ಸಾಧನೆ ಮತ್ತು ಸೇವೆಯಿಂದ ವ್ಯಕ್ತಿ ಶಕ್ತಿಯಾಗಲು ಸಾಧ್ಯ -ರಾಜೇಶ್ ಭಟ್ ಪಣಿಯಾಡಿ

ಸಾಧನೆಯ ಅಥವಾ ಸೇವೆಯ ಗುಣ ಇದ್ದಾಗ ಮಾತ್ರ ಒಬ್ಬ ವ್ಯಕ್ತಿ ಶಕ್ತಿಯಾಗಿ ಸಮಾಜದಲ್ಲಿ ಹೊರಹೊಮ್ಮುತ್ತಾನೆ. ಬೇರೆಯವರ ಒಳ್ಳೆಯತನವನ್ನು ಗುರುತಿಸಿ, ಸತ್ಕರಿಸಿ ತಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಂಡಾಗ ಮಾತ್ರ ಅವನ ಜೀವನ ಸಾರ್ಥಕಥೆಯನ್ನು ಪಡೆದು ಮನುಷ್ಯತ್ವದಿಂದ ಆತ ದೈವತ್ವದ ಕಡೆಗೆ ಸಾಗಲು ಸಾಧ್ಯ. ಎಲ್ಲಾ ರೀತಿಯಲ್ಲೂ ಸಮಾಜದ ಕಾಲ್ತುಳಿತಕ್ಕೆ ಸಿಕ್ಕಿದರೂ ಸಾವರಿಸಿಕೊಂಡು ತನ್ನ ತಾಳ್ಮೆ, ಬುದ್ದಿಶಕ್ತಿ, ಅತ್ಮ ಬಲ ಮತ್ತು ದೈವತ್ವದ ಬಲದಿಂದ ಮತ್ತೆ ಮೇಲೆದ್ದು ನಿಲ್ಲುವ ಶಕ್ತಿ ಬ್ರಾಹ್ಮಣನಿಗಿದೆ. ಆದರೆ ಇನ್ನಷ್ಟು ನಮ್ಮಲ್ಲಿ ಒಗ್ಗಟ್ಟಿನ ಅವಶ್ಯಕತೆ ಇದೆ ಹಾಗೂ ಯುವಕರಲ್ಲಿ ಹೆಚ್ಚು ಹೆಚ್ಚು ಧಾರ್ಮಿಕ ಪ್ರಜ್ಞೆಯನ್ನು ತರಬೇಕಾಗಿದೆ.

ಒಬ್ಬ ಮನುಷ್ಯನಾದವನಿಗೆ ದೇವ ಪ್ರೇಮ, ದೇಹ ಪ್ರೇಮ ಹಾಗೂ ದೇಶಪ್ರೇಮ ಇರಬೇಕು. ಅಂತಹವರನ್ನು ನಾವು ಇಲ್ಲಿ ಈ ಸಂಸ್ಥೆಯಲ್ಲಿ ಕಾಣುತ್ತಿದ್ದೇವೆ. ಸಾರ್ವಜನಿಕರ ಹಿತಕ್ಕಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು, ದೇಹಕ್ಕೆ ಮತ್ತು ದೇಶಕ್ಕೆ ಅಥವಾ ಸಮಾಜಕ್ಕೆ ಅಗತ್ಯವಿರುವ ವೈದ್ಯಕೀಯ ನೆರವು, ಮಕ್ಕಳಿಗೆ ವಿದ್ಯಾರ್ಥಿ ವೇತನ, ಅಶಕ್ತರಿಗೆ ಅಬಲರಿಗೆ ಅನಾರೋಗ್ಯಪೀಡಿತರಿಗೆ ಆರ್ಥಿಕ ನೆರವು, ಸಾಧಕರಿಗೆ ಸನ್ಮಾನ ಹೀಗೆ ಹತ್ತು ಹಲವು ಸೇವಾ ಕೈಂಕರ್ಯಗಳು ನಿಮ್ಮಿಂದ ಅವಿರತವಾಗಿ ನಡೆಯುತ್ತಿದೆ.

