ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘ: 17ನೇ ವರ್ಷದ ವಾರ್ಷಿಕ ಮಹಾಸಭೆ

ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಸಾಣೂರು ಗ್ರಾಮದ, ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ 17ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರು ಹಾಗೂ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ರವರ ಅಧ್ಯಕ್ಷತೆಯಲ್ಲಿ ಸಾಣೂರು ಸುವರ್ಣ ಗ್ರಾಮೋದಯ ಸೌಧದಲ್ಲಿ ಸೆಪ್ಟೆಂಬರ್ 6 , ಮಂಗಳವಾರದಂದು ಜರುಗಿತು .

ದ ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೆ. ಪಿ .ಸುಚರಿತ ಶೆಟ್ಟಿಯವರು ಮಹಾಸಭೆಯ ಕಾರ್ಯಕಲಾಪಗಳನ್ನು ದೀಪ ಪ್ರಜ್ವಲದ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಹೈನುಗಾರಿಕೆ ಇಂದು ಕೃಷಿಯ ಜೊತೆಗೆ ಕೇವಲ ಉಪಕಸುಬಾಗಿ ಉಳಿಯದೆ ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರವಾಗಿ ನೆಮ್ಮದಿಯ ಬದುಕನ್ನು ನೀಡಿದೆ ಮತ್ತು ಉಡುಪಿ ಜಿಲ್ಲೆಯ ಹೈನುಗಾರ ಸದಸ್ಯರ ನಿರಂತರ ಪರಿಶ್ರಮದಿಂದ ಸಹಕಾರಿ ಹಾಲು ಒಕ್ಕೂಟ , ಕರ್ನಾಟಕ ರಾಜ್ಯದ 16 ಒಕ್ಕೂಟಗಳಲ್ಲಿ ಹಾಲು ಉತ್ಪಾದಕರು ಡೈರಿಗೆ ನೀಡುವ ಹಾಲಿಗೆ ಗರಿಷ್ಠ ಬೆಲೆಯನ್ನು ನೀಡುವುದರ ಜೊತೆಗೆ , ರಾಷ್ಟ್ರಮಟ್ಟದಲ್ಲಿಯೇ ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದರು.

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರತಿದಿನ ಈ ವರ್ಷ ಗರಿಷ್ಠ 5.5 ಲಕ್ಷ ಲೀಟರ್ ಹಾಲು ಸಂಗ್ರಹದ ಜೊತೆಗೆ, ಕಳೆದ ಆರ್ಥಿಕ ವರ್ಷದಲ್ಲಿ ಕೋವಿಡ್ ಕರಿ ಛಾಯೆಯ ಮಧ್ಯೆಯೂ ವಾರ್ಷಿಕ 950 ಕೋಟಿ ವ್ಯವಹಾರದ ಮೂಲಕ 8 ಕೋಟಿ ಲಾಭವನ್ನು ಗಳಿಸಿ, ಸದಸ್ಯ ಸಂಘಗಳಿಗೆ 12 .5% ಶೇರು ಡಿವಿಡೆಂಟ್ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು .

ಸಾಣೂರು ಹಾಲು ಉತ್ಪಾದಕರ ಸಂಘವು ಗ್ರಾಮದ 23 ಸಂಘ – ಸಂಸ್ಥೆಗಳ ಸಹಭಾಗಿತ್ವದಿಂದ 3 ವರ್ಷಗಳ ಹಿಂದೆ ಆಯೋಜಿಸಿದ ಗೋ- ಸಮ್ಮೇಳನವು ಒಕ್ಕೂಟ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಮಾದರಿಯಾಗಿ, ಮೂಡಿಬಂದಿದ್ದು, ಈ ವರ್ಷವೂ ಗೋ – ಸಮ್ಮೇಳನವನ್ನು ಆಯೋಜಿಸಿದ ರೆ ಒಕ್ಕೂಟದ ವತಿಯಿಂದ ಪೂರ್ಣ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡಲಾಗುವುದು ಎಂದು ತಿಳಿಸಿದರು.

ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ,ಸಾಣೂರು ನರಸಿಂಹ ಕಾಮತ್ ರವರು ಮಾತನಾಡುತ್ತಾ, ಕಳೆದ ವರ್ಷದಂತೆ , ಈ ವರ್ಷವೂ ಸಂಘ ಲೆಕ್ಕಪರಿಶೋಧನೆಯಲ್ಲಿ “ಎ” ಶ್ರೇಣಿಯನ್ನು ಕಾಯ್ದುಕೊಂಡು ಬಂದಿದ್ದು , ವಾರ್ಷಿಕ ನಿವ್ವಳ ಲಾಭ *ರೂ. 2.54 ಲಕ್ಷ ,
*65% ಉತ್ಪಾದಕರ ಬೋನಸ್* ಜೊತೆಗೆ ಸದಸ್ಯರಿಗೆ 15% ಶೇರು ಡಿವಿಡೆಂಟ್ ವಿತರಣೆಯ ಮೂಲಕ ಉತ್ತಮ ಪ್ರಗತಿಯನ್ನು ಸಾಧಿಸಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಮಹಾಸಭೆಗೆ ಆಗಮಿಸಿದ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೆ.ಪಿ ಸುಚರಿತ ಶೆಟ್ಟಿ, ಕಡಂದಲೆ ಮತ್ತು ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರವಿರಾಜ ಉಡುಪ ರವರನ್ನು ಹಾಗೂ ಮೂರು ವರ್ಷಗಳ ಕಾಲ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶ್ರೀ ಅಬ್ದುಲ್ ಸಮೀರ್ , ಮೇಲ್ವಿಚಾರಕರಾದ ಶ್ರೀ ಶಿವಕುಮಾರ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.

2021 – 22 ನೇ ಸಾಲಿನಲ್ಲಿ ಸಂಘಕ್ಕೆ ಗರಿಷ್ಠ ಹಾಲು ಹಾಕಿದ ಸದಸ್ಯರು ಗಳಾದ ಜೆರೊಮ್ ಡಿ’ಸಿಲ್ವಾ, ಮಂಜುನಾಥ ರಾವ್, ಸೋಮಶೇಖರ ರಾವ್, ಶ್ರೀಮತಿ ಮಾಲತಿ ,ರಾಯಲ್ ನೊರೊಹ್ನ, ಪ್ರವೀಣ ಶೆಟ್ಟಿ ,ರಾಬರ್ಟ್ ಡಿಸೋಜಾ, ಶಮಿತಾ.ಜಿ .ಪೂಜಾರಿ, ಶ್ರೀಧರ ಸಮಗಾರ, ಶ್ರೀಮತಿ ಲಿಯೋನಿಲ್ಲ ಡಿಸೋಜ ಮತ್ತು ಉತ್ತಮ ಗುಣಮಟ್ಟದ ಹಾಲು ಪೂರೈಸಿದ ಸುಂದರಶೆಟ್ಟಿ, ರಘುರಾಮ ಸುವರ್ಣ ಮತ್ತು ಯಶೋಧಾ ಸುವರ್ಣ ರವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಳೆದ ಸಾಲಿನ ಎಸ್. ಎಸ್. ಎಲ್. ಸಿ, ಪಿ.ಯು.ಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಗರಿಷ್ಠ ಅಂಕಗಳ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ನಗದು ಪುರಸ್ಕಾರ ನೀಡಿ, ಹೆತ್ತವರ ಜೊತೆಗೆ ಗೌರವಿಸಲಾಯಿತು.

ಒಕ್ಕೂಟದ ನೂತನ ಮೇಲ್ವಿಚಾರಕರಾದ ಶ್ರೀ ಶಿವಕುಮಾರ್ ರವರು ಸಂಘದ ಲೆಕ್ಕಪರಿಶೋಧನಾ ವರದಿಯನ್ನು ಸಭೆಗೆ ಮಂಡಿಸಿ ವಿಶ್ಲೇಷಣೆ ನಡೆಸಿ, ಒಕ್ಕೂಟದಿಂದ ಸಂಘದ ಸದಸ್ಯರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.

ಪಶುವೈದ್ಯರಾದ ಡಾಕ್ಟರ್ ಶೀತಲ್ ಕುಮಾರ್ ರವರು ಹಸು ಸಾಕಣೆ ,ಕರುವಿನ ಪೋಷಣೆ, ಜಾನುವಾರುಗಳ ಆರೋಗ್ಯ ರಕ್ಷಣೆ ಮತ್ತು ಗುಣಮಟ್ಟದ ಹಾಲು ಉತ್ಪಾದನೆಯ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ನೀಡಿ, ಸದಸ್ಯರ ಜೊತೆ ಸಂವಾದ ನಡೆಸಿದರು.

