ಏಪ್ರಿಲ್ 21, ಮಂಗಳವಾರ ಶಿರೂರು ಮಠಕ್ಕೆ 31ನೇ ಉತ್ತರಾಧಿಕಾರಿಯಾಗಿ ನೂತನ ಯತಿಯ ಹೆಸರು ಘೋಷಣೆ- ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು

ಉಡುಪಿ: ಅಷ್ಟ ಮಠಗಳಲ್ಲೊಂದಾದ ಶಿರೂರು ಮಠದ 31ನೇ ಉತ್ತರಾಧಿಕಾರಿಯಾಗಿ ಉಡುಪಿಯ ಹಿರಿಯ ವಿದ್ವಾಂಸರೊಬ್ಬರ ಪುತ್ರ ಆಯ್ಕೆಯಾಗಿದ್ದು, ನಾಳೆ ಬುಧವಾರದಂದು ರಾಮನವಮಿ ಪರ್ವ ಕಾಲದಲ್ಲಿ ಶಿರೂರು ಮೂಲ ಮಠದಲ್ಲಿ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ನೂತನ ಯತಿಯ ಹೆಸರು ಘೋಷಿಸಲಿದ್ದಾರೆ.

ಈ ವಟುವು ಬಾಲ್ಯದಿಂದಲೇ ಅಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದು, ಎಸ್ಸೆಸ್ಸೆಲ್ಸಿವರೆಗೆ ಲೌಕಿಕ ಶಿಕ್ಷಣ ಪಡೆದಿದ್ದು, ಈಗ ಸುಮಾರು 18 ವರ್ಷ ವಯಸ್ಸು. ಕಳೆದ 2 ವರ್ಷಗಳಿಂದ ಮಧ್ವ ಸಿದ್ಧಾಂತ ಹಾಗೂ ವೇದ, ವೇದಾಂತ ವಿಷಯಗಳನ್ನು ಬೋಧಿಸಲಾಗುತ್ತಿದೆ. 

ನಾಗಪುರ, ಕಾಶಿ, ಉಡುಪಿ ಸಹಿತ ವಿವಿಧೆಡೆ ಜ್ಯೋತಿಷಿಗಳಲ್ಲಿ ವಟುವಿನ ಸನ್ಯಾಸಿ ಯೋಗದ ಬಗ್ಗೆ ಜಾತಕವನ್ನು ಪರಾಮರ್ಶಿಸಲಾಗಿದೆ.ಎಲ್ಲೆಡೆ ಸಕಾರಾತ್ಮಕ ಉತ್ತರ ದೊರಕಿದ್ದು, ಮೇ 2ನೇ ವಾರದಲ್ಲಿ ಸೋಂದಾ ಕ್ಷೇತ್ರದ ವಾದಿರಾಜ ಶ್ರೀಗಳ ಸನ್ನಿಧಿಯಲ್ಲಿ ಸನ್ಯಾಸ ದೀಕ್ಷೆ ನೀಡಲು ಸೋದೆ ಶ್ರೀಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ 2018ರಲ್ಲಿ ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಮೂರು ವರ್ಷಗಳಿಂದ ದ್ವಂದ್ವ ಮಠವಾದ ಸೋದೆ ಮಠ ಶಿರೂರು ಮಠದ ಎಲ್ಲಾ ಆಡಳಿತ ನಿರ್ವಹಿಸುತ್ತಿದೆ. 

ಇದೆ ವೇಳೆ ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠದಲ್ಲಿ ಏ.21ರಂದು 2.30ಕ್ಕೆ ನೂತನ ಸಭಾಂಗಣದ ಉದ್ಘಾಟನೆ ನಡೆಯಲಿದೆ.

 
 
 
 
 
 
 
 
 
 
 

Leave a Reply