ಅಶ್ವತ್ಥಪುರದಲ್ಲಿ ವಿಶೇಷ ಪೂಜೆ

ಮೂಡುಬಿದಿರೆ, ಆ. 5: ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಶಿಲಾನ್ಯಾಸ ಸಂದರ್ಭದಲ್ಲಿ ಇಲ್ಲಿಗೆ ಸಮೀಪದ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ದೇವಳವನ್ನು ವಿಶೇಷವಾಗಿ ಅಲಂಕರಿ ಸಲಾಗಿತ್ತು. ಶ್ರೀದೇವರಿಗೆ ಸರ್ವಾಲಂಕಾರ, ಪುಷ್ಪಾಲಂಕಾರ ಪೂಜೆ ನಡೆಸಿ ಮಹಾಪೂಜೆ ನಡೆಸಲಾಯಿತು.

ಬೆಳಿಗ್ಗೆ 11ರಿಂದ 1 ಗಂಟೆ ವರೆಗೆ ಶ್ರೀರಾಮರಂಜಿನಿ ಭಗಿನಿ ಭಜನಾ ಮಂಡಳಿ ಹಾಗೂ ಭಕ್ತರಿಂದ ಭಜನೆ, ಆಚಾರ್ಯ ಶಂಕರ ವಿರಚಿತ ರಾಮ ಭುಜಂಗ ಪ್ರಯಾತ ಸ್ತೋತ್ರ, ಶ್ರೀರಾಮರಕ್ಷಾ ಸ್ತೋತ್ರ, ಹನೂಮಾನ್ ಚಾಲೀಸ ಪಠಣ, ಭಕ್ತರಿಂದ ಶ್ರೀ ರಾಮ ತಾರಕ ಮಂತ್ರ ಜಪಾನುಷ್ಠಾನ ನಡೆಯಿತು.

ಕ್ಚೇತ್ರದ ಅರ್ಚಕ ಪಿ. ಚಂದ್ರಮೌಳೀಶ್ವರ ಭಟ್ ಉಪಸ್ಥಿತಿಯಲ್ಲಿ ಕೆ. ಪ್ರಭಾಕರ ಭಟ್ ಮತ್ತು ವಿ. ರಂಗನಾಥ ಭಟ್ ಪೂಜೆಯಲ್ಲಿ ಸಹಕರಿಸಿದರು. ಆಡಳ್ತೆ ಮೊಕ್ತೇಸರ ರಘುನಾಥ ಎಲ್. ವಿ., ಮೊಕ್ತೇಸರರಾದ ಕಿರಣ್ ಮಂಜನಬೈಲು, ದತ್ತಾತ್ರೇಯ ಸುರಾಲು ಮತ್ತು ಬಿ. ರಂಗನಾಥ ಭಟ್ ಇದ್ದರು. ರಾತ್ರಿ ಭಜನೆ. ಹೂವಿನಪೂಜೆ ನಡೆಸಲಾಯಿತು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply