ಸಾಲ ಮರು ಪಾವತಿಸಿಲ್ಲ ಎಂದು ರೈತನ ಗರ್ಭಿಣಿ ಮಗಳನ್ನು ಟ್ರಾಕ್ಟರ್ ಹರಿಸಿ ಕೊಂದ ಫೈನಾನ್ಸ್ ಕಂಪನಿ!

ಸಾಲ ಮಾಡಿದ್ದನ್ನು ತೀರಿಸಲು ಆಗಿಲ್ಲ ಎಂಬ ಒಂದೇ ಕಾರಣಕ್ಕೆ ಮಹೀಂದ್ರಾ ‌ಫೈನಾನ್ಸ್ ಕಂಪನಿಯೊಂದು ಆ ರೈತನ ಗರ್ಭಿಣಿ ಮಗಳ ಮೇಲೆ ಟ್ರ್ಯಾಕ್ಟರ್ ಹರಿಸಿದ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.

ಈ ಅಮಾನುಷ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಜಾರ್ಖಂಡ್‍ನ ಹಜಾರಿಬಾಗ್‍ನಲ್ಲಿ, ಪ್ರಸಿದ್ಧ ಫೈನಾನ್ಸ್ ಕಂಪನಿಯೊಂದರ ಅಧಿಕಾರಿಗಳು, ಸಾಲ ತೀರಿಸದ ರೈತನಿಗೆ ಯಾವುದೇ ನೋಟಿಸ್ ಕಳಿಸದೆ, ನೇರವಾಗಿ ರೈತನ ಮನೆಗೆ ತೆರಳಿ ಟ್ರ್ಯಾಕ್ಟರ್ ಹಿಂಪಡೆಯಲು ಮುಂದಾಗಿದ್ದಾರೆ. ನೊಟೀಸ್ ಕಳಿಸದೇ ಟ್ರ್ಯಾಕ್ಟರ್‌ ಹಿಂಪಡೆಯಲು ಮುಂದಾದ ಅಧಿಕಾರಿಗಳ ಮೇಲೆ ರೈತನ ಗರ್ಭಿಣಿ ಮಗಳು ವಿರೋಧ ವ್ಯಕ್ತಪಡಿಸಿದ್ದಾಳೆ ಹಾಗೂ ಟ್ರ್ಯಾಕ್ಟರ್‌ಗೆ ಅಡ್ಡ ನಿಂತಿದ್ದಾಳೆ. ಫೈನಾನ್ಸ್ ಅಧಿಕಾರಿಗಳು ಆಕೆಯನ್ನು ಟ್ರಾಕ್ಟರ್ ನಡಿ ತಳ್ಳಿ ಕೊಂದಿದ್ದಾರೆ. ತಕ್ಷಣವೇ ಮನೆಯ ಸಿಬ್ಬಂದಿ ವರ್ಗ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಗರ್ಭಿಣಿ ಸಾವನ್ನಪ್ಪಿದ್ದಾಳೆ. ಟ್ರಾಕ್ಟರ್ ವಶಪಡಿಸಿಕೊಳ್ಳಲು ರೈತರ ಮನೆಗೆ ಹೋಗುವ ಮುನ್ನ ಫೈನಾನ್ಸ್ ಕಂಪನಿಯ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗೂ ಯಾವುದೇ ಮಾಹಿತಿ ನೀಡಿಲ್ಲ. ಹಾಗಾಗಿ ಈ ಪ್ರಕರಣವನ್ನು ಹಜಾರಿಬಾಗ್ ಎಸ್‍ಪಿ ಮನೋಜ್ ರತನ್ ಚೋಥೆ ಫೈನಾನ್ಸ್ ಕಂಪನಿಯ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದಾರೆ.

 
 
 
 
 
 
 
 
 

Leave a Reply