ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ನಿಂದ ಶ್ರಾವಣ ಸಂಭ್ರಮ

ಕಾಪು : ತುಳುನಾಡಿನ ಸಂಸ್ಕೃತಿ ಸಂಪ್ರದಾಯಗಳನ್ನಾಗಲಿ,ಗಾದೆಗಳನ್ನಾಗಲೀ ನಮ್ಮ ಹಿರಿಯರು ಸುಮ್ಮನೆ ಮಾಡಿಲ್ಲ.ನಮ್ಮ ಹಳೆಯ ತಲೆಮಾರುಗಳ ಹಿರಿಯರು ಅಂದು ಬದುಕುತ್ತಿದ್ದ ರೀತಿ ರಿವಾಜುಗಳೇ ಮುಂದೆ ಸಂಸ್ಕೃತಿ,ಸಂಪ್ರದಾಯಗಳಾಗಿ ಜೀವನಾಡಿ ಗಳಲ್ಲಿ ಬೆಳೆಯುತ್ತಾ ಬಂದು ಹಾಸುಹೊಕ್ಕಾಗಿವೆ.ಯಾವುದೇ ಸಾಂಪ್ರದಾಯಿಕ ಆಚರಣೆಗೆ ಹಿನ್ನೆಲೆಯಾಗಿ ಒಂದೊಂದು ವೈಜ್ಞಾನಿಕ ಕಾರಣಗಳಿರುವುದನ್ನು ನಾವು ಒಪ್ಪಿಕೊಳ್ಳಲೇ ಬೇಕು ಎಂದು ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕಿ ಅರ್ಪಿತಾ ಶೆಟ್ಟಿ ಹೇಳಿದರು.

ಕಾಪು ಬ್ಲಾಕ್ ಮತ್ತು ಕಾಪು ನಗರ ಮಹಿಳಾ ಕಾಂಗ್ರೆಸ್ ಇವುಗಳ ಸಹಯೋಗದಲ್ಲಿ ರಾಜೀವ್ ಭವನದಲ್ಲಿ ನಡೆದ ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ,ಮಾತನಾಡಿ ಕಾಂಗ್ರೆಸ್ ಪಕ್ಷ ಜಾತ್ಯಾತೀತ ತತ್ವದಡಿಯಲ್ಲಿ ನಂಬಿಕೆ ಇಟ್ಟಿರುವ ಪಕ್ಷವಾಗಿದ್ದು, ನಾವೆಲ್ಲರೂ ಅದೇ ಸಿದ್ಧಾಂತದ ನೆಲೆಯಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರು ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಚೂಡಿ ಸಂಪ್ರದಾಯದ ಬಗ್ಗೆ ಮಾಹಿತಿ ನೀಡಿದರು. ಉಪಸ್ಥಿತರಿದ್ದ ಎಲ್ಲಾ ಮಹಿಳೆಯರಿಗೂ ಅರಿಶಿನ ಕುಂಕುಮ, ಬಳೆಗಳನ್ನು ನೀಡಿ ಗೌರವಿಸಲಾಯಿತು.

ಕಾಪು ಬ್ಲಾಕ್ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾವತಿ ಸಾಲಿಯಾನ್,ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ನವೀನ್ ಚಂದ್ರ ಸುವರ್ಣ, ಹಿಂದುಳಿದ ವರ್ಗದ ಘಟಕದ ಅಧ್ಯಕ್ಷ ಶ್ರೀ ದೀಪಕ್ ಎರ್ಮಾಳ್, ಹಿರಿಯ ನಾಯಕಿ ಶ್ರೀಮತಿ ಸರಳಾ ಕಾಂಚನ್,ಬಾಲಕೃಷ್ಣ ಕೋಟ್ಯಾನ್ ಕಾಪು,ಜ್ಯೋತಿ ಮೆನನ್, ಆಗ್ನೆಸ್ ಡೇಸಾ, ಸುಜಾತ ಸುವರ್ಣ,ಅಮೃತಾ ಉಮೇಶ್ ಪೂಜಾರಿ, ಪುಟ್ಟಮ್ಮ ಶ್ರಿಯಾನ್,ಶಾರದಾ ಪೂಜಾರ್ತಿ,ಇಂದಿರಾ ಆಚಾರ್ಯ,ಶಾಂತಿ ಫೆರ್ನಾಂಡಿಸ್, ಸುಚರಿತ,ಸುನಂದಾ ದೇವಾಡಿಗ, ಸುಗುಣ ಪೂಜಾರ್ತಿ,ಸುರೇಖಾ ಶೆಟ್ಟಿ, ಅಶ್ವಿನಿ ನವೀನ್ ಬಂಗೇರ,ಗ್ರೇಸಿ ಕಾರ್ಡೋಜ,ಮೋಹಿನಿ, ಶರ್ಮಿಳಾ, ಫರೀದಾ, ತಸ್ಲೀನ್, ಗೀತಾಗೋಪಾಲ್, ರೋಸ್ಲೀ, ಪ್ರೆಸಿಲ್ಲಾ ಡಿ’ಮೆಲ್ಲೋ, ಫಿಲೋಮಿನಾ ಡೇಸಾ,ಶೋಭಾ ಸಾಲಿಯಾನ್ ಮುಂತಾದವರು ಉಪಸ್ಥಿತರಿದ್ದರು. 

ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಶೆಟ್ಟಿ ಸರ್ವರನ್ನೂ ಸ್ವಾಗತಿಸಿ, ಆಶಾ ಆಂಚನ್ ವಂದಿಸಿದರು.ಸೌಮ್ಯ ನಿರೂಪಿಸಿದರು.ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಸದಸ್ಯರಿಂದ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

 
 
 
 
 
 
 
 
 
 
 

Leave a Reply