ಕವರ್ ಸಹಿತ ಚಾಕಲೇಟ್‌ ಗಂಟಲಲ್ಲಿ ಸಿಲುಕಿ ಬಾಲಕಿ ಸಾವು

ಬೈಂದೂರು: ಕವರ್ ಸಹಿತ ಚಾಕಲೇಟ್‌ ನುಂಗಿ 7ವರ್ಷದ ಬಾಲಕಿಯೋರ್ವಳು ದಾರುಣವಾಗಿ ಮೃತಪಟ್ಟ ಘಟನೆ ಬೈಂದೂರು ತಾಲೂಕು ಬಿಜೂರು ಗ್ರಾ.ಪಂ. ವ್ಯಾಪ್ತಿಯ ಬವಳಾಡಿಯಲ್ಲಿ ಬುಧವಾರ ನಡೆದಿದೆ.

ಬವಳಾಡಿ ಗ್ರಾಮದ ನಿವಾಸಿ ಸಮನ್ವಿ (7) ಮೃತಪಟ್ಟ ಬಾಲಕಿ. ಸಮನ್ವಿ ತಾಲೂಕಿನ ಖಾಸಗಿ ಆಂಗ್ಲಮಾಧ್ಯಮದಲ್ಲಿ 2ನೇ ತರಗತಿ ಓದುತ್ತಿದ್ದಳು. ಇಂದು ಮುಂಜಾನೆ ಶಾಲೆಗೆ ಹೊರಡುವಾಗ ಹಠ ಹಿಡಿದಿದ್ದರಿಂದ ಸಮಧಾನಪಡಿಸಲು ಅಮ್ಮ ಚಾಕಲೇಟ್‌ ನೀಡಿದ್ದಾರೆ.

ಈ ವೇಳೆ ಶಾಲಾ ವಾಹನ ಬಂದಿದ್ದು, ಸಮನ್ವಿ ಕವರ್‌ ಸಹಿತ ಚಾಕಲೇಟ್‌ ನುಂಗಿದ್ದಾಳೆ. ಬಳಿಕ ಚಾಕಲೇಟ್ ಗಂಟಲಲ್ಲಿ ಸಿಲುಕಿ ಸಮನ್ವಿ ಅಸ್ವಸ್ಥಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

Leave a Reply