ಆಯುರ್ವೇದ ವೈದ್ಯ ಪದ್ಧತಿ ಬಗ್ಗೆ ಯುವಜನತೆಗೆ ಶಿಕ್ಷಣ ದೊರೆತು ಉತ್ತಮ ಸಾಧನೆ ಮಾಡಬೇಕು – ಬನ್ನಂಜೆ ಬಾಬು ಅಮೀನ್

ಕಟಪಾಡಿ: ಆಯುರ್ವೇದ ವೈದ್ಯ ಪದ್ಧತಿ ಬಗ್ಗೆ ಯುವಜನತೆಗೆ ಶಿಕ್ಷಣ ದೊರೆತು ಉತ್ತಮ ಸಾಧನೆ ಮಾಡಬೇಕು ಎಂದು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಕರೆ ನೀಡಿದರು.

ಬ್ರಹ್ಮಶ್ರೀ ನಾರಾಯಣ ಗುರುವರ್ಯರ 167ನೇ ಜನ್ಮದಿನ ಪ್ರಯುಕ್ತ ಕುದ್ರೋಳಿ ಗುರು ಬೆಳದಿಂಗಳು ಸೇವಾ ಸಂಸ್ಥೆಯಿಂದ ಔಷಧೀಯ ಸಸ್ಯಗಳ ನೆಡುವ ಸರಣಿ ಅಂಗವಾಗಿ ಶನಿವಾರ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂದಿನ ಕಾಲದಲ್ಲಿ ದೇಯಿ ಬೈದೆತಿ, ಕಾಂತಣ್ಣ ಬೈದ್ಯ ಮತ್ತು ಸಾಯನ ಬೈದ್ಯರು ವೈದ್ಯ ವೃತ್ತಿಯಲ್ಲಿ ಪರಿಣತರಾಗಿದ್ದರು. ಆದರೆ ಇಂದು ಈ ವೈದ್ಯ ಪದ್ಧತಿ ಬಗ್ಗೆ ಹೆಚ್ಚು ಆಸಕ್ತಿ ತೋರಿಸದಿರುವುದು ವಿಷಾದನೀಯ ಎಂದರು.

ಗುರುಬೆಳದಿಂಗಳು ಸಂಸ್ಥೆ ಅಧ್ಯಕ್ಷ ಪದ್ಮರಾಜ್ ಆರ್., ಉಪಾಧ್ಯಕ್ಷ ರಘುನಾಥ ಮಾಬಿಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್, ಯುವವಾಹಿನಿ ಉಡುಪಿ ಘಟಕ ಅಧ್ಯಕ್ಷ ಪ್ರವೀಣ್ ಕುಮಾರ್, ಪಡುಬಿದ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ ಪಿ.ಬಿ, ಕಟಪಾಡಿ ವಿಶ್ವನಾಥ ಕ್ಷೇತ್ರದ ಗೌರವ ಪ್ರಧಾನ ಕಾರ್ಯದರ್ಶಿ ಶಿವಾನಂದ, ಕಟಪಾಡಿ ಯುವವಾಹಿನಿ ಅಧ್ಯಕ್ಷ ಉಮೇಶ್, ಉಡುಪಿ ಜಿಲ್ಲಾ ಯುವ ವೇದಿಕೆಯ ಗೌರವಾಧ್ಯಕ್ಷ ದಿವಾಕರ್, ಅಧ್ಯಕ್ಷ ಪ್ರವೀಣ್ ಪೂಜಾರಿ, ಕತಾರ್ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ದಿವಾಕರ್, ಮೂಲ್ಕಿ ಬಿಲ್ಲವ ಮಹಾಮಂಡಲ ಕೋಶಾಧಿಕಾರಿ ಯೋಗೀಶ್ ಕೋಟ್ಯಾನ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅನಿಲ್‌ಕುಮಾರ್, ಕಿನ್ನಿಮುಲ್ಕಿ ಗರೊಡಿಯ ಅರ್ಚಕ ಭಾಸ್ಕರ್ ಪೂಜಾರಿ, ಯುವವಾಹಿನಿ ಉಡುಪಿ ಘಟಕ ಉಪಾಧ್ಯಕ್ಷ ಮಹಾಬಲ ಅಮೀನ್, ಯುವವಾಹಿನಿ ಕಟಪಾಡಿ ಘಟಕ ಮಾಜಿ ಅಧ್ಯಕ್ಷ ರಿತೇಶ್ ಬಿ.ಕೋಟ್ಯಾನ್ ಮೊದಲಾದವರಿದ್ದರು.

 
 
 
 
 
 
 
 
 

Leave a Reply