸ್, ಸೋಲಾರ್ ಪ್ರೋಡಕ್ಟ್ ಫ್ಲೋರಿಂಗ್ ಮತ್ತು ರೂಫಿಂಗ್‌ಗೆ ಸಂಬಂಧಿಸಿದ ಉತ್ಪನ್ನಗಳು, ಪೇಂಟ್ಸ್ ಮತ್ತು ವಾಟರ್ ಪೂಫ್ ಕೆಮಿಕಲ್ಸ್, ಸ್ಟೀಲ್, ಸಿಮೆಂಟ್, ಪ್ರೈವುಡ್. ಸೇಫ್ಟಿ ಮತ್ತು ಮೆಶಿನರಿ ಎಕ್ಯೂಪ್‌ ಮೆಂಟ್ಸ್, ಎಲಿವೇಟರ್ಸ್ ಮುಂತಾದ ಕಂಪನಿಗಳು ಅಪಾರವಾದ ಮಾಹಿತಿ ಕಣಜವನ್ನು ಹೊತ್ತುಕೊಂಡು ಈ ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ.

ಹೋಂ ಲೋನ್‌ಗಳ ಬಗ್ಗೆ ನಿಖರವಾದ ಮಾಹಿತಿ ನೀಡಲು ಪ್ರತಿಷ್ಠಿತ ಬ್ಯಾಂಕ್‌ಗಳು ಕೂಡ ಇಲ್ಲಿ ಪಾಲ್ಗೊಳ್ಳುತ್ತಿವೆ. ಇನ್ನು ಇಂಟೀರಿಯರ್ ಸಲುವಾಗಿ ವಿವಿಧ ಸೋಫಾ ಮತ್ತು ಡೈನಿಂಗ್ ಟೇಬಲ್ ಕಿಚನ್ ಸೆಟ್ ಮುಂತಾದವುಗಳನ್ನು ನೋಡಬಹುದಾಗಿದೆ. ಇನ್ನು ವಿಕ್ಷೀರಿಯರ್ಸ್‌ ಗಾಗಿ ಬೇರೆ ಬೇರೆ ಉತ್ಪನ್ನಗಳು ಕೂಡ ಇಲ್ಲಿ ಲಭ್ಯವಿರುತ್ತವೆ.

ಇದಲ್ಲದೆ, ಉಡುಪಿ ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ತಾಲೂಕುಗಳಿಂದ ಇಂಜಿನಿಯರ್ಸ್‌ಗಳು, ಕಾಂಟ್ರಾಕ್ಟರ್ಸ್, ಬಿಲ್ಡರ್ಸ್ ಅಂಡ್ ಡೆವಲಪರ್ಸ್, ಕಟ್ಟಡ ಸಾಮಗ್ರಿಗಳ ಉತ್ಪಾದಕರು ಮತ್ತು ಮಾರಾಟಗಾರರು. ಮೇಸನ್ಸ್, ಪೇಂಟರ್ಸ್, ಪ್ಲಂಬರ್ಸ್, ಟೈಲ್ಸ್ ಫಿಟ್ಟರ್ಸ್ ಬಾರ್ ಬೆಂಡರ್ಸ್ ಅಂಡ್ ಸೆಂಟ್ರಿಂಗ್ ಕಾರ್ಪೆಟರ್ಸ್ ಕೂಡ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸುತ್ತ ಮುತ್ತಲಿನ ಜಿಲ್ಲೆಗಳಿಂದ ಹೆಸರಾಂತ ಆರ್ಕಿಟೆಕ್ಟ್ ಮತ್ತು ಇಂಜಿನಿಯರ್ಸ್‌ಗಳನ್ನು ಕೂಡ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ನಗರದ ಪ್ರತಿಷ್ಠಿತ ಉದ್ದಮಿಗಳಾದ, ಶಾಂತ ಎಲೆಕ್ಟಿಕಲ್ಸ್ ಇಂಜೀನಿಯರ್ಸ್ ಪ್ರೈವೇಟ್ ಲಿಮಿಟೆಡ್ ಇವರು ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾಗಿರುತ್ತಾರೆ.

