ನನ್ನ ಶಾಸಕ ಅವಧಿಯಲ್ಲಿ ಪ್ರಾರಂಭಿಸಿದ “ಸರ್ವರಿಗೂ ಸೂರು” ಯೋಜನೆ~ಪ್ರಮೋದ್ ಮಧ್ವರಾಜ್

ಉಡುಪಿ ನಗರಸಭೆಯ ವ್ಯಾಪ್ತಿಯಲ್ಲಿ ಸ್ವಂತ ಮನೆಯಿಲ್ಲದ ಮತ್ತು ಆರ್ಥಿಕ ಅಶಕ್ತರಿಗೆ ಪಕ್ಕಾ ಮನೆ ಕಲ್ಪಿಸಲು ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಒಟ್ಟುಗೂಡಿಸಿ ಬಡವರಿಗೂ ಬದುಕುವ  ಮತ್ತು ಪಕ್ಕಾ ಮನೆಯಲ್ಲಿ ವಾಸಿಸುವ ಹಕ್ಕಿದೆ​.

ಸರ್ವರಿಗೂ ಸೂರು ಎನ್ನುವ ಪರಿಕಲ್ಪನೆ ಯನ್ನು ಹೊಂದಿ ನನ್ನ ಶಾಸಕತ್ವದ ಅವಧಿಯಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲದೆ ಬಂದ ಅರ್ಜಿಗಳನ್ನು ಅಧಿಕಾರಿಗಳ ಮೂಲಕ ತನಿಖೆ ನಡೆಸಿ ಪಾರದರ್ಶಕ ಪ್ರಕ್ರಿಯೆಗಳ ಮೂಲಕ ಅರ್ಹ ಫಲಾನುಭವಿ ಗಳನ್ನು ಆಯ್ಕೆ ಮಾಡಿ ಅವರಿಗೆ ಲೇಔಟ್ ಮಾದರಿಯಲ್ಲಿ ಬಹುಮಹಡಿ ಕಟ್ಟಡಲ್ಲಿ ಅಪಾರ್ಟ್ಮೆಂಟ್ ಕಟ್ಟಿಸಿ ಹಸ್ತಾಂತರಿಸುವ ಯೋಜನೆ ರೂಪಿಸಲಾಗಿತ್ತು..

ಈ ಯೋಜನೆಗೆ ನಗರಕ್ಕೆ ಸಮೀಪವಾಗಿರುವ ಹೆರ್ಗಾ ಗ್ರಾಮದಲ್ಲಿ ಸುಮಾರು 10 ಎಕ್ರೆ ಭೂಮಿಯನ್ನು ಗುರುತಿಸಿ, ಅಲ್ಲಿದ್ದ ಕುಮ್ಕಿ ಸಮಸ್ಯೆಯನ್ನು ರಾಜ್ಯ ಸರಕಾರದ ಮೂಲಕ ಪರಿಹರಿಸಿ, ನಿಯಮದ ಪ್ರಕಾರ 50% ಮೊತ್ತವನ್ನು ನಗರಸಭೆ ಪಾವತಿಸಬೇಕಿದ್ದರೂ ಅದನ್ನು ರಾಜ್ಯ ಸರಕಾರದಲ್ಲಿ ಮನವಿ ಮಾಡಿ ಉಚಿತವಾಗಿ ನಗರಸಭೆಗೆ  ಜಾಗವನ್ನು ಈ ಯೋಜನೆಗೆ ಬಳಸಿಕೊಳ್ಳಲು ಹಸ್ತಾಂತರಿಸಲು ಕ್ರಮವಹಿಸಲಾಗಿತ್ತು.

ನಾವು ಜನರಿಗೆ ನೀಡಿದ ಭರವಸೆ ಈಡೇರಿಸಲು ಅಂದು ಕ್ರಮವಹಿಸಿ ಪ್ರಾರಂಭಿಸಿದ ಯೋಜನೆ ಸದ್ಯದಲ್ಲೇ ಫಲಾನುಭವಿಗಳಿಗೆ ಹಸ್ತಾಂತರವಾಗುತ್ತಿರುವ ವಿಚಾರ ನನಗೆ ನೆಮ್ಮದಿ ಮತ್ತು ಸಮಾಧಾನ ತಂದಿದೆ.​ ಈ ಯೋಜನೆಯ ಎಲ್ಲಾ ಫಲಾನುಭವಿಗಳು ಸಂತೋಷದಿಂದ  ಜೀವನ ಸಾಗಿಸುವಂತಾಗಲಿ ಎಂದು ಶುಭ ಹಾರೈಸುತ್ತೇನೆ.

​​​​

 
 
 
 
 
 
 
 
 
 
 

Leave a Reply