ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂತ್ರಿ ಮಂಡಲದ ಉದ್ಘಾಟನಾ ಕಾರ್ಯಕ್ರಮ

ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ, ಕೆಮ್ಮಣ್ಣು ಇಲ್ಲಿ ದಿನಾಂಕ 20.07.2022ರಂದು ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ಮಂತ್ರಿ ಮಂಡಲದ ಉದ್ಘಾಟನಾ ಕಾರ್ಯಕ್ರಮವು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಬ್ರಹ್ಮಾವರ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಜ್ಯೋತಿಕಲಾ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಲ್ವಿಯಾನ್ ಎ.ಸಿ ಇವರ ಉಪಸ್ಥಿತಿಯಲ್ಲಿ ನೆರವೇರಿತು.

ಎಮಿ ಅತಿಥಿಯರನ್ನು ಸ್ವಾಗತಿಸಿದರು. ನಿಷಿಕ ನಿರೂಪಿಸಿದರು. ರಾಯನ್ ಧನ್ಯವಾದವಿತ್ತರು. ಅಧ್ಯಾಪಕರಾದ ನಿಶಾ ಹಾಗೂ ದಿವ್ಯಾ ಕುಮಾರಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಶಾಲಾ ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ಎಲ್ಲಾ ವಿದ್ಯಾರ್ಥಿ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply