ಕಂಪ್ಯೂಟರ್  ಅಕೌಂಟಿಂಗ್ ತರಬೇತಿ ಸಮಾರೋಪ ಸಮಾರಂಭ

ಇಂದಿನ ದಿನ‌ ಯುವಜನರಿಗೆ  ಸಂಸ್ಕಾರ ಜೊತೆ ಶಿಕ್ಷಣ ದೊರೆತೆ  ಮಾತ್ರ ಉದ್ಯಮದಲ್ಲಿ ಯಶಸ್ಸು ಪಡೆಯಲು ಸಾಧ್ಯ ಇದನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಮ್ಮ ಯೋಚನೆಯನ್ನು ರುಡ್ ಸೆಟ್ ಮೂಲಕ ನೀಡುತ್ತಾ ಬಂದಿದ್ದಾರೆ.. ಉದ್ಯಮ ವ್ಯವಹಾರದ ಜೊತೆಗೆ ಸಾಮಾಜಿಕ ಕಳಕಳಿ ಇರಲಿ, ಈ ಮೂಲಕ ನಾವು ಸಮಾಜದಲ್ಲಿ ಪ್ರಬುದ್ದ ನಾಗಕರಿಕರಾಗಿ ಎಂದು  ಉಡುಪಿ ನಗರ ಸಭೆಯ ಕೊಡವೂರು ವಾರ್ಡ್ ನ ಸದಸ್ಯರು ಸಮಾಜ ಸೇವಕರು ಆದ ಕೆ. ವಿಜಯ ಕುಮಾರ್  ಅಭಿಪ್ರಾಯ ಪಟ್ಟರು.
ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ಕಂಪ್ಯೂಟರ್  ಅಕೌಂಟಿಂಗ್ ತರಬೇತಿಯ‌ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಭಷ್ಟಚಾರ ರಹಿತ, ಪ್ರಾಮಾಣಿಕತೆಯ ವ್ಯವಹಾರದ ನಡೆಸಲು ಪ್ರಯತ್ನಿಸಿ, ದೇಶದ ಸಂಸ್ಕಾರ- ಸಂಸ್ಕೃತಿಯ ಉಳಿಸುವಲ್ಲಿ ಕಾರ್ಯಪರ್ವತಕರಾಗಿ ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ  ಲಕ್ಷ್ಮೀಶ ಎ.ಜಿ  ಮಾತನಾಡಿ ದುಷ್ಟದಿಂದ ದೂರ ಇದು ವ್ಯವಹಾರ ನಡೆಸಿ, ಪ್ರತಿ ಹೆಜ್ಜೆಯಲ್ಲಿ ವ್ಯವಹಾರದ ಲೆಕ್ಕಚಾರ ಇರಲಿ  ಜಟಿಲ ವಾದ ಸಮಸ್ಯೆಗಳು ಬಂದರೆ ಖಂಡಿತವಾಗಿ ಸಂಸ್ಥೆಯನ್ನು ಸಂಪರ್ಕ ಮಾಡಿ ಒಳ್ಳೆಯ ದಾಗಲಿ ಎಂದರು.
ಕಾರ್ಯಕ್ರಮದ ಅತಿಥಿಗಳನ್ನು ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ಸ್ವಾಗತಿಸಿ, ತರಬೇತಿ ಯ ಹಿನ್ನೋಟ ವನ್ನು ನೀಡಿ, ನಿರೂಪಿಸಿದರು ಹಿರಿಯ ಕಛೇರಿ ಸಹಾಯಕರಾದ ಶ್ರೀನಿವಾಸಯ್ಯ ವಂದಿಸಿದರು. ಉಪನ್ಯಾಸಕರಾದ ಸಂತೋಷ ಶೆಟ್ಟಿ, ರವಿ ಸಾಲ್ಯಾನ್ ಉಪಸ್ಥಿತರಿದ್ದರು
ಶಿಬಿರಾರ್ಥಿಗಳಾದ ವಿನಯ ಭಟ್, ಸಂತೋಷ ಕೆರಾಡಿ, ಶ್ಯಾಮಲ ಕುಡ್ವ, ವಿಕಾಸ್, ಕಿರಣ * ತಮ್ಮ ಅನುಭವ ಹಂಚಿಕೊಂಡರು. *ಕುಮಾರಿ ಶ್ವೇತ  ಪ್ರಾರ್ಥನೆ ನೇರವರಿಸಿದರು.
 
 
 
 
 
 
 
 
 
 
 

Leave a Reply