ಉದ್ಯಾವರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7 ಲಕ್ಷ ರೂ. ನಗದು ಪೊಲೀಸರ ವಶಕ್ಕೆ!

ಉದ್ಯಾವರದ ಚೆಕ್‌ಪೋಸ್ಟ್ ಬಳಿ ಎರಡು ಕಾರುಗಳಲ್ಲಿ ಸಾಗಾಟ ಮಾಡುತ್ತಿದ್ದ 7 ಲಕ್ಷ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಪ್ರತ್ಯೇಕ ಕಾರುಗಳಲ್ಲಿ ತಲಾ 3.5 ಲಕ್ಷ ರೂ.ಗಳಂತೆ ಒಟ್ಟು 7 ಲಕ್ಷ ನಗದನ್ನು ಸಾಗಿಸುತ್ತಿದ್ದರು. ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಾರೆ. ಒಂದು ಕಾರು ಧರ್ಮಸ್ಥಳ ಮಾರ್ಗವಾಗಿ ಉಡುಪಿಯತ್ತ ಬರುತ್ತಿದ್ದಾಗ ನಗದು ಸಹಿತ ಸಿಕ್ಕಿಬಿದ್ದಿದೆ. 

ಮತ್ತೊಂದು ಕಾರು ಮಂಗಳೂರಿನಿಂದ ಉದ್ಯಾವರ ಮೂಲಕ ಉಡುಪಿಯತ್ತ ಬರುತ್ತಿತ್ತು. ನಗದು ಸಾಗಾಟಕ್ಕೆ ಸೂಕ್ತ ದಾಖಲಾತಿ ಇಲ್ಲದ ಕಾರಣ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ.

 
 
 
 
 
 
 
 
 
 
 

Leave a Reply