ನಾಳೆ (ಆ.07) ಎಸ್ಎಸ್ ಎಲ್ ಸಿ ಫಲಿತಾಂಶ ಪ್ರಕಟ.

ಬೆಂಗಳೂರು:  ಈ ಬಾರಿ ಭಾರೀ ಚರ್ಚೆಗೋಳಗಾಗಿದ್ದ 2020-21ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶಗಳು ನಾಳೆ (ಆ. 07) ವೆಬ್ಸೈಟನಲ್ಲಿ ಪ್ರಕಟ. ನಾಳೆಯೇ ಫಲಿತಾಂಶ ಪ್ರಕಟಿಸಲು ಪ್ರೌಢಶಿಕ್ಷಣ ಪರೀಕ್ಷಾ ಶಿಕ್ಷಣ ಮಂಡಳಿ ಸಿದ್ಧತೆ ನಡೆಸಿದೆ.  

ಕೊರೋನಾ ಭೀತಿಯ ನಡುವೆ, ಬಹಳಷ್ಟು ಚರ್ಚೆಗಳ ಬಳಿಕ ಕಳೆದ ಜು. 19 ಮತ್ತು 22ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಬಾರಿ ಕೇವಲ 2 ದಿನದಲ್ಲಿ ಪರೀಕ್ಷೆ ನಡೆದಿದ್ದು, ಎಲ್ಲಾ ವಿಷಯಗಳನ್ನು ಒಳಗೊಂಡಿತ್ತು. ಒಂದೊಂದು ದಿನ ಮೂರು ವಿಷಯಗಳಿಗೆ ಪರೀಕ್ಷೆ ನಡೆಸಲಾಗಿತ್ತು.  

ಪ್ರತಿ ವಿಷಯಕ್ಕೂ ಬಹು ಆಯ್ಕೆ ಪ್ರಶ್ನೆಗಳ ಮಾದರಿಯ 40 ಅಂಕಗಳ ಪ್ರಶ್ನೆಗಳಂತೆ ಒಟ್ಟು 120 ಪ್ರಶ್ನೆಗಳನ್ನು ಕೇಳಲಾಗಿತ್ತು. ಉತ್ತರ ಗುರುತಿಸಲು ಪ್ರತಿ ವಿಷಯಕ್ಕೂ ಪ್ರತ್ಯೇಕ ಬಣ್ಣದ ಒಎಂಆರ್‌ ಪ್ರಶ್ನೆಗಳನ್ನು ನೀಡಲಾಗಿತ್ತು

 
 
 
 
 
 
 
 
 
 
 

Leave a Reply