ಉಡುಪಿ ಕೋ-ಆಪರೇಟಿವ್ ಟೌನ್ 2088 ಕೋಟಿ ವ್ಯವಹಾರ, 2.16 ಕೋಟಿ ನಿವ್ವಳ ಲಾಭ

​​ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕಿನ 108ನೇ ವಾರ್ಷಿಕ ಸಾಮಾನ್ಯ ಮಹಾಸಭೆಯು ಉಡುಪಿ ಕುಂಜಿಬೆಟ್ಟಿನಲ್ಲಿರುವ ಶಾರದಾ ಕಲ್ಯಾಣ ಮಂಟಪದಲ್ಲಿ ಶನಿವಾರದಂದು ಜರಗಿತು. ಬ್ಯಾಂಕಿನ ವಾರ್ಷಿಕ ಸಾಮಾನ್ಯ ಮಹಾಸಭೆಗೆ ಅಧ್ಯಕ್ಷರಾದ ಶ್ರೀ ಎಚ್. ಜಯಪ್ರಕಾಶ್ ಕೆದ್ಲಾಯ ಅಧ್ಯಕ್ಷತೆ ವಹಿಸಿ ಸದಸ್ಯರನ್ನು ಸ್ವಾಗತಿಸಿ ಬ್ಯಾಂಕಿನ ಪ್ರಗತಿಯ ಬಗ್ಗೆ ಪ್ರಸ್ತಾವನೆಗೈದರು. 
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಕುಮಾರಸ್ವಾಮಿ ಉಡುಪ  ಬ್ಯಾಂಕಿನ ವಾರ್ಷಿಕ ವರದಿಯನ್ನು ಮಂಡಿಸಿದರು. ವರದಿ ಸಾಲಿನಲ್ಲಿ ಬ್ಯಾಂಕಿನ ಒಟ್ಟು ಠೇವಣಿ ಸಂಗ್ರಹಣೆಯ ಮೊತ್ತ `210.68ಕೋಟಿ ಆಗಿದ್ದು ಒಟ್ಟು `147.71ಕೋಟಿ ಸಾಲ ಹೊರ ಬಾಕಿ ಇರುತ್ತದೆ. `26.01ಕೋಟಿ ಹೂಡಿಕೆಗಳಲ್ಲಿ ತೊಡಗಿಸಿದ್ದು `237.58 ಕೋಟಿ ದುಡಿಯುವ ಬಂಡವಾಳ ಹೊಂದಿರುತ್ತದೆ. 2019-20ನೇ ಸಾಲಿನಲ್ಲಿ ಬ್ಯಾಂಕು ಕಾನೂನು ಬದ್ಧ ತೆರಿಗೆ ಪಾವತಿಯ ನಂತರ `2.16 ಕೋಟಿ ಲಾಭಗಳಿಸಿ ಸನ್ನದು ಲೆಕ್ಕಪರಿಶೋಧಕರಿಂದ “ಎ” ಶ್ರೇಣಿ ಪಡೆದಿರುತ್ತದೆ.
ನಮ್ಮ ಬ್ಯಾಂಕ್ ಪಟ್ಟಣ ಸಹಕಾರ ಬ್ಯಾಂಕ್ ವಿಭಾಗದಲ್ಲಿದ್ದು ಭಾರತೀಯ ರಿಸರ್ವ್ ಬ್ಯಾಂಕಿನ ಅಧಿಕಾರದ ವ್ಯಾಪ್ತಿಗೆ ಒಳಪಟ್ಟಿದ್ದು ಗ್ರಾಹಕರಿಗೆ 5.00 ಲಕ್ಷದವರೆಗಿನ ಠೇವಣಿಗಳಿಗೆ ವಿಮಾ ಭದ್ರತೆಯನ್ನು ಕಲ್ಪಿಸಿದೆ ಹಾಗೂ ಕೋವಿಡ್-19ನ ಸವಲತ್ತುಗಳನ್ನು ಗ್ರಾಹಕರಿಗೆ ನೀಡಲಾಗಿದೆ. ಈ ಬಾರಿ ಕೋವಿಡ್- 19 ನಿಂದ ಎಲ್ಲಾ ಕ್ಷೇತ್ರಗಳೂ ಅಭಿವೃದ್ಧಿಯಲ್ಲಿ ಕುಂಠಿತಗೊಡಿದ್ದರೂ ನಮ್ಮ ಬ್ಯಾಂಕಿನ ಗ್ರಾಹಕರು ಮತ್ತು ಸದಸ್ಯರ ಪೂರ್ಣ ಸಹಕಾರದಿಂದ ಉತ್ತಮ ಪ್ರಗತಿಯನ್ನು ಸಾಧಿಸಿದೆ ಎಂದು ಅಧ್ಯಕ್ಷರು ಸಭೆಯಲ್ಲಿ ವಿವರಿಸಿದರು.
ಹಲವಾರು ಸೇವೆಗಳನ್ನು, ಕೊಡುಗೆಗಳನ್ನು ಬ್ಯಾಂಕಿನ ಗ್ರಾಹಕರಿಗೆ ನೀಡುತ್ತಾ ಬಂದಿದ್ದು,  ಹಿರಿಯ ನಾಗರೀಕರಿಗೆ ಶೇ:0.50 ಅಧಿಕ ಬಡ್ಡಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಲಿದೆ.
ಉಪಾಧ್ಯಕ್ಷರಾದ  ಪಿ. ರಾಘವೇಂದ್ರ ಭಟ್, ನಿರ್ದೇಶಕರುಗಳಾದ ಎಚ್.ಎನ್. ರಾಮಕೃಷ್ಣ ರಾವ್, ಪಿ.ಎನ್.ರವೀಂದ್ರ ರಾವ್,  ಜಗನ್ನಾಥ್ ಜಿ,  ಜಯಪ್ರಕಾಶ್ ಭಂಡಾರಿ,  ದೇವದಾಸ್,  ಭಾಸ್ಕರ ರಾವ್ ಕಿದಿಯೂರು,  ಸೂರ್ಯಪ್ರಕಾಶ್ ರಾವ್ ಎನ್., ಶ್ರೀ ಎನ್. ಪ್ರಹ್ಲಾದ್ ಬಲ್ಲಾಳ್, ಮನೋರಮಾ ಎಸ್. ಮತ್ತುರೂಪಾ ಮೋಹನ್ ಉಪಸ್ಥಿತರಿದ್ದರು. ಉತ್ತಮವಾಗಿ ಕಾರ್ಯನಿರ್ವಹಿಸಿದ ಶಾಖೆಗಳಿಗೆ ಪ್ರಶಸ್ತಿ ನೀಡಲಾಯಿತು. ಮುಖ್ಯ ಸಲಹೆಗಾರರಾದ ಶ್ರೀ ಬಿ. ರಂಗನಾಥ ಸಾಮಗ ವಂದಿಸಿದರು . ಶ್ರೀ ಬಿ. ವಿ. ಲಕ್ಷ್ಮೀನಾರಾಯಣ ನಿರೂಪಿಸಿದರು.
 
 
 
 
 
 
 
 
 
 
 

Leave a Reply