16ನೇ ಜಿಲ್ಲಾ ಶೈಕ್ಷಣಿಕ ಸಹಮಿಲನ – 2023 ಸಂಪನ್ನ

  ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಲಗ್ನತ್ವದ ಸಂಸ್ಥೆಗಳ ಆಡಳಿತ ಮಂಡಳಿ ಬೋಧಕ – ಬೋಧಕೇತರ ವರ್ಗದವರಿಗಾಗಿ ಆಯೋಜಿಸಿದ 16ನೇ ವರ್ಷದ ಜಿಲ್ಲಾಮಟ್ಟದ ಶೈಕ್ಷಣಿಕ ಸಹಮಿಲನ – 2023 ಕಾರ್ಯಕ್ರಮ ಜುಲೈ 15 ರಂದು ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ಸಮೂಹ  ಶಿಕ್ಷಣ ಸಂಸ್ಥೆಗಳು ಹೆಬ್ರಿಯಲ್ಲಿ ಸಂಪನ್ನಗೊಂಡಿತು. 
ಸಂಸ್ಥೆಯ ಅನ್ನಪೂರ್ಣ ಸಭಾಂಗಣದಲ್ಲಿ ಬೆಳಗ್ಗೆ 9.45 ಗಂಟೆಗೆ ಕಾರ್ಯಕ್ರಮ ಆರಂಭಗೊಂಡಿದೆ. ಶ್ರೀ  ಪಾಂಡುರಂಗ  ಪೈ ಸಿದ್ದಾಪುರ ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಅಧ್ಯಕ್ಷತೆಯಲ್ಲಿ , ಶ್ರೀ ಚಂದ್ರಶೇಖರ್ ಶೆಟ್ಟಿ ಕೆರಾಡಿ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಜಿಲ್ಲಾ ಶೈಕ್ಷಣಿಕ ಸಹಮಿಲನವನ್ನು ಉದ್ಘಾಟಿಸಿದರು. ಶಿಕ್ಷಕ ಅಂಧಕಾರವನ್ನು ಹೋಗಲಾಡಿಸುವವನು ಸೌಜನ್ಯ ತುಂಬಿರಬೇಕು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿರಬೇಕು ಶಿಕ್ಷಕ ನಿರಂತರ ವಿದ್ಯಾರ್ಥಿ ಶಿಕ್ಷಕರು ಪ್ರತಿದಿನ ವೃತ್ತಿಯನ್ನು ಗೌರವಿಸಬೇಕು ಜಾಲತಾಣಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ ಅಪ್ಡೇಟ್ ಆಗಬೇಕು ಶಾಲೆ ನಿರ್ಜೀವ ಕಟ್ಟಡವಲ್ಲ ದೇಶ ಕಟ್ಟಿ ಬೆಳೆಸಲು ಪಾಠದ ಕೊನೆಯಲ್ಲಿ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಬೇಕು ಅಧ್ಯಾಪಕರು ವಿಶಿಷ್ಟವಾಗಿ ಬದಲಾವಣೆಯಾಗಬೇಕು ಎಂದು ಉದ್ಘಾಟನಾ ಭಾಷಣದಲ್ಲಿ ಶ್ರೀಯುತ ಕೆರಾಡಿ ಚಂದ್ರಶೇಖರ್ ಶೆಟ್ಟಿ ಅವರು ಮಾತನಾಡಿದರು