ಇದು ಭಾನುವಾರದಂದು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ) ಮತ್ತು ಮಣಿಪಾಲ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇತ್ತೀಚೆಗಷ್ಟೇ ಭವ್ಯವಾಗಿ ಲೋಕಾರ್ಪಣೆಗೊಂಡ ಶ್ರೀ ಬ್ರಾಹ್ಮೀ ಸಭಾ ಭವನದಲ್ಲಿ ಸಂಪನ್ನಗೊಂಡ ಮಣಿಪಾಲ ಸಿಗ್ನಾ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಹಾಗೂ ವಿಪ್ರ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಳದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್ ರವರು ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಕ್ಕಳ ಚಿಕಿತ್ಸಾ ವಿಭಾಗದ ತಜ್ಞ ಪ್ರಾದ್ಯಾಪಕ ಡಾ| ಸುನಿಲ್ ಸಿ. ಮುಂಡ್ಕೂರು ರವರ ಭಾವಪೂರ್ಣ ಭಾಷಣದಲ್ಲಿ ಹೊರಹೊಮ್ಮಿದ ನುಡಿ ಮುತ್ತುಗಳು.

ಈ ಸಂದರ್ಭದಲ್ಲಿ ಉಡುಪಿಯ ಸುತ್ತಮುತ್ತಲಿನ ಸುಮಾರು 450 ವಿಪ್ರ ಕುಟುಂಬಕ್ಕೆ ಆರೋಗ್ಯ ಕಾರ್ಡ್ ವಿತರಿಸಲಾಯಿತು. ತದ ನಂತರ ಅಸ್ಪೃಶ್ಯತೆಯ ವಾತಾವರಣವನ್ನು ನಿರ್ಮಿಸಿರುವ ಇಡೀ ವಿಶ್ವವನ್ನು ನುಂಗಿ ತೇಗುತ್ತಿರುವ ಕೋವಿಡ್ ಮಹಾಮಾರಿಗೆ ಸಡ್ಡು ಹೊಡೆದು ತಾಯಿ ಮಗು ಹಾಗೂ ಹಲವು ಜೀವಗಳನ್ನು ಉಳಿಸಿದ ಮಾತೆ ಡಾ| ಟಿ.ಎಂ.ಎ. ಪೈ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ ಶಶಿಕಲಾ ಭಟ್ ರವರನ್ನು, ಹಲವಾರು ನಾಟಕ, ಚಲನಚಿತ್ರಗಳಲ್ಲಿ ಅಭಿನಯಿಸಿದ ನಟ, ನಿರ್ದೇಶಕ , ಸಂಘಟಕ ಹಾಗೂ ನಾಯಕ ರಂಗಭೂಮಿ ಕಲಾವಿದ ರವಿರಾಜ್ ಎಚ್.ಪಿ. , ಅಪರ ಕ್ರಿಯೆ ಮುಂತಾದ ಸಾಮಾಜಿಕ ಕಳಕಳಿಯ ಸೇವೆಯನ್ನು ಮಾಡುತ್ತಿರುವ ರಾಮ ಕೊಡಂಚ, ಹಾಗೂ ಅಚ್ಚುಕಟ್ಟು, ಶಿಸ್ತು ಸಂಯಮ ಭಕ್ತಿಶ್ರದ್ಧೆಯ ಧಾರ್ಮಿಕ ಸೇವೆಯ ಸಾಕಾರಮೂರ್ತಿ ರಮೇಶ್ ಭಟ್ ರನ್ನು ಸನ್ಮಾನಿಸಲಾಯಿತು. ಮುರಲಿ ಭಟ್ ಎಂಬ ಬಾಲಕನಿಗೆ ಶಸ್ತ್ರಚಿಕಿತ್ಸೆಗಾಗಿ ನೆರವು, ಕೋವಿ ಡ್ ಹೆಲ್ಪ್ ಲೈನ್ ನಲ್ಲಿ ಕೋವಿಡ್ ಪೀಡಿತರಿಗೆ ತನುಮನ ಧನ ಸಹಕಾರ ನೀಡಿದ ನಮ್ಮ ವಿಪ್ರ ಬಂಧುಗಳಾದ ರಾಜೇಶ್ ನಾವಡ, ಮೋಹನ್ ದಾಸ್ ಭಟ್ ರಂಜನ್ ಕಲ್ಕೂರ್ ರವರ ನೇತೃತ್ವದಲ್ಲಿ ಅಭಿನಂದಿಸುವುದರ ಜೊತೆಗೆ ಕೋವಿಡ್ ಕಾರಣದಿಂದ ತಾಯಿಯನ್ನು ಕಳೆದುಕೊಂಡ ಸಂತ್ರಸ್ತೆ ಅಮೃತಾಗೆ ಆರ್ಥಿಕ ನೆರವು, ಆರೋಗ್ಯ ಕಾರ್ಡ್ ವಿತರಣೆಯ ಸಂದರ್ಭದಲ್ಲಿ ಶ್ರಮಿಸಿದ ಸಂಚಾಲಕ ರಘುಪತಿ ರಾವ್ ಹಾಗೂ ಇತರ ಸದಸ್ಯರನ್ನು ಗುರುತಿಸಲಾಯಿತು.

