ಮತ್ತೆ ರಾಗಿಣಿ,​ ​ಸಂಜನಾ  ​ಇಬ್ಬರಿಗೂ ಜೈಲೂಟದ ಚಂದನವನ

ಬೆಂಗಳೂರು: ಚಂದನವನದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಇಬ್ಬರು  ನಟಿಯರಿಗೆ ಇನ್ನಷ್ಟು ದಿನಗಳ ಜೈಲೂಟ  ಗ್ಯಾರೆಂಟಿಯಾಗಿದೆ.​ ​ಹೌದು ಎನ್​ಡಿಪಿಎಸ್​ ವಿಶೇಷ ನ್ಯಾಯಾಲಯ ನಟಿಮಣಿಯರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು  ವಜಾಗೊಳಿಸಿದೆ.

 ಈ ಹಿಂದೆ ಸಿಸಿಬಿ ಕೈ ಸೇರಿದ್ದ ನಟಿಯರು ನಂತರ ಜೈಲು ಪಾಲಾಗಿದ್ದರು. ರಾಗಿಣಿ ಸೆಪ್ಟೆಂಬರ್​ 14 ರಂದು ಮತ್ತು ಸಂಜನಾ ಸೆಪ್ಟೆಂಬರ್​ 16ರಂದು ಬಂಧನವಾಗಿದ್ದ ಇವರಿಬ್ಬರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತ್ತು. ಇಂದು ನಡೆದ ಜಾಮೀನು ವಿಚಾರಣೆಯಲ್ಲಿ ಅರ್ಜಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ, ಸಿಸಿಬಿ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿರುವುದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂಬುದನ್ನು ಹೇಳಿದ್ದಾರೆ.

 ಇಂದು ಜಾಮೀನು ಸಿಗುವ ಮತ್ತು ಬಿಡುಗಡೆಯಾಗುವ ಆಸೆ ಹೊಂದಿದ್ದ ನಟಿಯರಿಬ್ಬರೂ ತೀರ್ಪು ಕೇಳಿ ಬೇಸರ ಗೊಂಡಿದ್ದಾರೆ. ನಾವು ಯಾವ ತಪ್ಪು ಮಾಡಿಲ್ಲ ಎನ್ನುತ್ತ ಜೈಲಿನ ಅಧಿಕಾರಿಗಳಲ್ಲಿ ಹೇಳಿ ಕೊಂಡಿದ್ದಾರೆ. ಹಾಗೇ ಇನ್ನುಳಿದ ಆರೋಪಿಗಳಾದ ಶಿವಪ್ರಕಾಶ್, ವಿನಯ್ ಕುಮಾರ್ ಹಾಗೂ​ ರಾಹುಲ್​ ತೋನ್ಸೆ ಸಲ್ಲಿಸಿದ್ದ ಅರ್ಜಿಯನ್ನೂ  ಕೋರ್ಟ್ ವಜಾಗೊಳಿಸಿದೆ.

Leave a Reply