       ಶ್ರೀ. ಕಜಂಪಾಡಿ ಸುಬ್ರಹ್ಮಣ್ಯ ಭಟ್ ನಿವೃತ್ತ ಅಧ್ಯಾಪಕರು  ‘ ಭಾರತೀಯ ಜ್ಞಾನ ಪರಂಪರೆ’  ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಮಾಡಿದರು ಭಾರತ ದೇಶ ಅನೇಕತೆಯಲ್ಲಿ ಏಕತೆಯನ್ನು ಕಂಡುಕೊಂಡದ್ದು ಡಾರ್ವಿನ್ ಸಿದ್ದಾಂತಕಿಂತ ಸರ್ವೆ ಭವಂತು ಸುಖಿನಃ ಎಂಬ ತತ್ವವನ್ನು ಕಲಿಸಿದೆ ಭಾರತ ಜಗತ್ತೇ ಕೊಟ್ಟ ಅದ್ಭುತ ಕೊಡುಗೆ ಯೋಗ ಗಣಿತದಲ್ಲಿ ಭಾರತದ ಕೊಡುಗೆ ಶೂನ್ಯ ಅದು ಪರಿಪೂರ್ಣತೆ ಸಂಕೇತವಾಗಿದೆ ಎಂದು ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.ಕಾರ್ಯಕ್ರಮದಲ್ಲಿ ಮಹೇಶ್ ಹೈಕಾಡಿ ಸಂಪಾದಕತ್ವದ  ‘ ಕಾವ್ಯೋತ್ಸವ ‘  ಕವನ ಸಂಕಲನ ಅನಾವರಣಗೊಂಡಿದೆ .ಶ್ರೀಯುತ ಪಾಂಡುರಂಗ ಪೈ ಅವರು ಕವನ ಸಂಕಲನವನ್ನು ಅನಾವರಣಗೊಳಿಸಿದರು . ಶ್ರೀ ಗುರು ದಾಸ ಶೆಣೈ ಅಧ್ಯಕ್ಷರು ಅಮೃತ ಭಾರತಿ ವಿದ್ಯಾ ಕೇಂದ್ರ ಹೆಬ್ರಿ ಶ್ರೀ ಬಿ.ಕೆ ರಾಮಕೃಷ್ಣ ಕೋಶಾಧಿಕಾರಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಉಪಸ್ಥಿತರಿದ್ದರು. ಶೈಕ್ಷಣಿಕ ಸಮ್ಮಿಲನದಲ್ಲಿ ಶಿಕ್ಷಕ ವರ್ಗದವರಿಗಾಗಿ ‘  ಸಮರ್ಥ ಶಿಕ್ಷಕ – ಸಮರ್ಥ ಶಾಲೆ ‘  ವಿಷಯದಡಿ ಶ್ರೀ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ  ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ಇವರು ಉಪನ್ಯಾಸ ನೀಡಿದರು.
ಬೋಧಕೇತರ ವರ್ಗದವರಿಗೆ ‘ ನನ್ನ ಕಾಯಕ-  ಶ್ರೇಷ್ಠ ಕಾಯಕ ‘ ವಿಷಯವನ್ನು ಶ್ರೀ  ಪ್ರಶಾಂತ್ ಅರೆ ಶಿರೂರು ರಾ.ಸ್ವ.ಸೇ.ಸಂಘದ ಉಡುಪಿ ಜಿಲ್ಲಾ ಬೌದ್ಧಿಕ ಪ್ರಮುಖ್, ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರ ಅವಧಿಯನ್ನು  ಶ್ರೀ . ಟಿ ಕೃಷ್ಣರಾಯ ಶಾನುಭಾಗ್ ಅಧ್ಯಕ್ಷರು ಶಾಂತಿಧಾಮ ಗುರುಕುಲ  ಕೋಟೇಶ್ವರ ಅವರು ‘ ವಿದ್ಯಾಭಾರತಿ ಶಾಲೆಗಳ ಆಡಳಿತ ಮಂಡಳಿಯ ಸಾಮರಸ್ಯ’  ವಿಷಯದ ಕುರಿತು ಉಪನ್ಯಾಸ ನೀಡಲಿದರು.  