ಸಾರ್ವಜನಿಕರು ಮತ್ತು ವಾಹನ ಚಾಲಕರ ಗಮನಕ್ಕೆ

ದಿನಾಂಕ 05.10.2022 ರಂದು ಮಧ್ಯಾಹ್ನ 3 ಗಂಟೆ ಬಳಿಕ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಶೋಭಾಯಾತ್ರೆ ನಡೆಯಲಿದ್ದು ಶೋಭಾಯಾತ್ರೆಯಲ್ಲಿ 100 ಕ್ಕೂ ಹೆಚ್ಚಿನ ಟ್ಯಾಬ್ಲೋ, ಹುಲಿ ವೇಷ, ಭಜನಾ ತಂಡ ವಿವಿಧ ವೇಷಭೂಷಣಗಳು, ಸುಮಾರು 20,000 ಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳಲಿದ್ದು, ಶೋಭಾ ಯಾತ್ರೆ ಉಚ್ಚಿಲ ದಿಂದ ಹೆಜಮಾಡಿ ತನಕ ತೆರಳಿ ವಾಪಾಸು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಪು ತನಕ ಸಾಗಲಿದೆ.. ಈ ಶೋಭಾಯಾತ್ರೆಯ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುವ ಬಗ್ಗೆ ತಿಳಿದು ಬಂದಿರುತ್ತದೆ. ಉಡುಪಿಯಿಂದ ಮಂಗಳೂರಿಗೆ ತೆರಳುವವರು, ಬಜಪೆ ವಿಮಾನ ನಿಲ್ದಾಣಕ್ಕೆ ತೆರಳುವವರು ಹಾಗೂ ಇನ್ನಿತರ ತುರ್ತು ಕೆಲಸಗಳ ನಿಮಿತ್ತ ಸಂಚರಿಸುವವರು ಕಟಪಾಡಿ-ಶಿರ್ವ -ಬೆಳ್ಮಣ್- ಸಚ್ಚೇರಿಪೇಟೆ -ಮುಖಾಂತರ ಮಂಗಳೂರು ತಲುಪುವುದು.. ಅಥವಾ ಕಟಪಾಡಿ -ಶಿರ್ವ–ಮದರಂಗಡಿ ನಂದಿಕೂರು- ಅಡ್ವೆ-ಕರ್ನಿರೆ-ಮುಲ್ಕಿ ಮುಖಾಂತರ ಮಂಗಳೂರು ತಲುಪುವುದು ಅಥವಾ ಉಡುಪಿ- ಕಾಪು -ಶಿರ್ವ ಮುದರಂಗಡಿ-ನಂದಿಕೂರು ಅಡ್ವೆ ಪಲಿಮಾರು ಕರ್ನೇರಿ ಮುಲ್ಕಿ ಅಥವಾ ಕಾರ್ಕಳ – ಮೂಡಬಿದ್ರೆ ಮುಖಾಂತರ ಮಂಗಳೂರು ತಲುಪುವುದು ಸೂಕ್ತವೆನಿಸುತ್ತದೆ.

 
 
 
 
 
 
 
 
 
 
 

Leave a Reply