ತೆಂಕನಿಡಿಯೂರು ಕಾಲೇಜು: ಎನ್.ಎಸ್.ಎಸ್. ವಾರ್ಷಿಕ ಶಿಬಿರ ಉದ್ಘಾಟನೆ

ಉಡುಪಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ನಡೂರು ಗ್ರಾಮದ ಶ್ರೀವಾಣಿ ಅನುದಾನಿತ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಶ್ರೀವಾಣಿ
ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ವಿಶ್ವನಾಥ ಶೆಟ್ಟಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸ್ವಾವಲಂಬಿ ಬದುಕಿನ ಪಾಠ ಕಲಿಸುವ ಎನ್.ಎಸ್.ಎಸ್. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ, ಶಿಸ್ತು, ಸಂಯಮ, ಶ್ರಮ ಜೀವನದ ಮೌಲ್ಯಗಳನ್ನು ಕಲಿಸುತ್ತದೆ. ವಿದ್ಯಾರ್ಥಿಗಳ ಜೊತೆಗೆ
ಗ್ರಾಮಸ್ಥರಲ್ಲೂ ರಾಷ್ಟçನಿರ್ಮಾಣದ ಜಾಗೃತಿಯನ್ನು ಮೂಡಿಸುತ್ತದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ತೆಂಕನಿಡಿಯೂರು, ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್
ಸುರೇಶ್ ರೈ ಕೆ. ವ್ಯಕ್ತಿಗಳಾಗಿ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕೊನೆಯಲ್ಲಿ ಸಮಾಜಮುಖಿ ವ್ಯಕ್ತಿತ್ವವನ್ನು ರೂಪಿಸಿಕೊಂಡು ಶಿಬಿರ ಮುಕ್ತಾಯಗೊಳಿಸಬೇಕೆಂದು
ವಿದ್ಯಾರ್ಥಿಗಳಿಗೆ ಸೂಚನೆಯಿತ್ತರು. ಅತಿಥಿಗಳಾಗಿ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ ನೀಲಾವರ, ಗ್ರಾಮಪಂಚಾಯತ್

ಅಧ್ಯಕ್ಷರಾದ ಮಹೇಂದ್ರ ಕುಮಾರ್ ನೀಲಾವರ, ಶ್ರೀವಾಣಿ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ್ ಸಾಸ್ತಾನ, ಉದ್ಯಮಿ ಎಂ.ಕೆ. ಚಂದ್ರಶೇಖರ್, ಎನ್.ಎಸ್.ಎಸ್.
ಯೋಜನಾಧಿಕಾರಿಗಳಾದ ಶ್ರೀಮತಿ ಸುಷ್ಮಾ ಟಿ., ಡಾ. ಮಹೇಶ್ ಕುಮಾರ್ ಕೆ.ಇ. ಸಹ ಶಿಬಿರಾಧಿಕಾರಿಗಳಾದ ರವಿ ಎಸ್., ಗ್ರಂಥಪಾಲಕರಾದ ಕೃಷ್ಣ. ಬೋಧಕ ವೃಂದದವರಾದ
ಪ್ರಶಾoತ್ ಎನ್. ಸುಮತಿ ಬಿಲ್ಲವ, ಸಹನಾ ಎಸ್., ಪಾಂಡುರoಗ, ಸುಬ್ರಹ್ಮಣ್ಯ, ಸವಿತಾ ಹೆಗ್ಡೆ ಉಪಸ್ಥಿತರಿದ್ದರು. ಡಾ. ಮಹೇಶ್ ಕುಮಾರ್ ಕೆ.ಇ. ಅತಿಥಿಗಳನ್ನು ಸ್ವಾಗತಿಸಿದರೆ, ಶಿಬಿರಾರ್ಥಿಗಳಾದ ಶ್ರದ್ಧಾ ವಂದಿಸಿದರು. ಮನಿಶಾ ನಿರೂಪಿಸಿದರು. ನೂರಕ್ಕೂ ಮಿಕ್ಕಿ
ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗಿಯಾಗಿರುತ್ತಾರೆ.

 
 
 
 
 
 
 
 
 
 
 

Leave a Reply