ವಿಶ್ವಾರ್ಪಣಮ್ ಸಮಾರಂಭದಲ್ಲಿ ವಿವಿಧ ಸಾಧಕರಿಗೆ ಸನ್ಮಾನ

ಉಡುಪಿ :  ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ,ಪರ್ಯಾಯ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು,ಮೂಡಬಿದರೆಯ ಡಾ.ಪದ್ಮನಾಭ ಉಡುಪ, ನೇತ್ರತಜ್ಞ ಡಾ.ಕೃಷ್ಣಪ್ರಸಾದ್, ವಿದ್ವಾಂಸ ಎಂ.ನಾರಾಯಣ ಮೂಡಬಿದರೆ,ಮಂಡ್ಯದ ವೈದ್ಯರೂ,ಸಮಾಜ ಸೇವಕರೂ ಆದ ಡಾ.ಎಸ್.ಎ.ಶಂಕರೇಗೌಡ ಮೊದಲಾದವರನ್ನು ಸನ್ಮಾನಿಸಿ,ಎಲ್ಲವನ್ನು ಕಳಕೊಂಡು ಬೀದಿಪಾಲಾದರೂ ಭಗವಂತ ನಮಗೆ ಪರ್ಯಾಯ ವ್ಯವಸ್ಥೆಯನ್ನು ಖಂಡಿತಾ ಒದಗಿಸಿರುತ್ತಾನೆ ಅದನ್ನು ಕಂಡುಕೊಳ್ಳಬೇಕು ಎಂದು ಅನುಗ್ರಹಿಸಿದರು.

ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷರಾಗಿ,ಭಗವದ್ಗೀತೆಯ ಮಾತು ಆರಂಭವಾಗುವುದು ನಮ್ಮಂತೆ ಕುರುಡನಾದ ಧೃತರಾಷ್ಟ್ರನ ಮಾತಿನಿಂದ ಕೊನೆಗೊಳ್ಳುವುದು ಒಳಗಣ್ಣು ತೆರೆದಿರುವ ಸಂಜಯನ ಮಾತಿನಿಂದ ಹಾಗೆ ನಾವು ಒಳಗಣ್ಣು ತೆರೆಯಬೇಕು ಎಂದು ಅನುಗ್ರಹಿಸಿದರು.

ಬೆಂಗಳೂರಿನ ವಕೀಲರಾದ ಸಿ.ಎ ಹರಿಕುತ್ಸ ಇವರು “ಕರ್ನಾಟಕ ರಾಜ್ಯದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳ ಪರಿಸ್ಥಿತಿ” ಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸರ್ವೋಚ್ಚ ನ್ಯಾಯಾಲಯದ ವಕೀಲರೂ,ಲೇಖಕರೂ ಆದ ಸಾಯಿ ದೀಪಕ್ ಅವರು “ಸರ್ವೋಚ್ಚ ನ್ಯಾಯಾಲಯದಲ್ಲಿ ಹಿಂದೂ ಧರ್ಮ” ದಕುರಿತು ವಿಶೇಷ ಉಪನ್ಯಾಸ ನೀಡಿದರು.

ಅಭ್ಯಾಗತರಾಗಿ ಕಟೀಲಿನ ಅನುವಂಶಿಕ ಅರ್ಚಕ ಅನಂತಪದ್ಮನಾಭ ಅಸ್ರಣ್ಣ,ಮೈಸೂರಿನ ಡಾ.ಅನಿಲ್ ಸಾಂಗ್ಲಿ,ಮೈಸೂರಿನ ವಕೀಲರಾದ ಶ್ರೀಪಾದ ಸಾಂಗ್ಲಿ ಭಾಗವಹಿಸಿದ್ದರು.

ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು.ಮಠದ ಆಸ್ಥಾನ ವಿದ್ವಾಂಸರಾದ ಕೃಷ್ಣರಾಜ ಭಟ್ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply