ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ ಬೆನ್ನೆಲುಬಾದ ವಿಜಯ ಕೊಡವೂರು.

ಬೆನ್ನು ಮೂಳೆ ಮೂರಿತಕ್ಕೆ ಒಳಗಾದವರ ದಿನಾಚರಣೆಯನ್ನು ಉಡುಪಿಯ ಟೌನ್ ಹಾಲ್ ನಲ್ಲಿ ಅರ್ಥ ಪೂರ್ಣವಾಗಿ ನಡೆಯಿತು.

ಒಟ್ಟು ಉಡುಪಿ ಜಿಲ್ಲೆಯಲ್ಲಿ 94 ಜನ ಬೆನ್ನು ಮೂಳೆ ಮುರಿತಕ್ಕೆ ಒಳದಾದವರನ್ನು ಗುರುತಿಸಿ ಕಳೆದ 3 ವರ್ಷಗಳಿಂದ ಸರಕಾರದ ವತಿಯಿಂದ ಸಿಗುವ ಸವಲತ್ತುಗಳನ್ನು ಅನೇಕ ಕಾರ್ಯಕ್ರಮದ ಮೂಲಕ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಇದರ ಮುಂದುವರೆದ ಭಾಗವಾಗಿ ಉಡುಪಿ ಹೃದಯ ಭಾಗವಾದ ಕ್ಲಾಕ್ ಟವರ್ ನಿಂದ ಜೂಡುಕಟ್ಟೆಯ ಮಾರ್ಗವಾಗಿ ವೀಲ್ ಚೇರ್ ಜಾಥವನ್ನು ಮಾಡಿ ಸಮಾಜ ಜಾಗೃತಿ ಮೂಡಿಸುವ ಕಾರ್ಯ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಇವರ ಮುಂದಾಳತ್ವದಲ್ಲಿ ನಡೆಯಿತು.

ನಗರ ಸಭಾ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್ ಜಾಥಾಕ್ಕೆ ಚಾಲನೆಯನ್ನು ನೀಡಿದರು.

ಈ ಸಂದರ್ಬದಲ್ಲಿ ವಿನಾಯಕ್ ರಾವ್ ಅಧ್ಯಕ್ಷರು ಸೇವಾ ಭಾರತಿ,ಕನ್ಯಾಡಿ.
ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ,ಗಿರೀಶ್ ಆಂಚನ್, ಉದ್ಯಮಿ ಪ್ರಭಾಕರ್,ಸಂತೋಷ್ ಶೆಟ್ಟಿ ಮಾಲೀಕರು ಹೋಟೆಲ್ ಪಂಚರತ್ನ.ವಿಷ್ಣು ಪ್ರಸಾದ್ ಕರಂಬಲ್ಲಿ, ಚಂದ್ರಕಾಂತ್ ದೇವಾಡಿಗ ಮಾಲೀಕರು ತೋನ್ಸೆ ಬಾರ್ ಅಂಡ್ ರೆಸ್ಟೋರೆಂಟ್.
ರಾಯನ್ ಫೆರ್ನಾಂಡಿಸ್ ನಿರ್ದೇಶಕರು ಸೇವಧಾಮ.ನಾರಾಯಣ್ ಬಲ್ಲಾಳ್, ಅಧ್ಯಕ್ಷರು ವ್ಯವಸಾಯ ಸೇವಾ ಸಹಕಾರಿ ಸಂಘ ಕೊಡವೂರು.ಅಶೋಕ್ ಶೆಟ್ಟಿಗಾರ್. ಅಧ್ಯಕ್ಷರು ವಾರ್ಡ್ ಅಭಿವೃದ್ದಿ ಸಮಿತಿ ಕೊಡವೂರು. ಮತ್ತಿತರರು ಹಾಜರಿದ್ದರು.

 
 
 
 
 
 
 
 
 
 
 

Leave a Reply