ಸಂಘದ ಕಾರ್ಯದರ್ಶಿ ಸಂತೋಷ್ ಶೆಟ್ಟಿಯವರು ಸಂಘದ ವಾರ್ಷಿಕ ವರದಿ ಮತ್ತು ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು.

ನಿರ್ದೇಶಕರಾದ ಜಯಶೆಟ್ಟಿಗಾರರವರು ಅಂದಾಜು ಬಜೆಟ್ ಮಂಡಿಸಿದರು. ಸಂಘದ ಸ್ಥಾಪಕ ಕಾರ್ಯದರ್ಶಿ ಹಾಗೂ ಕೃತಕ ಗರ್ಭಧಾರಣ ಕಾರ್ಯಕರ್ತರಾದ ಶ್ರೀ ಜ್ಞಾನದೇವ
ರವರು ಸಂಘದ ಮುಂದಿನ ಕಾರ್ಯ ಯೋಜನೆಗಳ ವಿವರಗಳನ್ನು ಸಭೆಗೆ ಮಂಡಿಸಿದರು.
ಉಪಾಧ್ಯಕ್ಷರಾದ ಶ್ರೀಮತಿ ಯಶೋಧ ಆರ್ ಸುವರ್ಣ ರವರು ಸ್ವಾಗತಿಸಿ ,ನಿರ್ದೇಶಕರಾದ ಶ್ರೀ ಸೋಮಶೇಖರ್ ರವರು ವಂದನಾರ್ಪಣೆಗೈದರು.

ನಿರ್ದೇಶಕರಾದ ಮುದದೆಲಾಡಿ ಪ್ರವೀಣ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಣೆಗೈದರು.

ಈವರೆಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಸಂಘದ ಸ್ಥಾಪಕ ಸದಸ್ಯ ಶ್ರೀ ಉಮನಾಥ ಶೆಟ್ಟಿಯವರನ್ನು ಹಾಗೂ ಅವರು ತೆರವು ಮಾಡಿದ ನಿರ್ದೇಶಕ ಸ್ಥಾನಕ್ಕೆ ನೂತನ ನಿರ್ದೇಶಕರಾಗಿ ಆಯ್ಕೆಗೊಂಡ ಶ್ರೀ ಸೈಮನ್ ಡಿಸೋಜ ರವರನ್ನು ಅಭಿನಂದಿಸಿ ಗೌರವಿಸಲಾಯಿತು.

ಮಹಾಸಭೆಯಲ್ಲಿ ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜಾತಾ ಶೆಟ್ಟಿ , ಸಂಘದ ನಿರ್ದೇಶಕರಾದ ಸ್ಥಾಪಕ ಅಧ್ಯಕ್ಷ ಶ್ರೀ ಕೊರಗಶೆಟ್ಟಿ, ಮಾಜಿ ಅಧ್ಯಕ್ಷರಾದ ಶ್ರೀಧರ ಸಮಗಾರ, ನಿರ್ದೇಶಕರುಗಳಾದ ಜಯ ಮೂಲ್ಯ, ವಿಶ್ವನಾಥ ಶೆಟ್ಟಿಗಾರ್ ಶ್ರೀಮತಿ ಸಂಜೀವಿ, ರಾಯಲ್ ನರೋನ್ನ, ಸಂಘದ
ಸಿಬ್ಬಂದಿ ನೂತನ ಕೃತಕ ಗರ್ಭಧಾರಣ ಕಾರ್ಯಕರ್ತರಾದ ಶ್ರೀ ಗುರುಪ್ರಸಾದ್, ಸ್ವಚ್ಛತಾ ಕಾರ್ಯಕರ್ತರಾದ ಶ್ರೀಮತಿ ವಿಮಲಾರವರು ಉಪಸ್ಥಿತರಿದ್ದರು.

ಮಹಾಸಭೆಯೆಂದು ಸಭಾಭವನದ ಮುಂಭಾಗದಲ್ಲಿ ” ನಂದಿನಿ ಆನ್ ವೀಲ್ಸ್ ” ನಂದಿನಿ ಉತ್ಪನ್ನಗಳ ವಿಶೇಷ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಮಾಡಲಾಗಿತ್ತು.

 
 
 
 
 
 
 
 
 
 
 

Leave a Reply