2022 – 23 ಸಾಲಿನ 10ನೇ ತರಗತಿ  ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸಿದ. ವಿದ್ಯಾಭಾರತಿ ಶೈಕ್ಷಣಿಕ ಸಂಯೋಜಿತ  ಪ್ರತಿ ಸಂಸ್ಥೆಯ ವಿದ್ಯಾರ್ಥಿಗಳಿಗೆ  ಮತ್ತು ವಿದ್ಯಾಭಾರತಿ  ಕರ್ನಾಟಕ  ಪ್ರಾಂತ ,ಕ್ಷೇತ್ರ ,ರಾಷ್ಟ್ರಮಟ್ಟದ ಕ್ರೀಡಾಕೂಟ , ವಿಜ್ಞಾನ ಮೇಳ ಗಣಿತ ಸಂಸ್ಕೃತಿ ಜ್ಞಾನ ಮಹೋತ್ಸವ ಸ್ಪರ್ಧೆಯಲ್ಲಿ ವಿಜೇತರಾದ , ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಜೆ ನಡೆದ
 ಸಮಾರೂಪ   ಸಮಾರಂಭದಲ್ಲಿ ಮಾತುಗಳನ್ನು ಶ್ರೀ. ಬಿ.ಕೆ ರಾಮಕೃಷ್ಣ  , ಕೋಶಾಧಿಕಾರಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಇವರು ಸಮಾರೋಪ ಭಾಷಣ ಮಾಡಿದರು. ಉಡುಪಿ ಜಿಲ್ಲೆಯಲ್ಲಿ ಉತ್ತಮವಾದ ಕಾರ್ಯಕರ್ತರ ಪಡೆಯಿದೆ ಭಾರತೀಯ ಜ್ಞಾನ ಪರಂಪರೆ ಪರಿಚಯ ಸಂಘಟನಾತ್ಮಕವಾಗಿ ಸಾಗಬೇಕಿದೆ ಸಮಾಜದ ಪರಿವರ್ತನೆ ಮಾಡುವ ಅಂಶಗಳು ಮಕ್ಕಳಿಗೆ ಪ್ರೇರಣೆಯಾಗುವಂತ ಕಾರ್ಯಕ್ರಮ ಶಾಲೆಗಳಲ್ಲಿ ಮಾಡಬೇಕು ಶಿಕ್ಷಕರು ಚಾಣಕ್ಯನ ಪಾತ್ರವನ್ನು ವಹಿಸಬೇಕು ನಮ್ಮ ಕ್ಷಮತೆಯನ್ನು ಹೆಚ್ಚಿಸಿಕೊಂಡು ಸಮಾಜ ತಿದ್ದುವ ಕಾರ್ಯದಲ್ಲಿ ಕೆಲಸದಲ್ಲಿ ತೊಡಗಬೇಕು ಎಂದು ಸಮಾರೋಪ ಭಾಷಣದಲ್ಲಿ ಮಾತನಾಡಿದರು. ಸಮಾರೂಪದ ವೇದಿಕೆಯಲ್ಲಿ ಶ್ರೀ ಬಾಲಕೃಷ್ಣ ಮಲ್ಯ ಸದಸ್ಯರು ಅಮೃತ ಭಾರತಿ ಟ್ರಸ್ಟ್ ವಿದ್ಯಾ ಭಾರತಿಯ ಅಧ್ಯಕ್ಷರು ಶ್ರೀ ಪಾಂಡುರಂಗ ಪೈ  ಕಾರ್ಯದರ್ಶಿ ಶ್ರೀ ಮಹೇಶ ಹೈಕಾಡಿ ಉಪಸ್ಥಿತರಿದ್ದರು .ನಿರೂಪಣೆ ಶ್ರೀಮತಿ ವಿಮಲ ಮಾತಾಜಿ ಧನ್ಯವಾದ ಶ್ರೀಮತಿ ಶಕುಂತಲ ಮಾತಾಜಿ ಸ್ವಾಗತ ವೇದವ್ಯಾಸ ತಂತ್ರಿ ಅವರು ಮಾಡಿದರು ಪ್ರಾಸ್ತಾವಿಕ ನುಡಿಯನ್ನು ವಿದ್ಯಾಭಾರತೀಯ ಕಾರ್ಯದರ್ಶಿ ಮಹೇಶ್ ಹೈಕಾಡಿ ಮಾಡಿದರು.
 
 
 
 
 
 
 
 
 
 
 

Leave a Reply