ನಮ್ಮ ಜೀವನ ಪದ್ಧತಿಯಲ್ಲಿ ಸ್ವಯಂ ಲಾಕ್ ಡೌನ್ ಮಾಡೋಣ – ರಾಘವೇಂದ್ರ ಪ್ರಭು,ಕವಾ೯ಲು

ಈಗಾಗಲೇ ಕೋವಿಡ್ 2ನೇ ಅಲೆಯು ಜೊರಾಗಿ ಬರುತ್ತಿದೆ..ಈಗಾಗಲೇ ಮೊದಲನೇಯ ಅಲೆಯು ಜನರಿಗೆ ಸಂಕಷ್ಟದ ಪರಿಚಯ ಮಾಡಿಸಿದೆ. ಆದರೂ ನಾವು ಪಾಠ ಕಲಿಯಲಿಲ್ಲ ಈ ಹಿಂದೆ ಮಾಡಿದ ತಪ್ಪನ್ನು ಮತ್ತಷ್ಟು ಹೆಚ್ಚು ಮಾಡುತ್ತಿದ್ದೇವೆ.

ಕಳೆದ ವರುಷದ ಕರೋನಾ ಅನುಭವ ಎಲ್ಲರಿಗೂ ಇದೆ,
ಈಗ ಮತ್ತೆ ಸಾಂಕ್ರಾಮಿಕ ಉಲ್ಬಣವಾಗುತ್ತಿದೆ, ಆದರೆ ಜನ ಮಾತ್ರ, ಇನ್ನೂ ಪೂರ್ತಿ ಪಾಠ ಕಲಿತಿಲ್ಲ, ಒಂದಷ್ಟು ದಿನ ರೋಗ ನಿಯಂತ್ರಣಕ್ಕೆ, ನಾವೂ ಕೈ ಜೋಡಿಸಬೇಕಲ್ಲವೇ..
ಅದಕ್ಕಾಗಿ, ದೇಶವನ್ನೇ ಲಾಕ್ ಡೌನ್ ಮಾಡುವ ಬದಲು, ನಾವೇ ಸ್ವಯಂ ಲಾಕ್ ಡೌನ್ ಮಾಡಿಕೊಂಡರೆ ಉತ್ತಮ.
ಅದಕ್ಕಾಗಿ ಒಂದಷ್ಟು ಮಾರ್ಗೋಪಾಯಗಳು ತಜ್ಞರ ಸಲಹೆ ಇಲ್ಲಿವೆ,

ಒಂದಷ್ಟು ದಿನ ಸಾರ್ವಜನಿಕವಾಗಿ, ಹೆಚ್ಚು ಜನಸಂದಣಿ ಜಾಗದಲ್ಲಿ ಓಡಾಡುವುದು ಬಿಡೋಣ.

ಮನರಂಜನಾ ಸ್ಥಳಗಳಿದ ದೂರವಿದ್ದು, ಅದನ್ನ ಮನೆಯಲ್ಲೇ ಅನುಭವಿಸೋಣ.

ಹಬ್ಬಹರಿದಿನಕ್ಕೆ ಯಾರನ್ನೂ ಕರೆಯುವುದೂ ಬೇಡ.
ನಾವೂ ಯಾರ ಮನೆಗೂ ಸಧ್ಯಕ್ಕೆ ಹೋಗುವುದು ಬೇಡ.

ತಿಂಗಳಿಗಾಗುವಷ್ಟು ದಿನಸಿ ತರುವುದರಿಂದ,
ಪದೇ ಪದೇ ಅಂಗಡಿಗೆ ಹೋಗುವುದನ್ನ ತಪ್ಪಿಸೋಣ

ದೇವಸ್ಥಾನ-ತೀರ್ಥಯಾತ್ರೆ ಸದ್ಯಕ್ಕೆ ಮುಂದೂಡೋಣ.