ನಗರದ ಇಂಜಿನಿಯರ್ಸ್‌ ಮತ್ತು ಆರ್ಕಿಟೆಕ್ಸ್‌ಗಳು ಮನೆ ಕಟ್ಟಿಸಬೇಕೆನ್ನುವರು. ಈಗಾಗಲೇ ಕಟ್ಟಿಸಲಿಕ್ಕೆ ಪ್ರಾರಂಭಿಸಿದವರು ಮುಕ್ತಾಯದ ಹಂತದಲ್ಲಿರುವವರು ಇವತ್ತು ಪ್ರದರ್ಶಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರಿಗೆ ಉಚಿತವಾಗಿ ಪ್ರವೇಶ ಇರುತ್ತದೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಜೊತೆ ಸದೃಢ ಸುಂದರ ಮನೆ ಕಟ್ಟುವ ಕನಸನ್ನು ನನಸಾಗಿಸಿ ಕೊಳ್ಳಬಹುದು.

ದಿನಾಂಕ : 23-02-2024 ಶುಕ್ರವಾರ ಮಧ್ಯಾಹ್ನ 12 ಗಂಟೆಗೆ, ಕ್ರಡೈ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಮನೋಹರ್ ಎಸ್. ಶೆಟ್ಟಿ ಇವರಿಂದ ಉದ್ಘಾಟನೆಗೊಳ್ಳುವುದು. ಎ.ಸಿ.ಸಿ.ಇ.ಎ.ಯ ಅಧ್ಯಕ್ಷರಾದ ಶ್ರೀ ಪಾಂಡುರಂಗ ಆಚಾರ್ ಕೆ. ಅಧ್ಯಕ್ಷತೆಯನ್ನು ವಹಿಸಲಿರುವರು. ಉಡುಪಿ ಶಾಸಕರಾದ ಮಾನ್ಯ ಶ್ರೀ ಯಶ್‌ಪಾಲ್ ಸುವರ್ಣ ಇವರು ಗೌರವ ಉಪಸ್ಥಿತಿಯಲ್ಲಿರುತ್ತಾರೆ.

ಮುಖ್ಯ ಅತಿಥಿಗಳಾಗಿ ಎ.ಸಿ.ಸಿ.ಇ.ಎ.ಯ ಗೌರವ ಅಧ್ಯಕ್ಷರಾದ ಶ್ರೀ ನಾಗೇಶ್ ಹೆಗ್ಡೆ, ಮಾಂಡವಿ ಬಿಲ್ಡರ್ಸ್ & ಡೆವಲಪರ್ಸ್ ಡಾ. ಜೆರ್ರಿ ವಿನ್ಸೆಂಟ್ ಡಯಾಸ್, ಉಜ್ವಲ್ ಡೆವಲರ್ಪನ ಶ್ರೀ ಪುರುಷೋತ್ತಮ್ ಪಿ. ಶೆಟ್ಟಿ, ಎ.ಸಿ.ಸಿ.ಇ.ಎ.ಯ ಮಾಜಿ ಅಧ್ಯಕ್ಷರಾದ ಶ್ರೀ ಗೋಪಾಲ್ ಎಂ. ಭಟ್ ಹಾಗೂ ಶಾಂತ ಎಲೆಕ್ಟಿಕಲ್ಸ್‌ನ ಶ್ರೀ ಶ್ರೀಪತಿ ಭಟ್ ಭಾಗವಹಿಸಲಿರುವರು. ಈ ಪ್ರದರ್ಶನವು ಸಾರ್ವಜನಿಕರಿಗೆ ಉಚಿತ ಪ್ರವೇಶ ಒಳಗೊಂಡಿದ್ದು, ಕೇವಲ 3 ದಿನ ಮಾತ್ರ ಆಗಿರುತ್ತದೆ. 

 
 
 
 
 
 
 
 
 
 
 

Leave a Reply