ಪೊಲೀಸ್​ ಠಾಣೆ ಎದುರು ಆಫ್ರಿಕನ್​ ಪ್ರಜೆಗಳ ಗೂಂಡಾಗಿರಿ

ಬೆಂಗಳೂರು: ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದ ಆಫ್ರಿಕನ್ ಪ್ರಜೆಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿ ದ್ದಾರೆ. ಜೆಸಿ ನಗರ ಪೊಲೀಸ್ ಠಾಣೆಯ ಎದುರು ಆಫ್ರಿಕನ್ ಪ್ರಜೆ ಸಾವು ಖಂಡಿಸಿ ಠಾಣೆ ಎದುರು ಪ್ರತಿಭಟನೆ ನಡೆಸಲು ಮುಂದಾದರು. ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಆಫ್ರಿಕನ್ ಪ್ರಜೆಗಳು ಇದ್ದಕ್ಕಿದ್ದಂತೆ ಠಾಣೆಗೆ ನುಗ್ಗಲು ಮುಂದಾದರು. ಅಷ್ಟೇ ಅಲ್ಲ, ಪೊಲೀಸ್ ಇನ್ ಸ್ಪೆಕ್ಟರ್ ಕೈಯಲ್ಲಿದ್ದ ಲಾಠಿ ಕಸಿದುಕೊಳ್ತಾರೆ. ಪೊಲೀಸರ ಮೇಲೆಯೇ ಹಲ್ಲೆ ನಡೆಸಿದರು. 

ಶಾಂತರೀತಿಯಲ್ಲಿ ಸಮಸ್ಯೆ ಪರಿಹರಿಸಬಹುದು ಎಂದುಕೊಂಡಿದ್ದ ಪೊಲೀಸರು ಆಫ್ರಿಕನ್ ಹುಚ್ಚಾಟದಿಂದ ಬೇಸತ್ತರು. ಕೂಡಲೇ ಅಕ್ಕಪಕ್ಕದ ಠಾಣೆಗಳಿಂದ ಪೊಲೀಸ್ ತಂಡ ಬರುತ್ತದೆ. ಸತ್ತವನ ಫೋಟೋ ಹಿಡಿದು ಕುಣಿಯುತ್ತಿದ್ದ ಆಫ್ರಿಕನ್ ಪಜೆ ಪೊಲೀಸರು ಲಾಠಿ ಬೀಸುತ್ತಿದ್ದಂತೆ ಎಸ್ಕೇಪ್ ಆಗಿದ್ದ.

ಇನ್ನು ದುರಂಹಕಾರವೋ ಅಥವಾ ನಶೆಯಲ್ಲಿ ತೇಲುತ್ತಿದ್ದರೋ ಏನೋ ಗೊತ್ತಿಲ್ಲ. ಪೊಲೀಸರು ಲಾಠಿ ಬೀಸುತ್ತಿ ದ್ದಂತೆಯೇ ದಿಕ್ಕಾಪಾಲಾಗಿ ಓಡಿದ ಆಫ್ರಿಕನ್ ಪ್ರಜೆಗಳಿಗೆ ಸರಿಯಾಗೇ ಪಾಠ ಕಲಿಸಿದ್ದಾರೆ. ವಿವಿಧ ಕಡೆಗಳಲ್ಲಿ ಪುಂಡಾಟ ನಡೆಸುತ್ತಿದ್ದ ಆಫ್ರಿಕನ್ ಪ್ರಜೆಗಳಿಗೆ ಪೊಲೀಸರು ಲಾಠಿಯಲ್ಲೇ ಬೆಂಡೆತ್ತಿದ್ದಾರೆ.‌ 

ಸ್ಥಳಕ್ಕೆ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಭೇಟಿ‌ ನೀಡಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಗೂಂಡಾಗಿರಿ ಮಾಡಿದ್ದಕ್ಕೆ ಲಾಠಿ ಬೀಸ ಬೇಕಾಯಿತು. 

 
 
 
 
 
 
 
 
 
 
 

Leave a Reply