ಮದುವೆಗೆ ಜಾತಿ ಅಡ್ಡಿ; 16 ಬಾರಿ ಇರಿದು ಯುವತಿಯನ್ನು ಕೊಲೆ ಮಾಡಿದ ಪಾಗಲ್ ಪ್ರೇಮಿ

ಜೀವನ್‌ಬಿಮಾ ನಗರ ಠಾಣೆ ವ್ಯಾಪ್ತಿಯಲ್ಲಿ ಲೀಲಾ ಪವಿತ್ರಾ ಎಂಬ ಯುವತಿಯನ್ನು ಚಾಕುವಿನಿಂದ 16 ಬಾರಿ ಇರಿದು ಕೊಲೆ ಮಾಡಲಾಗಿದ್ದು, ಈ ಸಂಬಂಧ ಆರೋಪಿ ದಿನಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ

ಆಂಧ್ರಪ್ರದೇಶದ ಲೀಲಾ ಪವಿತ್ರಾ ಎಂ.ಎಸ್ಸಿ ಪದವೀಧರೆ. ಮುರುಗೇಶಪಾಳ್ಯದ ಲ್ಯಾಬೋರೇಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.ಮಂಗಳವಾರ ಸಂಜೆ ಕೆಲಸ ಮುಗಿಸಿ ಕಚೇರಿಯಿಂದ ಹೊರ ಬರುತ್ತಿರುವ ಸಮಯ ಪವಿತ್ರಾಳ ಮೇಲೆ ಆರೋಪಿ ದಿನಕರ್ ದಾಳಿ ಮಾಡಿದ್ದಾನೆ.ಆರೋಪಿ ದಿನಕರ್ ಆಂಧ್ರಪ್ರದೇಶದ ದೊಮ್ಮಲೂರು ಬಳಿಯ ಲ್ಯಾಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದ.ಲೀಲಾ ಪವಿತ್ರಾ ಹಾಗೂ ದಿನಕರ್ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಾ ಮದುವೆಯಾಗಲು ತೀರ್ಮಾನಿಸಿದ್ದರು. ಆದರೆ ಅವರ ಜಾತಿ ಬೇರೆ ಬೇರೆಯಾಗಿದ್ದರಿಂದ ಮದುವೆಗೆ ಯುವತಿ ಕಡೆಯವರು ಒಪ್ಪಿರಲಿಲ್ಲ.

ದಿನಕರ್ ಜೊತೆ ಮಾತನಾಡದಂತೆ ಪೋಷಕರು ಯುವತಿಗೆ ತಾಕೀತು ಮಾಡಿದ್ದರು.ಹೀಗಾಗಿ ಯುವತಿ ಆರೋಪಿಯಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದ್ದರು. ಇದರಿಂದ ಸಿಟ್ಟಾದ ಆರೋಪಿ ದಿನಕರ್, ಲೀಲಾ ಪವಿತ್ರಾ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿ ಚಾಕು ಸಮೇತ ಕಚೇರಿ ಬಳಿ ಬಂದು ಕಾದು ಕುಳಿತಿದ್ದ.ಲೀಲಾ ಪವಿತ್ರಾ ಅವರು ಕಚೇರಿಯಿಂದ ಹೊರಬರುತ್ತಿದ್ದಂತೆ ಮಾತುಕತೆ ನೆಪದಲ್ಲಿ ಆರೋಪಿ ಅಡ್ಡಗಟ್ಟಿದ್ದ. ಇದೇ ಸಂದರ್ಭದಲ್ಲಿ ಅರೋಪಿ ದಿನಕರ್ ಪವಿತ್ರಾಳ ಹೊಟ್ಟೆಗೆ ಚಾಕುವಿನಿಂದ ಇರಿದು,ನಂತರ ಎದೆ, ಕುತ್ತಿಗೆ ಸೇರಿ ದೇಹದ 16 ಕಡೆಗಳಿಗೆ ಚಾಕು ಗಂಭೀರ ಗಾಯಗೊಳಿಸಿದ. ತೀವ್ರವಾದ ರಕ್ತಸ್ರಾವದಿಂದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆರೇಪಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

 
 
 
 
 
 
 
 
 
 
 

Leave a Reply