ರೋಟರಿ ಕ್ಲಬ್ ವತಿಯಿಂದ 278 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಮಣಿಪಾಲ: – ರೋಟರಿ ಕ್ಲಬ್ ಮಣಿಪಾಲ ವತಿಯಿಂದ ಆಯ್ದ 9 ಶಾಲೆಗಳ 10ನೇ ತರಗತಿಯ 278 ವಿದ್ಯಾರ್ಥಿಗಳಿಗೆ ವಿದ್ಯಾಸೇತು ಯೋಜನೆಯಡಿ ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಬ್ರಿಡ್ಜ್ ಕೋರ್ಸಿನ ಪುಸ್ತಕಗಳನ್ನು ಮಣಿಪಾಲ ಪದವಿಪೂರ್ವ ಕಾಲೇಜಿನಲ್ಲಿ ವಿತರಿಸಲಾಯಿತು. ಆಯಾ ಶಾಲೆಗಳ ಮುಖ್ಯಸ್ಥರು ಈ ಪುಸ್ತಕಗಳನ್ನು ಸ್ವೀಕರಿಸಿದರು .

ರೋಟರಿಜಿಲ್ಲೆ 3182 ಸಹಾಯಕ ಗವನ೯ರ್ ಡಾ. ಸುರೇಶ್ ಶೆಣೈ, ಜಿಲ್ಲಾ ಸಾಕ್ಷರ ಸಮಿತಿ ಮುಖ್ಯಸ್ಥ ಸುಬ್ರಮಣ್ಯ ಬಾಸ್ರಿ, ಅಮಿತ್ ಅರವಿಂದ್, ಕರುಣಾಕರ ಶೆಟ್ಟಿ, ರಾಜವರ್ಮ ಅರಿಗ, ಮಾಧವ ಶಾನುಭಾಗ್, ರವಿಕಾಂತ್, ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply