ಟೈಮಿಂಗ್ ವಿಚಾರದಲ್ಲಿ ಎರಡು ಬಸ್ಸಿನ ಸಿಬ್ಬಂದಿ ನಡುವೆ ಮಾರ್ಗ ಮಧ್ಯೆ ಗಲಾಟೆ

ಉಡುಪಿ: ಉಡುಪಿಯಿಂದ ಕಟೀಲು ಕಡೆಗೆ ಸಾಗುತ್ತಿದ್ದ ಎರಡು ಬಸ್ಸಿನ ಸಿಬ್ಬಂದಿ ನಡುವೆ ಮಾರ್ಗ ಮಧ್ಯದಲ್ಲಿ ದೊಡ್ಡ ಗಲಾಟೆ ನಡೆದಿದ್ದು, ಗಲಾಟೆ ವಿಡಿಯೋ ವೈರಲ್ ಆಗಿದೆ.

ನವದುರ್ಗಾ, ಹೆಸರಿನ ಖಾಸಗಿ ಬಸ್ ಕಟೀಲು ಕಡೆ ಹೋಗುತ್ತಿದ್ದಾಗ, ಇದನ್ನು ಹಿಂಬಾಲಿಸಿ ಬಂದ ಆಶಾ ಬಸ್ ಅಡ್ಡಗಟ್ಟಿದೆ. ನಂತರ ಟೈಮಿಂಗ್ ವಿಚಾರದಲ್ಲಿ ಎರಡು ಬಸ್ಸಿನ ನಿರ್ವಾಹಕರು ಹಾಗೂ ಚಾಲಕರ ನಡುವೆ ಗಲಾಟೆ ನಡೆದಿದೆ. ನಂತರ ಆಶಾ ಬಸ್  ನವದುರ್ಗಾ ಬಸ್ಸಿಗೆ ಢಿಕ್ಕಿ ಹೊಡೆದಿದ್ದು, ಇದರಿಂದ ಕೋಪಗೊಂಡ ನವದುರ್ಗಾ ಬಸ್ ಸಿಬ್ಬಂದಿ ಆಶಾ ಬಸ್ ಒಳಗೆ ಹೋಗಿ ಗಲಾಟೆ ನಡೆಸಿದ್ದಾರೆ. ಈ ಗಲಾಟೆ ವೀಡಿಯೋವನ್ನು ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 
 
 
 
 
 
 
 
 
 
 

Leave a Reply