ಕೊಲೆಯಾದ ಉದಯ ಗಾಣಿಗ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕಾಂಗ್ರೆಸ್ ನಿಯೋಗ ಒತ್ತಾಯ

ಕುಂದಾಪುರ: ಸಚಿವ ವಿನಯ ಕುಮಾರ್ ಸೊರಕೆ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಮಾಜಿ ಶಾಸಕ ಗೋಪಾಲ್ ಪೂಜಾರಿ ಇವರ ನೇತೃತ್ವದಲ್ಲಿ ಯಡಮೋಗೆಯಲ್ಲಿ ಕೊಲೆಯಾದ ಉದಯ್ ಗಾಣಿಗರ ಅವರ ಮನೆಗೆ ಶುಕ್ರವಾರ ಭೇಟಿ ನೀಡಿ ಅವರ ಪತ್ನಿ ಮಕ್ಕಳು ಮತ್ತು ಹೆತ್ತವರಿಗೆ ಸಾಂತ್ವನ ಹೇಳಿದ್ದರು.

ಮೃತ ಉದಯ ಗಾಣಿಗರ ಪತ್ನಿ ಹೆತ್ತವರು ಮತ್ತು ಸ್ಥಳೀಯರು ಕಾಂಗ್ರೆಸ್ ನಿಯೋಗದ ಮುಂದೆ ನಮಗೆ ನ್ಯಾಯ ದೊರಕಿಸಿಕೊಡಿ, ಈಗಾಗಲೇ ಕೆಲವರನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಕೆಲವು ಪ್ರಭಾವಿ ನಾಯಕರು ಭಾಗಿಯಾಗಿದ್ದಾರೆ, ಅವರನ್ನು ಬಂಧಿಸಿ ಅವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ನೀಡಬೇಕು.ಇದಕ್ಕೆ ದಯವಿಟ್ಟು ತಾವುಗಳು ನಮಗೆ ಸಹಾಯ ಮಾಡಬೇಕೆಂದು ಮೃತರ ಕುಟುಂಬದವರು ಕಾಂಗ್ರೆಸ್ ನಿಯೋಗಕ್ಕೆ ಮನವಿ ಮಾಡಿದ್ದರು.

ಕುಟುಂಬದ ಮನವಿಯಂತೆ ಇಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮತ್ತು ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್,ಗೋಪಾಲ್ ಪೂಜಾರಿ ನೇತೃತ್ವದಲ್ಲಿ ಗಾಣಿಗ ಸಮಾಜದ ಮುಖಂಡರೊಂದಿಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಸುಧೀರ್ಘ ಚರ್ಚೆ ನಡೆಸಿದರು. ತಪ್ಪಿತಸ್ಥರು ಯಾರೇ ಆಗಿದ್ದರೂ ಯಾವುದೇ ಒತ್ತಡಕ್ಕೆ ಮಣಿಯದೆ ಬಂಧಿಸಿ ತಕ್ಕ ಶಿಕ್ಷೆಯಾಗುವಂತೆ ಮಾಡಿ, ಪತ್ನಿ ಮಕ್ಕಳು ಮತ್ತು ಕುಟುಂಬಸ್ಥರಿಗೆ ನ್ಯಾಯವನ್ನು ಒದಗಿಸಿ ಕೊಡುವದರೊಂದಿಗೆ ಮೃತರ ಕುಟುಂಬಕ್ಕೆ ಸರಕಾರದಿಂದ ಪರಿಹಾರವನ್ನು ಸಿಗುವ ಹಾಗೆ ತಮ್ಮ ವರದಿಯನ್ನು ಕೊಡಬೇಕಾಗಿ ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಶಾಂತ್ ಜತನ್ನ, ರಮೇಶ್ ಗಾಣಿಗ, ರವಿ ಗಾಣಿಗ ಆಜ್ರಿ ಮತ್ತಿತರರು ಉಪಸ್ಥತರಿದ್ದರು.

 
 
 
 
 
 
 
 
 
 
 

Leave a Reply