ಹೋಟೆಲುಗಳಲ್ಲಿ, ರಸ್ತೆ ಬದಿಯ ಕೈಗಾಡಿಯಲ್ಲಿ ತಿನ್ನುವುದನ್ನ ಸದ್ಯಕ್ಕೆ ಬಿಟ್ಟಿರೋಣ.

ಪಾನಿಪೂರಿ ಚಾಟ್ಸ್ ತಿನ್ನದಿದ್ದರೆ ಪ್ರಪಂಚ ಏನೂ ಮುಳುಗೊಲ್ಲ, ಬೇಕೇಬೇಕಿದ್ದರೆ ಮನೆಯಲ್ಲೇ, ಮಾಡಿ ತಿನ್ನೋಣ.

ಮತ್ತೆ ಕಷಾಯ, ನಾರು – ಬೇರು, ಗಿಡಮೂಲಿಕೆ ಪ್ರಾರಂಭ ಮಾಡೋಣ.

ಕ್ಲಬ್ಬು – ಪಬ್ಬು ಮುಂತಾದ ಕಾರುಬಾರುಗಳಿಂದ ಒಂದೆರಡು ತಿಂಗಳು ದೂರವಿರೋಣ.

ಆದಷ್ಟು ಗುಂಪುಗೂಡುವುದನ್ನ ಕಡಿಮೆ ಮಾಡೋಣ.

ಎಲ್ಲಕ್ಕಿಂತ ಮುಖ್ಯವಾಗಿ, ಮಾನಸಿಕವಾಗಿ ದುಗುಡ ಆತಂಕದಿಂದ ದೂರವಿರೋಣ.

ಅದಕ್ಕೂ ಮುಖ್ಯವಾಗಿ ಉದ್ವೇಗಕ್ಕೆ..ಖಿನ್ನತೆಗೆ ದೂಡುವ ಟಿ.ಆರ್.ಪಿ ಆಧಾರಿತ
ಟಿವಿ ಸುದ್ದಿ ಪ್ರಸಾರಗಳಿಂದ ದೂರವಿರೋಣ.

ಒಂದೆರೆಡು ತಿಂಗಳು ಸಂಪಾದನೆ ಕಡಿಮೆಯಾದರೂ ಮುಂದೆ ಸಂಪಾದನೆ ಮಾಡಬಹುದು…ಹೆಚ್ಚು ಕಡಿಮೆ ಆಗಿ ಆಸ್ಪತ್ರೆ ಸೇರಿದರೆ, ನರಕ ದರ್ಶನ ತಪ್ಪದು.

ಅದಕ್ಕಾಗಿ ಸರಕಾರ ಸಮಾಜ ವ್ಯವಸ್ಥೆ ಇವುಗಳನ್ನ ಟೀಕಿಸುವುದು ಬಿಟ್ಟು ನಮ್ಮನ್ನ ನಾವೇ ನಿಯಂತ್ರಿಸೋದು ಸರಿಯಾದ ಮಾರ್ಗ.
ನಾವು ಬದಲಾವಣೆಯಾದರೆ ಮಾತ್ರ ದೇಶ ಬದಲಾವಣಿ ಆಗಲು ಸಾಧ್ಯ.
ಈ ಕರೋನಾ ದೂರ ಮಾಡಲು ಎಲ್ಲರ ಸಹಕಾರ ಬೇಕಾಗಿದೆ. ಅದೇ ರೀತಿ ಕರೋನಾ ಲಸಿಕೆಯನ್ನು ಯಾವುದೇ ಅಪ ಪ್ರಚಾರದ ಹೊರತಾಗಿ ತೆಗೆದುಕೊಳ್ಳಬೇಕಾಗಿದೆ.
ಒಟ್ಟಾಗಿ ಅದಷ್ಟು ಬೇಗ ಈ ಸಾಂಕ್ರಾಮಿಕ ದೂರವಾಗಲಿ.

 

 
 
 
 
 
 
 
 
 
 
 

Leave a Reply