ಈ ಸಂದರ್ಭದಲ್ಲಿ ಈ ಬಾರಿಯ ಪರ್ಯಾಯ ಪೀಠಾಧೀಶರಾದ ಕೃಷ್ಣಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರನ್ನು ಸಭಾ ಭವನಕ್ಕೆ ಅದ್ದೂರಿಯಿಂದ ಬರಮಾಡಿಸಿಕೊಂಡು ಅವರಿಗೆ ಸಭಾದ ಅಧ್ಯಕ್ಷ ಎಂ. ಜಿ. ಚೈತನ್ಯ ದಂಪತಿಗಳು ಫಲ ಪುಷ್ಪ ಮಾಣಿಕ್ಯ ಮಂಗಳಾರತಿ ಎತ್ತಿ ಪಾದಪೂಜೆಯನ್ನು ನೇರವೇರಿಸಲಾಯಿತು. ನಂತರ ಅನುಗ್ರಹ ಸಂದೇಶಗೈದ ಮಠಾಧೀಶರು ಪರ್ಯಾಯ ಮಹೋತ್ಸವದಲ್ಲಿ ಸಾಂಗವಾಗಿ ತೊಡಗಿಕೊಳ್ಳಲು ವಿನಂತಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಸವಿತಾ, ಗಾಯತ್ರಿ, ಆಶಾರವರ ಪ್ರಾರ್ಥನೆಯ ನಂತರ ಅಧ್ಯಕ್ಷ ಚೈತನ್ಯ ಎಂ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು. ಸಾಧಕರನ್ನು ಪೂರ್ಣಿಮಾ ಜನಾರ್ಧನ್, ಪದ್ಮಲತಾ ವಿಷ್ಣು, ರಾಜೇಂದ್ರ ಪ್ರಸಾದ್ ಹಾಗೂ ನಾರಾಯಣ ದಾಸ ಉಡುಪರು ಪರಿಚಯಿಸಿ ಕೊನೆಯಲ್ಲಿ ವಂದನಾರ್ಪಣೆಯನ್ನೂ ಗೈದರು. ಸನ್ಮಾನಿತರ ಪರವಾಗಿ ರವಿರಾಜ್ H.P. ಹಾಗೂ ಡಾ| ಶಶಿಕಲಾ ಭಟ್ ಮಾಡನಾಡಿದರು. ವೇದಿಕೆಯಲ್ಲಿ ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಉಪಾಧ್ಯಕ್ಷ ರಘುಪತಿ ರಾವ್ ಉಪಸ್ಥಿತರಿದ್ದರು. ಸುಮಿತ್ರಾ ಕೆರೆಮಠ ಮತ್ತು ಸುನೀತಾ ರವರು ಸಹಕರಿಸಿದರು.

ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ರಾಜೇಶ್ ಭಟ್ ಪಣಿಯಾಡಿ ನಿರ್ವಹಿಸಿದರು.ಸಭೆಯ ಕೊನೆಯಲ್ಲಿ ಸಭಾಸದರಿಗೆ ಲಘು ಉಪಹಾರ ಹಾಗೂ ಆರೋಗ್ಯ ಸುರಕ್ಷಾ ಕಾರ್ಡ್ ವಿತರಿಸಲಾಯಿತು. 

 
 
 
 
 
 
 
 
 
 
 

Leave a Reply